ETV Bharat / state

ಎತ್ತಿನಹೊಳೆ ಯೋಜನೆ ಗಲಾಟೆ, ಜೆಡಿಎಸ್ ಧರಣಿ ಸೇರಿದಂತೆ ಇಂದು ಏನೆಲ್ಲಾ ಆಯ್ತು.. ಕಲಾಪದ ಹೈಲೈಟ್ಸ್​ಗಳು ಇಲ್ಲಿವೆ! - speaker vishweshwara hegde kageri

ಇಂದು ವಿಧಾನ ಸಭೆಯಲ್ಲಿ ಆಡಳಿತ ಪಕ್ಷದ ಹಾಗೂ ವಿರೋಧ ಪಕ್ಷದ ಮುಖಂಡರ ನಡುವೆ ಭಾರೀ ಚರ್ಚೆ ನಡೆಯಿತು. ಹಲವಾರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಿಜೆಪಿ ತನ್ನದೇ ಆದ ರೀತಿಯಲ್ಲಿ ವಿವರಿಸಿದರೆ ವಿರೋಧ ಪಕ್ಷಗಳು ತೀವ್ರವಾಗಿ ಆಡಳಿತದ ನಡೆಗಳನ್ನು ಪ್ರಶ್ನಿಸಿದವು.

full details of Vidhana Sabha session
ಎತ್ತಿನಹೊಳೆ ಯೋಜನೆ ಗಲಾಟೆ, ಜೆಡಿಎಸ್ ಧರಣಿ ಸೇರಿದಂತೆ ಇಂದು ಏನೇನೆಲ್ಲಾ ಆಯ್ತು
author img

By

Published : Sep 15, 2021, 12:09 AM IST

ಬೆಂಗಳೂರು: ಅಭಿವೃದ್ಧಿ ಕಾಮಗಾರಿ ವಿಳಂಬ ವಿಚಾರವಾಗಿ ಚರ್ಚೆಗೆ ಅವಕಾಶ ಕೋರಿ ಸಲ್ಲಿಸಿದ್ದ ನಿಲುವಳಿ ಸೂಚನೆ ತಿರಸ್ಕಾರ, ಜೆಡಿಎಸ್ ಸದಸ್ಯರ ಧರಣಿ, ಎತ್ತಿನಹೊಳೆ ಯೋಜನೆ ವಿಷಯ ಪ್ರಸ್ತಾಪದ ವೇಳೆ ಸಚಿವ ಜೆ.ಸಿ.ಮಾಧುಸ್ವಾಮಿ- ಮಾಜಿ ಸಚಿವ ಡಾ.ಜಿ. ಪರಮೇಶ್ವರ್ ನಡುವೆ ಮಾತಿನ ಚಕಮಕಿ, ಸಂತಾಪ ಸೂಚನೆ ವೇಳೆ ಸಿಎಂ ಗರಂ, ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಧೇಯಕ ತಿದ್ದುಪಡಿ ಸೇರಿದಂತೆ ಹತ್ತು ವಿಧೇಯಕಗಳ ಮಂಡನೆ ಸೇರಿದಂತೆ ಹಲವು ವಿಚಾರಗಳು ವಿಧಾನಸಭೆಯಲ್ಲಿ ಇಂದಿನ ಹೈಲೈಟ್ಸ್ ಗಳು.

ದೀಪಾಂಜಲಿ ನಗರದಲ್ಲಿ ವಾಸಿಸುವ ದಲಿತರಿಗೆ ಸೌಕರ್ಯ ಒದಗಿಸಿ ಎಂದ ಪಿ ರಾಜೀವ್​

ಸದನ ಇಂದು ಬೆಳಗ್ಗೆ ಆರಂಭವಾಗುತ್ತಿದ್ದಂತೆ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ನ ಹಿರಿಯ ಮುಖಂಡ ಆಸ್ಕರ್ ಫರ್ನಾಂಡೀಸ್ ಹಾಗೂ ಚಿತ್ರ ನಟ ಸಂಚಾರಿ ವಿಜಯ್ ಅವರಿಗೆ ಸಂತಾಪ ಸೂಚಿಸಲಾಯಿತು.ಸದನದ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ನಿರ್ಣಯವನ್ನು ಮಂಡಿಸಿದರು. ಸಂತಾಪ ನಿರ್ಣಯದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತಿತರ ನಾಯಕರು ಮಾತನಾಡಿದರು.

