ಬೆಂಗಳೂರು: ಕೋವಿಡ್-19 ಖಚಿತ ಪ್ರಕರಣಗಳ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ರಾಜ್ಯದಲ್ಲಿರುವ INSACOG ಪ್ರಮಾಣಿತ ಲ್ಯಾಬ್ ಗಳಿಗೆ ಮಾರ್ಗಸೂಚಿಗಳ ಅನ್ವಯ ಕಳುಹಿಸುವುದು ಕಡ್ಡಾಯವಾಗಿದ್ದು, ಅದರಂತೆ ಜಿಲ್ಲೆಗಳಿಂದ ಮಾದರಿಗಳನ್ನು ಗುರುತಿಸಲ್ಪಟ್ಟಿರುವ 10 ಸೆಂಟಿನೆಲ್ ಕೇಂದ್ರಗಳ ಮೂಲಕ INSACOG ಪ್ರಮಾಣಿತ ನಿಮ್ಹಾನ್ಸ್ ಹಾಗೂ ಎನ್.ಸಿ ಪಿ.ಎಸ್ ಪ್ರಯೋಗ ಶಾಲೆಗಳಿಗೆಪ ಕಳುಹಿಸಲು ಸೂಚಿಸಲಾಗಿದೆ.
ಜಿಲ್ಲೆಗಳು ಹಾಗೂ ಜೀನೋಮ್ ಸೀಕ್ವೆಸ್ಟಿಂಗ್‌ಗಾಗಿ ಮಾದರಿಗಳನ್ನು ಕಳುಹಿಸಬೇಕಾಗಿರುವ ಲ್ಯಾಬ್ ಗಳ ಪಟ್ಟಿ ಮಾಡಿದೆ. ಕೆಲವು ಜಿಲ್ಲೆಗಳಿಂದ ಮಾದರಿಗಳು ಸಲ್ಲಿಕೆ ಆಗದೇ ಇರುವುದು ಅಥವಾ ತಡವಾಗಿ ಸಲ್ಲಿಕೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಪ್ರಸ್ತುತ, ಕಸ್ಟರ್ ಮಾದರಿಯಲ್ಲಿ ಕೋವಿಡ್ 19 ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ರೂಪಾಂತರಿಗಳನ್ನು ತಿಳಿಯುವ ನಿಟ್ಟಿನಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ಚಟುವಟಿಕೆಯು ಪಾತ್ರವು ಪ್ರಮುಖವಾಗಿದೆ. ಹೀಗಾಗಿ ಚಟುವಟಿಕೆಯನ್ನು ಮಾರ್ಗಸೂಚಿಗಳ ಅನ್ವಯ ಅನುಷ್ಠಾನಗೊಳಿಸುವ ಸಂಪೂರ್ಣ ಜವಾಬ್ದಾರಿಯು ಆಯಾ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳದ್ದಾಗಿದೆ.
ಈ ಹಿನ್ನೆಲೆಯಲ್ಲಿ ಜೀನೋಮ್ ಸೀಕ್ವೆಸ್ಟಿಂಗ್‌ಗಾಗಿ ಮಾದರಿಗಳನ್ನು ಯಾವುದೇ ಖಾಸಗಿ / INSACOG ಪ್ರಮಾಣಿತವಲ್ಲದ ಪ್ರಯೋಗ ಶಾಲೆಗಳಿಗೆ ಕಳುಹಿಸಲು ಅವಕಾಶವಿರುವುದಿಲ್ಲ. ಮುಂದುವರಿದು, ಭಾರತ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಜೀನೋಮ್ ಸೀಕ್ವೆಸ್ಟಿಂಗ್‌ಗಾಗಿ ಮಾದರಿಗಳನ್ನು INSACOG ಪ್ರಮಾಣಿತ ಪ್ರಯೋಗ ಶಾಲೆಗಳಿಗೆ ಕಡ್ಡಾಯವಾಗಿ ಕಳುಹಿಸಲು ಹಾಗೂ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.