ETV Bharat / state

ಇಂದಿರಾ ಕ್ಯಾಂಟೀನ್​ ಪಕ್ಕದಲ್ಲೇ ಕಸ ವಿಂಗಡನೆ: ಊಟಕ್ಕೆ ಹೋಗಲು ಸಾರ್ವಜನಿಕರು ಹಿಂದೇಟು

ಕೆ.ಆರ್ ಪುರಂನ ಎನ್​ಆರ್​ಐ ಬಡಾವಣೆಯ ಇಂದಿರಾ ಕ್ಯಾಂಟೀನ್ ಪಕ್ಕದಲ್ಲೇ ಕಸ ವಿಂಗಡಣೆ ಮಾಡುತ್ತಿದ್ದು, ದುರ್ವಾಸನೆಯಿಂದ ಊಟ ಮಾಡಲು ಬರಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ.

ಇಂದಿರಾ ಕ್ಯಾಟೀನ್
author img

By

Published : Nov 8, 2019, 4:32 AM IST

ಬೆಂಗಳೂರು: ಕೆ.ಆರ್ ಪುರಂನ ಎನ್​ಆರ್​ಐ ಬಡಾವಣೆಯ ಇಂದಿರಾ ಕ್ಯಾಂಟೀನ್ ಪಕ್ಕದಲ್ಲೇ ಕಸ ವಿಂಗಡಣೆ ಮಾಡುವುದರಿಂದ ಇಂದಿರಾ ಕ್ಯಾಂಟಿನ್​ಗೆ ಬರುವ ಜನರು ಮೂಗು ಮುಚ್ಚಿಕೊಂಡು ಊಟ ಮಾಡುವಂತಾಗಿದೆ.

ಎನ್​ಆರ್​ಐ ಬಡಾವಣೆ ಇಂದಿರಾ ಕ್ಯಾಂಟೀನ್

ಹೌದು, ಕೆ ಆರ್ ಪುರಂನ ರಾಮಮೂರ್ತಿನಗರದ ಎನ್​ಆರ್​ಐ ಬಡಾವಣೆಯ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿ ದಿನನಿತ್ಯ ಬಿಬಿಎಂಪಿ ವಾಹನಗಳು ಮಹದೇವಪುರ ಹಾಗೂ ಹೊರಮಾವು ವಾರ್ಡ್​ನಲ್ಲಿ ಕಸ ಸಂಗ್ರಹಿಸಿ ಎನ್​ಆರ್​ಐ ಬಡಾವಣೆಯಲ್ಲಿ ಕಸ ವಿಂಗಡಣೆ ಮಾಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್ ಬಳಿ ಮಹದೇವಪುರ, ಹೊರಮಾವು ವಾರ್ಡ್​ಗಳಿಂದ ಕಸವನ್ನು ತಂದು ಇಲ್ಲಿ ಸುರಿಯುತ್ತಿದ್ದಾರೆ.

ಇನ್ನು ಇಲ್ಲಿ ಪ್ರತಿನಿತ್ಯ ನೂರಾರು ಗಾಡಿಗಳು ಕಸ ತಂದು ಸುರಿಯುತ್ತಿರುವುದು ಇಂದಿರಾ ಕ್ಯಾಂಟೀನ್​ಗೆ ಊಟ ಮಾಡಲು ಬರುವಂತಹ ಗ್ರಾಹಕರಿಗೆ ದುರ್ವಾಸನೆ ಬೀರುತ್ತಿದೆ. ಹೀಗಾಗಿ ಕ್ಯಾಂಟೀನ್​ಗೆ ಬರಲು ಸಾರ್ವಜನಿಕರು ಹಿಂದೇಟು ಹಾಕುವಂತಾಗಿದೆ.