ವಿಧಾನಸಭೆ ಕಲಾಪ

ಸಿಎಂ ಸಿಟ್ಟು:

ಸಂತಾಪ ನಿರ್ಣಯದ ಮೇಲೆ ಸಿಎಂ ಮಾತನಾಡುತ್ತಿದ್ದ ವೇಳೆ ವಿಧಾನಸಭೆ ಸಚಿವಾಲಯದ ಅಧಿಕಾರಿಯೊಬ್ಬರು ಅಡ್ಡ ನಿಂತರು. ಈ ವೇಳೆ ಕೋಪಗೊಂಡ ಸಿಎಂ, ಸ್ವಲ್ಪ ಸರಿಯಪ್ಪಾ ಎಂದರಲ್ಲದೆ, ಯಾರಾದರೂ ಮಾತನಾಡುವಾಗ ಅಡ್ಡ ನಿಲ್ಲುವ ಪ್ರವೃತ್ತಿ ಬಿಡಿ ಎಂದು ಸಿಟ್ಟಾದರು.

ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಒಬ್ಬ ಮುನ್ಸಿಪಾಲ್‌ ಸದಸ್ಯನಾಗಿ ರಾಷ್ಟ್ರ ನಾಯಕನ ಮಟ್ಟಿಗೆ ಅವರು ರಾಜಕಾರಣದಲ್ಲಿ ಬೆಳದಿದ್ದರು. ಟಿಎ ಪೈ ಅಂತ ಘಟಾನುಘಟಿಯನ್ನು ಎದುರಿಸಿ ಸೋಲಿಸಿದ್ರು ಎಂದು ನೆನಪಿಸಿಕೊಂಡರು.

ವಿಧಾನಸಭೆ ಕಲಾಪ

41 ವರ್ಷಗಳ ಸುದೀರ್ಘವಾಗಿ ರಾಷ್ಟ್ರ ರಾಜಕಾರಣದಲ್ಲಿದ್ದ ಫರ್ನಾಂಡಿಸ್‌ ಅವರು ಎಲ್ಲರನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದವರು. ಕಾಂಗ್ರೆಸ್‌ಗೆ ಬಂದು ಬಹಳ ಒಳ್ಳೆ ಕೆಲಸ ಮಾಡಿದ್ದೀರಿ. ನಿಮಗೆ ಈ ಪಕ್ಷದಲ್ಲಿ ಉಜ್ವಲವಾದ ಭವಿಷ್ಯ ಇದೆ ಎಂದು ಹೇಳಿದ್ದರು. ನಿಷ್ಠಗೆ ಇನ್ನೊಂದು ಹೆಸರೇ ಫರ್ನಾಂಡಿಸ್‌ ಎಂದು ಗುಣಗಾನ ಮಾಡಿದರು.

ಜೆಡಿಎಸ್ ಸದಸ್ಯ ಬಂಡೆಪ್ಪ ಕಾಶೆಂಪೂರ್, ಕಾಂಗ್ರೆಸ್ ಸದಸ್ಯ ಎಚ್.ಕೆ. ಪಾಟೀಲ್, ಕೆ.ಜೆ. ಜಾರ್ಜ್ ಮತ್ತಿತರ ಸದಸ್ಯರು ಸಂತಾಪ ನಿರ್ಣಯದ ಮೇಲೆ ಮಾತನಾಡಿದರು.

ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಮಾತಿನ ಚಕಮಕಿ : ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ ಹಾಗೂ ಮಾಜಿ ಸಚಿವ ಡಾ. ಜಿ ಪರಮೇಶ್ವರ್ ನಡುವೆ ಮಾತಿನ ಚಕಮಕಿ ನಡೆದ ಘಟನೆಯೂ ಇಂದು ವಿಧಾನಸಭೆಯಲ್ಲಿ ನಡೆಯಿತು.

