ETV Bharat / state

ಜನರ ಸೇವೆ ಮಾಡಲು ರಿಜ್ವಾನ್ ಗೆ ಒಂದು ಅವಕಾಶ ಕೊಡಿ: ಕಾರ್ಪೊರೇಟರ್​ ಉದಯ್ ಕುಮಾರ್ - kannada news

ರಿಜ್ವಾನ್ ಪರ ಕಾರ್ಪೊರೇಟರ್ ಉದಯ್ ​ಕುಮಾರ್​ ಮನೆ ಮನೆಗೆ ತೆರಳಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವಂತೆ ‌ಮನವಿ ಮಾಡಿದರು.

ಬಿಬಿಎಂಪಿ ಸದಸ್ಯ ಉದಯ್ ಕುಮಾರ್ ಮೈತ್ರಿ ಅಭ್ಯರ್ಥಿ ರಿಜ್ವಾನ್ ಪರ ಮತಯಾಚಿಸಿದರು
author img

By

Published : Apr 9, 2019, 9:22 AM IST

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್​​ ಅವರಿಗೆ ಮತ ನಿಡುವಂತೆ ಬಿಬಿಎಂಪಿ ಸದಸ್ಯ, ಒಂದು ಅವಕಾಶ ನೀಡುವಂತೆ ಜನರಲ್ಲಿ ಮನವಿ ಮಾಡಿದರು.

ಬಿಬಿಎಂಪಿ ಸದಸ್ಯ ಉದಯ್ ಕುಮಾರ್, ಮಹದೇವಪುರ ಕ್ಷೇತ್ರದ ಹಗದೂರು ವಾರ್ಡ್​ನಲ್ಲಿ ನೂರಾರು ಕಾರ್ಯಕರ್ತರ ಜೊತೆಗೆ ಮನೆ ಮನೆಗೆ ತೆರಳಿ ರಿಜ್ವಾನ್​ ಪರ ಮತಯಾಚಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಾಣಾಳಿಕೆಯ ಪ್ರಮುಖ ಅಂಶಗಳನ್ನು ಜನರಿಗೆ ವಿವರಿಸಿದರು.

ಬಿಬಿಎಂಪಿ ಸದಸ್ಯ ಉದಯ್ ಕುಮಾರ್ ಮೈತ್ರಿ ಅಭ್ಯರ್ಥಿ ರಿಜ್ವಾನ್ ಪರ ಮತಯಾಚಿಸಿದರು

ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಇದ್ರು ಪಿಸಿ ಮೋಹನ್ ಅವರು ಯಾವುದೇ ರೀತಿಯ ಕೆಲಸ ಮಾಡಿಲ್ಲ. ಹಾಗಾಗಿ ಈ ಬಾರಿ ಜನ ಈಗ ಬದಲವಣೆ ಬಯಸುತ್ತಿದ್ದಾರೆ. ರಸ್ತೆ, ಚರಂಡಿ, ಮೂಲಭೂತ ಸೌಲಭ್ಯ ಒದಗಿಸುವವರಿಗೆ ನಮ್ಮ ಮತ ನೀಡುತ್ತೇವೆ ಎಂದು ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ಅಭ್ಯರ್ಥಿ ಕಳೆದ ಹತ್ತು ವರ್ಷಗಳಿಂದ ಈ ಭಾಗಕ್ಕೆ ಒಂದೇ ಒಂದು ಬೋರ್ ಸಹ ಹಾಕಿಸದೇ ಜನರನ್ನು ನಿರ್ಲಕ್ಷಿಸಿದ್ದಾರೆ ಎಂದು ಕಾರ್ಪೊರೇಟರ್​ ಉದಯ್ ಕುಮಾರ್ ಆರೋಪಿಸಿದರು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.