ಎನ್​ಆರ್​ಐ ಬಡಾವಣೆಯ ಮುಖ್ಯರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್​ಗೆ ದಿನನಿತ್ಯ ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಊಟ ಮಾಡಲು ಬಂದರೆ, ಈ ಕಸದ ದುರ್ವಾಸನೆಯಿಂದ ಊಟ ತಿನ್ನಲು ಆಗುತ್ತಿಲ್ಲ. ಕಸ ಇಲ್ಲಿ ಡಂಪ್ ಮಾಡುವುದರಿಂದ ಸೊಳ್ಳೆಗಳ ಕಾಟ ಜಾಸ್ತಿಯಾಗಿ ಡೆಂಗ್ಯೂ, ಮಲೇರಿಯಾದಂತ ಖಾಯಿಲೆಗಳು ಬರುತ್ತಿವೆ ಎಂದು ಗ್ರಾಹಕರು ಹೇಳುತ್ತಿದ್ದಾರೆ.

ಸರಿಯಾಗಿ ಕಸ ವಿಲೇವಾರಿ ಮಾಡದೆ ಜನರ ಆರೋಗ್ಯದ ಜೊತೆ ಆಟವಾಡುತ್ತಿರುವ ಪಾಲಿಕೆ ಅಧಿಕಾರಿಗಳು, ಈಗ ಹಸಿದವರು ಊಟ ಮಾಡಲು ಸಹ ಆಗದಂತೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Intro:ಕೆಆರ್ ಪುರ.

ಕ್ಯಾಂಟೀನ್ ಪಕ್ಕದಲ್ಲೇ ಕಸ ವಿಂಗಡಣೆ, ದುರ್ವಾಸನೆಯಿಂದ
ಊಟ ಮಾಡಲು ಬರಲು
ಸಾರ್ವಜನಿಕರು ಹಿಂದೇಟು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಡವರು ಮಧ್ಯಮ ವರ್ಗದವರು ಯಾರು ಹಸಿದ ಹೊಟ್ಟೆಯಲ್ಲಿ ಮಲಗಬಾರದೆಂದು ಕಡಿಮೆ ದರದಲ್ಲಿ ಊಟ ಸಿಗಲೆಂದು ಇಂದಿರಾ ಕ್ಯಾಂಟೀನ್ ನ್ನು ಸ್ಥಾಪಿಸಿದರು. ಆದರೆ ಇಲ್ಲೊಂದು ಇಂದಿರಾ ಕ್ಯಾಂಟೀನ್ ಪಕ್ಕದಲ್ಲೇ ಕಸ ವಿಂಗಡಣೆ ಮಾಡುವುದರಿಂದ ಇಂದಿರಾ ಕ್ಯಾಂಟಿನ್ ಗೆ ಬರುವ ಜನರು ಮೂಗು ಮುಚ್ಚಿಕೊಂಡು ಊಟ ಮಾಡುವಂತಾಗಿದೆ.