ಇಚ್ಛಾಶಕ್ತಿಯಿದ್ದರೆ ಯೋಜನೆ ಮಾಡಬಹುದು:

ಇಬ್ಬರೂ ನಾಯಕರು ಏರು ಧ್ವನಿಯಲ್ಲಿ‌ ಮಾತನಾಡಿದರು. ಯೋಜನೆಯನ್ನೇ ರಿಜೆಕ್ಟ್ ಮಾಡ್ತೇವೆ ಅಂದರೆ ಹೇಗೆ? ಎಂದು ಪರಮೇಶ್ವರ್ ಪ್ರಶ್ನಿಸಿದರು.12,900 ಕೋಟಿ ರೂ.ಗಳಲ್ಲಿ ಯೋಜನೆ ಮುಗಿಸಬಹುದು. ಆದರೆ, ಈ ಯೋಜನೆಗೆ 23 ಸಾವಿರ ಕೋಟಿ ರೂ. ಹೆಚ್ಚುವರಿ ಏಕೆ?. ನಿಮಗೆ ಇಚ್ಛಾಶಕ್ತಿಯಿದ್ದರೆ ಯೋಜನೆ ಮಾಡಬಹುದು ಎಂದು ಸಚಿವ ಮಾಧುಸ್ವಾಮಿ ವಿರುದ್ಧ ಗರಂ ಆದರು.

ಯೋಜನೆಗೆ ನಾವು ಅವಕಾಶ ಕೊಟ್ಟಿದ್ದೇವೆ. ಹಣವಿಲ್ಲದಿದ್ದರೂ ರೈತರನ್ನು ನಾವು ಒಪ್ಪಿಸಿದ್ದೇವೆ. ಯೋಜನೆ ಕಾಮಗಾರಿಗೆ ಅನುವು ಮಾಡಿದ್ದೇವೆ. ಆದರೆ, ಕೊರಟಗೆರೆಯಲ್ಲಿ‌ ಸಮಸ್ಯೆ ಶುರುವಾಗಿದೆ. ಹಾಗಾಗಿ, ಯೋಜನೆಗೆ ತೊಡಕಾಗುತ್ತಿದೆ ಎಂದು ಪರಮೇಶ್ವರ್ ಹೇಳಿಕೆಗೆ ಮಾಧುಸ್ವಾಮಿ ತಿರುಗೇಟು ನೀಡಿದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಯಿತು.

ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿ, ಖಂಡಿತವಾಗಿ ಸೀವೇಜ್ ನೀರು ಕೊಡಬಹುದು. ಯೋಜನೆಯ ಬಗ್ಗೆ ಮಾಹಿತಿ ಪಡೆಯುತ್ತೇನೆ. ಕೋಲಾರ, ಚಿಕ್ಕಬಳ್ಳಾಪುರ ಜನರಿಗೆ ನೀರು‌ ಕೊಡುತ್ತೇವೆ‌. ನಾನೂರು ಎಂಎಲ್​ಡಿ ನೀರು ಸಿಗುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ವಿಧಾನಸಭೆ ಕಲಾಪ

ಜೆಡಿಎಸ್ ಧರಣಿ :

ಅಭಿವೃದ್ಧಿ ಕಾಮಗಾರಿ ವಿಳಂಬ ವಿಚಾರವಾಗಿ ಚರ್ಚೆಗೆ ಅವಕಾಶ ಕೋರಿ ಸಲ್ಲಿಸಿದ್ದ ನಿಲುವಳಿ ಸೂಚನೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿರಸ್ಕರಿಸಿದ್ದರಿಂದ ಜೆಡಿಎಸ್ ಸದಸ್ಯರು ಧರಣಿ ನಡೆಸಿದರು.

ನಿಯಮ 60ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಮನವಿ ಸಲ್ಲಿಸಿದ್ದರು. ಆದರೆ, ನಿಲುವಳಿ ಸೂಚನೆಯನ್ನು ಸ್ಪೀಕರ್ ತಿರಸ್ಕರಿಸಿದರು. ನಿಯಮ 69 ಕ್ಕೆ ಬರೆದುಕೊಂಡುವಂತೆ ಸೂಚನೆ ನೀಡಿದರು. ‌ಆದರೆ, ಇದಕ್ಕೆ ಒಪ್ಪದೆ ಸದನದ ಬಾವಿಗೆ ಇಳಿದು ಜೆಡಿಎಸ್ ಸದಸ್ಯರು ಧರಣಿ ನಡೆಸಿದರು.

