ಬೆಂಗಳೂರು: ಕೋವಿಡ್ ಮಧ್ಯೆಯೂ ಸಾರ್ವಜನಿಕರು ಮನೆಗಳಲ್ಲಿಯೇ ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸುತ್ತಿದ್ದಾರೆ. ಕೆಲವರು ಮಾತ್ರ ಕೋವಿಡ್ ನಿಯಮ ಪಾಲಿಸಿ ದೇಗುಲಗಳಿಗೆ ಬಂದು ವಿಘ್ನವಿನಾಶಕನ ದರ್ಶನ ಪಡೆಯುತ್ತಿದ್ದಾರೆ.
ಬಸವನಗುಡಿಯ ಸುಪ್ರಸಿದ್ಧ ದೊಡ್ಡಗಣಪತಿ ದೇಗುಲದಲ್ಲಿ ಇಂದು ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಬೆಳಗ್ಗೆ ಆರು ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗಣಪನಿಗೆ ಬೆಣ್ಣೆ ಅಲಂಕಾರದ ಜತೆ ವಿವಿಧ ರೀತಿಯ ಅಲಂಕಾರಗಳನ್ನು ಮಾಡಲಾಗಿತ್ತು.
ಇದನ್ನೂ ಓದಿ: ಗಣೇಶೋತ್ಸವ: ಬಾಲ ಗಣಪನೊಂದಿಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತುಕತೆ
ದೊಡ್ಡ ಗಣೇಶನಿಗೆ ಬೆಳ್ಳಿ ಕವಚ ಹೂವಿನ ಅಲಂಕಾರ ಮಾಡಲಾಗಿದ್ದು, ಭಕ್ತರು ದೇವರಿಗೆ ಗರಿಕೆ ಸಮರ್ಪಿಸುತ್ತಿದ್ದಾರೆ. ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಯಾವುದೇ ಸೇವೆ, ತೀರ್ಥ ಪ್ರಸಾದ ವಿತರಣೆಗೆ ಅವಕಾಶವಿಲ್ಲ.