ಹೀಗೆ ಇಂದಿರಾ ಕ್ಯಾಂಟೀನ್ ನಲ್ಲಿ ಮಧ್ಯಾಹ್ನದ ಊಟ ಸವಿಯುತ್ತಿರುವ ಗ್ರಾಹಕರು, ಇನ್ನೊಂದೆಡೆ ೧೦೦ ಮೀ. ಅಂತರದಲ್ಲಿ ಬಿಬಿಎಂಪಿಯ ವಾಹನಗಳು ಕಸ ತಂದು ಸುರಿಯುತ್ತೀರುವುದು..ಈ ದೃಶ್ಯಗಳು ಕಂಡು ಬಂದಿದ್ದು ಕೆಆರ್ ಪುರಂನ ರಾಮಮೂರ್ತಿನಗರದ ಎನ್ ಆರ್ ಐ ಬಡಾವಣೆಯ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿ. ಹೌದು ದಿನನಿತ್ಯ ಬಿಬಿಎಂಪಿ ವಾಹನಗಳು ಮಹದೇವಪುರ ಹಾಗೂ ಹೊರಮಾವು ವಾರ್ಡನಲ್ಲಿ ಕಸ ಸಂಗ್ರಹಿಸಿ ಎನ್ ಆರ್ ಐ ಬಡಾವಣೆಯಲ್ಲಿ ಕಸ ವಿಂಗಡಣೆ ಮಾಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್ ಬಳಿ ಮಹದೇವಪುರ, ಹೊರಮಾವು ವಾರ್ಡಗಳಿಂದ ಕಸವನ್ನು ತಂದು ಇಲ್ಲಿ ಸುರಿಯುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಓಡಾಡಲು ತೊಂದರೆಯಾಗುತ್ತಿದೆ. ಅಲ್ಲದೆ ಪ್ರತಿನಿತ್ಯ ಸಾವಿರಾರು ಜನ ಓಡಾಡುವಂತ ಸ್ಥಳವಾದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಬೇರೆಡೆಗೆ ಸ್ಥಳಾಂತರಿಸುವಂತೆ ಜಯ ಕರ್ನಾಟಕ ಸಂಘಟನೆಯ ಕ್ಷೇತ್ರಾಧ್ಯಕ್ಷ ಮನವಿ ಮಾಡಿದರು.

Body:ಇನ್ನೂ ಇಲ್ಲಿ ಪ್ರತಿನಿತ್ಯ ನೂರಾರು ಗಾಡಿಗಳು ಕಸ ತಂದು ಸುರಿಯುತ್ತಿರುವುದು ಇಂದಿರಾ ಕ್ಯಾಂಟೀನ್ ಗೆ ಊಟ ತಿನ್ನಲು ಬರುವಂತಾ ಗ್ರಾಹಕರಿಗೆ ದುರ್ವಾಸನೆ ಬೀರುತ್ತಿದ್ದು ಕ್ಯಾಂಟೀನ್ ಗೆ ಬರುಲು ಸಾರ್ವಜನಿಕರು ಹಿಂದೇಟು ಹಾಕುವಂತಾಗಿದೆ. ಎನ್ ಆರ್ ಐ ಬಡಾವಣೆಯ ಮುಖ್ಯರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ದಿನಾಲೂ ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಊಟ ಮಾಡಲು ಬಂದರೆ ಈ ಕಸದ ದುರ್ವಾಸನೆಯಿಂದ ಊಟ ತಿನ್ನಲು ಆಗುತ್ತಿಲ್ಲ. ಕಸ ಇಲ್ಲಿ ಡಂಪ್ ಮಾಡುವುದರಿಂದ ಸೊಳ್ಳೆಗಳ ಕಾಟ ಜಾಸ್ತಿಯಾಗಿ ಡೆಂಗ್ಯೂ ಮಲೇರಿಯಾ ಖಾಯಿಲೆಗಳು ಬರುತ್ತಿವೆಂದು ಗ್ರಾಹಕರೊಬ್ಬರು ತಿಳಿಸಿದರು.

Conclusion:ಸರಿಯಾಗಿ ಕಸ ವಿಲೇವಾರಿ ಮಾಡದೇ ಜನರ ಆರೋಗ್ಯದ ಜೊತೆ ಆಟ ವಾಡುತ್ತಿರುವ ಪಾಲಿಕೆ ಅಧಿಕಾರಿಗಳು ಈಗ ಹಸಿದವರು ಊಟ ಮಾಡಲು ಸಹ ಆಗದಂತೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ .

ಧರ್ಮರಾಜು ಎಂ. ಕೆಆರ್ ಪುರ

ಬೈಟ್೧: ಕಲ್ಕೆರೆ ಜಿ.ಮಾದೇಶ್ ಗೌಡ, ಜಯ ಸಂಘಟನೆಯ ಕ್ಷೇತ್ರಾಧ್ಯಕ್ಷ

ಬೈಟ್೨: ಜನಾರ್ಧನ್, ಗ್ರಾಹಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.