ಸಿಟ್ಟಾದ ಸ್ಪೀಕರ್ :

ಇದಕ್ಕೆಲ್ಲಾ ಧರಣಿ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಮೊದಲು ಹೇಳುವುದನ್ನು ಕೇಳಿ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಸಿಟ್ಟಾದರು. ನಿಯಮ 69ರ ಅಡಿ ಬದಲಿಸಿ ಮತ್ತೆ ಬರೆದುಕೊಡಿ, ಅವಕಾಶ ನೀಡುವುದಾಗಿ ಸ್ಪೀಕರ್ ಹೇಳಿದಾಗ ಜೆಡಿಎಸ್ ಸದಸ್ಯರು ಧರಣಿಯನ್ನು ವಾಪಸ್​​ ಪಡೆದರು.

ರಾಜಕೀಯ ದ್ವೇಷ, ಅನುದಾನ ತಾರತಮ್ಯ ಮಾಡಿಲ್ಲ :

ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾವು ಯಾವುದೇ ರಾಜಕೀಯ ದ್ವೇಷ, ಅನುದಾನ ತಾರತಮ್ಯ ಮಾಡಿಲ್ಲ ಎಂದು ಹೇಳಿದರು. ಹೊಳೆನರಸೀಪುರ ಪುರಸಭೆ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಶಾಸಕ ಹೆಚ್‌.ಡಿ ರೇವಣ್ಣ ಅಸಮಾಧಾನಕ್ಕೆ ಸಿಎಂ ಪ್ರತಿಕ್ರಿಯೆ ನೀಡಿದರು.

ಹೊಳೆನರಸೀಪುರ ಪುರಸಭೆಗೆ ಎಸ್ಎಸ್​​ಇ ಯೋಜನೆಯಡಿ ಅನುದಾನ ಮಂಜೂರಾಗಿದೆ. 2019 ರಲ್ಲಿ 18 ಕೋಟಿ ವಿಶೇಷ ಅನುದಾನ ಪಡೆದುಕೊಂಡಿದ್ದಾರೆ. 2019 ರಲ್ಲಿ ನೆರೆ ಬಂದಾಗ ಯಾವ ನಗರಕ್ಕೂ ಅನುದಾನ ಒದಗಿಸಲು ಸಾಧ್ಯವಾಗಿರಲಿಲ್ಲ. ನಾವು ಯಾವುದಕ್ಕೂ ತಾರತಮ್ಯ ಮಾಡಲಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಹೊಳೆನರಸೀಪುರ ನಮಗೆ ಆತ್ಮೀಯ ಆಗಿರುವ ಕ್ಷೇತ್ರ. ನಾವು ರಾಜಕೀಯ ದ್ವೇಷ ಮಾಡಲಿಲ್ಲ. ಹೊಳೆನರಸೀಪುರದಲ್ಲಿ ಸ್ಥಗಿತವಾಗಿರುವ ಕಾಮಗಾರಿಗಳಿಗೆ ಹಣ ಮಂಜೂರು ಮಾಡ್ತೇವೆ. ರೇವಣ್ಣ ಅವರು ಯಾವ ಸ್ಟೈಲ್​​ನಲ್ಲಿ ಅನುದಾನ ಕೇಳ್ತಾರೆ ಅಂತ ನಮಗೂ ಗೊತ್ತಿದೆ. ಎಲ್ಲ ಸರ್ಕಾರಗಳು ಇರುವಾಗಲೂ ರೇವಣ್ಣ ಇದೇ ಸ್ಟೈಲ್​​ನಲ್ಲಿ ಹಣ ಕೇಳೋದು ಎಂದು ಕಾಲೆಳೆದರು.

