ETV Bharat / state

ಮಹಿಳಾ ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಸಿಹಿ ಸುದ್ದಿ, ಮಾಸಿಕ ಬಸ್ ಪಾಸ್ 105 ರೂ. ಮಾಡಲು ಚಿಂತನೆ

ಇದರಲ್ಲಿ ಶೇ.60ರಷ್ಟು ಫ್ಯಾಕ್ಟರಿ ಮಾಲೀಕರು, ರಾಜ್ಯ ಸರ್ಕಾರ ಶೇ.20ರಷ್ಟು ಹಾಗೂ ಮಹಿಳಾ ಪ್ರಯಾಣಿಕರಿಂದ ತಲಾ ಶೇ.10ರಷ್ಟು ಹಾಗೂ ಸಾರಿಗೆ ಸಂಸ್ಥೆಯಿಂದ ಶೇ.10ರಷ್ಡು ಹಣ ಭರಿಸಲಿವೆ‌‌. ಇದರಿಂದ ಮಾಸಿಕ ಬಸ್ ದರ 1,050 ರೂಪಾಯಿ ಬದಲು ಕೇವಲ 105 ರೂ. ಪಾವತಿಸಿ ಬಸ್ ಪಾಸ್ ಪಡೆಯಬಹುದು..

garments-women-employees-monthly-bus-pass-news
ಮಹಿಳಾ ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಸಿಹಿ ಸುದ್ದಿ
author img

By

Published : Mar 19, 2021, 9:06 PM IST

ಬೆಂಗಳೂರು : ರಾಜ್ಯ ಸರ್ಕಾರದ 'ವನಿತಾ ಸಂಗಾತಿ ಯೋಜನೆ'ಯ ರೂಪುರೇಷೆ ಸಿದ್ದವಾಗುತ್ತಿದೆ. ಇನ್ಮುಂದೆ ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೆ ಮಾಸಿಕ ಬಸ್ ಪಾಸ್ 105 ರೂಪಾಯಿಗೆ ಸಿಗಲಿದೆ.‌

ಮಹಿಳಾ ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಸಿಹಿ ಸುದ್ದಿ..

ಓದಿ: ಥಿಯೇಟರ್​ಗಳಲ್ಲಿ ಶೇ.100ರಷ್ಟು ಆಸನ ಭರ್ತಿ ಮುಂದುವರಿಕೆ.... ಸಿನಿಮಾ ಮಂದಿಗೆ ಸಿಹಿ ಸುದ್ದಿ ನೀಡಿದ ಸಿಎಂ

ಕಳೆದ ಬಜೆಟ್ನಲ್ಲೇ ಈ ಯೋಜನೆಯನ್ನ ಘೋಷಿಸಲಾಗಿತ್ತು. ಆದರೆ, ಕೋವಿಡ್ ಹಿನ್ನೆಲೆ ಆರ್ಥಿಕ ಪರಿಸ್ಥಿತಿಯಿಂದ ಜಾರಿಯಾಗಿರಲಿಲ್ಲ. ಹೀಗಾಗಿ, ಈ ವರ್ಷ ವನಿತಾ ಸಂಗಾತಿ ಯೋಜನೆಯನ್ನ ಜಾರಿ ಮಾಡಲು ಸಕಲ ಸಿದ್ಧತೆ ನಡೆಯುತ್ತಿದೆ. ‌ಇದಕ್ಕಾಗಿ ಸರ್ಕಾರದ ಬಜೆಟ್ ಅನುಮೋದನೆಗಾಗಿ ಬಿಎಂಟಿಸಿ ಸಂಸ್ಥೆ ಕಾಯುತ್ತಿದ್ದು, ಹೊಸ ಆದೇಶ ಬರಲಿದೆ.

ವಿಶೇಷವಾಗಿ ಈ ಯೋಜನೆ ಫಲಾನುಭವಿಗಳಾಗಿ ಇರೋದು ಗಾರ್ಮೆಂಟ್ಸ್​​ನ ಮಹಿಳಾ ಉದ್ಯೋಗಿಗಳು. ಇದರಲ್ಲಿ ಶೇ.60ರಷ್ಟು ಫ್ಯಾಕ್ಟರಿ ಮಾಲೀಕರು, ರಾಜ್ಯ ಸರ್ಕಾರ ಶೇ.20ರಷ್ಟು ಹಾಗೂ ಮಹಿಳಾ ಪ್ರಯಾಣಿಕರಿಂದ ತಲಾ ಶೇ.10ರಷ್ಟು ಹಾಗೂ ಸಾರಿಗೆ ಸಂಸ್ಥೆಯಿಂದ ಶೇ.10ರಷ್ಡು ಹಣ ಭರಿಸಲಿವೆ‌‌. ಇದರಿಂದ ಮಾಸಿಕ ಬಸ್ ದರ 1,050 ರೂಪಾಯಿ ಬದಲು ಕೇವಲ 105 ರೂ. ಪಾವತಿಸಿ ಬಸ್ ಪಾಸ್ ಪಡೆಯಬಹುದು.

ಇದೇ ವರ್ಷ ಯೋಜನೆಯನ್ನ ಜಾರಿ ಮಾಡಲು ಉದ್ದೇಶಿಸಲಾಗಿದೆ. ಇದರ ಪ್ರಕಾರ ಗಾರ್ಮೆಂಟ್ಸ್ ಫ್ಯಾಕ್ಟರಿ ಮುಖಾಂತರವೇ ಬಸ್ ಪಾಸ್ ವಿತರಿಸಲು ಚಿಂತನೆ ನಡೆಸಲಾಗಿದೆ. ಇದರ ಅಂತಿಮ ರೂಪುರೇಷೆಗಳು ಸಿದ್ಧಗೊಂಡ ಬಳಿಕ ಸರ್ಕಾರದ ಕಾರ್ಮಿಕ ಇಲಾಖೆ ಹಾಗೂ ಸಾರಿಗೆ ಇಲಾಖೆ ಸಮಲೋಚಿಸಲಿದೆ. ಪಾಸ್ ಪಡೆಯಲು ಘಟಕಗಳ ಮೂಲಕವೇ ಪರಿಶೀಲನೆ ನಡೆಸಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತೆ.

ವನಿತೆಯರು ಪಾಸ್ ಪಡೆಯಲು ಯಾವೆಲ್ಲ ಡಾಕ್ಯುಮೆಂಟ್ಸ್ ನೀಡಬೇಕು ಎಂಬುದರ ಕುರಿತು ಯೋಜಿಸಿದ್ದು, ಕಂಪನಿ ರಿಜಿಸ್ಟ್ರೇಷನ್ ನಂಬರ್, ಐಡಿ ಕಾರ್ಡ್ ಬೇಕಾಗುತ್ತೆ ಎಂದು ಚೀಫ್ ಟ್ರಾಫಿಕ್ ಮ್ಯಾನೇಜರ್ ರಾಜೇಶ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.