ಇದಕ್ಕೂ ಮುನ್ನ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ ರೇವಣ್ಣ, ಅನುದಾನದಲ್ಲಿ ತಾರತಮ್ಯ ಮಾಡುವ ಮೂಲಕ‌ ರಾಜಕೀಯ ದ್ವೇಷ ಮಾಡ್ತಿದೀರಿ. ರಾಜಕೀಯ ದ್ವೇಷ ಮಾಡ್ತೀರಿ ಅಂದ್ರೆ ಅದಕ್ಕೆ ನಾವೂ ರೆಡಿ ಇದೀವಿ. ಅಭಿವೃದ್ಧಿ ಸ್ಥಗಿತ ಆಗಿದೆ. ಸದನದಲ್ಲಿ ಚರ್ಚೆಗೆ ಅವಕಾಶ ಕೊಡಿ ಎಂದು ಸವಾಲು ಹಾಕಿದರು. ಇದಕ್ಕೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ನಾವೂ ಚರ್ಚೆಗೆ ರೆಡಿ ಇದ್ದೇವೆ. ಯಾರ್ಯಾರ ಕಾಲದಲ್ಲಿ ಏನೇನಾಗಿದೆ ಅಂತ ಮಾಹಿತಿ ತೆಗೆದು ಚರ್ಚೆ ಮಾಡೋಣ ಎಂದು ಪ್ರತಿ ಸವಾಲು ಹಾಕಿದರು.

ಕಾಂಗ್ರೆಸ್ ನಿಲುವಳಿ ಸೂಚನೆ:

ಇದಕ್ಕೂ ಮುನ್ನ ಪ್ರತಿಪಕ್ಷದ ನಾಯಕರಿಗೆ ಮಾತನಾಡಲು ಹೆಚ್ಚು ಸಮಯ ಕೊಡಬೇಕು ಎಂದು ಸ್ಪೀಕರ್ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿಕೊಂಡ ಪ್ರಸಂಗವೂ ನಡೆಯಿತು. ಬೆಲೆ ಏರಿಕೆ ಕುರಿತಾದ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್ ನಿಲುವಳಿ ಸೂಚನೆ ಮಂಡನೆ ಮಾಡಿದ್ದು, ಅದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನಿಯಮ 69 ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದರು.

ನಾಳೆ ಚರ್ಚೆಗೆ ಅವಕಾಶ ಕೊಡುವ ಭರವಸೆ ನೀಡಿದ ಸ್ಪೀಕರ್, ಕಾಲಮಿತಿಯಲ್ಲಿ ಚರ್ಚೆ ನಡೆಸುವಂತೆ ಮನವಿ ಮಾಡಿದರು. ಆಗ ಸಿದ್ದರಾಮಯ್ಯ ಮಾತನಾಡಿ, ರಾಜ್ಯದ ಹಿತದೃಷ್ಟಿಯಿಂದ ಈ ವಿಚಾರವನ್ನು ಚರ್ಚೆ ನಡೆಸಲಿದ್ದೇವೆ. ಇದಕ್ಕೆ ಯಾವುದೇ ಕಾಲಮಿತಿ ಹಾಕದಂತೆ ಮನವಿ ಮಾಡಿದರು. ವಿಪಕ್ಷ ನಾಯಕರ ಹಕ್ಕು ಮೊಟಕುಗೊಳುಸಬಾರದು, ನಿಮ್ಮ ಕಾಲದಲ್ಲಿ ಹೀಗೆಲ್ಲಾ ಆಗಬಾರದು ಬೊಮ್ಮಾಯಿ‌ ಅವರೇ ಎಂದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕರ ಸಮಯ ಎಷ್ಟು ಬೇಕಾದರೂ ತೆಗೆದುಕೊಳ್ಳಲಿ, ಆದರೆ ವಿಪಕ್ಷ ನಾಯಕರ ಸಮಯದ ಬಳಿಕ ಸಿದ್ದರಾಮಣ್ಣನ ಟೈಮ್ ಅಂತಾ ಬೇರೆ ಇರುತ್ತದೆ, ಅದು ಬೇಡ ಎಂದು ಹಾಸ್ಯ ಚಟಾಕಿ ಹಾರಿಸಿದರು.

ವಿಧೇಯಕಗಳ ಮಂಡನೆ :

ಮತ್ತೆ ಮಧ್ಯಾಹ್ನ ಸದನ ಆರಂಭವಾದಾಗ, ಒಟ್ಟು 10 ವಿಧೇಯಕಗಳನ್ನು ಮಂಡನೆ ಮಾಡಲಾಯಿತು. ನೀರು ಸರಬರಾಜು ಮತ್ತು ಗ್ರಾಮಾಂತರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ, 2021, ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021, ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ (ತಿದ್ದುಪಡಿ) ವಿಧೇಯಕ, 2021, ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ) ವಿಧೇಯಕ 2021, ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ, 2021, ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ, 2021, ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, 2021, ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021, ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕ 2021, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಮಂಡನೆಯಾಗಿದೆ.

ಪೂರಕ ಅಂದಾಜು ಮಂಡನೆ :

ಸುಮಾರು 10,265.33 ಕೋಟಿ ಪೂರಕ ಅಂದಾಜನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸದನದಲ್ಲಿ ಮಂಡಿಸಿದರು.‌

  • ಸದನದಲ್ಲಿ ಮಂಡನೆಯಾದ ಪೂರಕ ಅಂದಾಜುಗಳ ವಿವರ ಇಲ್ಲಿದೆ:
  • ಕೃಷಿ ಮತ್ತು ತೋಟಗಾರಿಕೆ - 2.98 ಕೋಟಿ ರೂ.
  • ಪಶು ಸಂಗೋಪನೆ ಹಾಗೂ ಮೀನುಗಾರಿಕೆ - 37.98 ಕೋಟಿ ರೂ.
  • ಮೂಲಭೂತ ಸೌಕರ್ಯ ಅಭಿವೃದ್ಧಿಗೆ - 20 ಕೋಟಿ ರೂ.
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ - 2858 ಕೋಟಿ ರೂ.
  • ಸಮಾಜ ಕಲ್ಯಾಣ - 15.75 ಕೋಟಿ ರೂ.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ - 27.46 ಕೋಟಿ ರೂ.
  • ಆಹಾರ ಇಲಾಖೆ -1700 ಕೋಟಿ ರೂ.
  • ಕಂದಾಯ ಇಲಾಖೆ - 1476 ಕೋಟಿ ರೂ.
  • ವಸತಿ - 17.86 ಕೋಟಿ ರೂ.
  • ಶಿಕ್ಷಣ - 78.11 ಕೋಟಿ ರೂ.
  • ನಗರಾಭಿವೃದ್ಧಿ - 460.32 ಕೋಟಿ ರೂ.
  • ಆರೋಗ್ಯ ಇಲಾಖೆ - 2155 ಕೋಟಿ ರೂ.
  • ಕಾರ್ಮಿಕ ಇಲಾಖೆ- 440 ಕೋಟಿ ರೂ.
  • ಶಾಸಕರ ಭವನದಲ್ಲಿ ಸಿಸಿ ಟಿವಿ ಅಳವಡಿಕೆ ಕಾಮಗಾರಿ ವೆಚ್ಚ - 1.45 ಕೋಟಿ ರೂ.
  • ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರಿಗೆ ಹೊಸ ವಾಹನ ಖರೀದಿಗೆ 23 ಲಕ್ಷ ರೂ.
  • ವಿಧಾನ ಸಭೆಯ ವಿರೋಧ ಪಕ್ಷದ ನಾಯಕರ ನಿವಾಸದ ವೆಚ್ಚ - 15.00 ಲಕ್ಷ ರೂ.
  • ಬೆಳಗಾವಿ ಲೋಕಸಭಾ ಉಪಚುನಾವಣೆ - 13.97 ಕೋಟಿ ರೂ.
  • ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಗೆ ಕ್ಯಾಬಿನೆಟ್ ಸ್ಥಾನಮಾನಕ್ಕೆ ಗೌರವ ಧನ ವೆಚ್ಚ - 21 ಲಕ್ಷ ರೂ. ಹಾಗೂ ಅವರ ವೇತನೇತರ ವೆಚ್ಚ 13.08 ಲಕ್ಷ ರೂ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.