ETV Bharat / state

ಕೋವಿಡ್ ನಿರ್ವಹಣೆಗೆ ಕೇಂದ್ರದಿಂದ ರಾಜ್ಯಗಳಿಗೆ ಸಂಪೂರ್ಣ ಸಹಕಾರ: ಡಿವಿಎಸ್ - ಕೇಂದ್ರದಿಂದ ರಾಜ್ಯಗಳಿಗೆ ಸಂಪೂರ್ಣ ಸಹಕಾರ

ಕೋವಿಡ್ 2ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾದಾಗ ಆಮ್ಲಜನಕ, ಹಾಸಿಗೆಗಳು, ಕೆಲವೊಂದು ಔಷಧಗಳ ಕೊರತೆ ಕಾಣಿಸಿಕೊಂಡಿದ್ದು ನಿಜ. ಆದರೆ, ಕೇಂದ್ರ ಸರ್ಕಾರವು ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡಿತು. ಮೆಡಿಕಲ್ ಮತ್ತು ಆಮ್ಲಜನಕದ ಉತ್ಪಾದನೆಯನ್ನು 10 ಪಟ್ಟು ಹೆಚ್ಚಿಸಲಾಯಿತು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಡಿವಿಎಸ್
ಡಿವಿಎಸ್
author img

By

Published : Jun 19, 2021, 10:40 PM IST

Updated : Jun 19, 2021, 11:00 PM IST

ಯಲಹಂಕ (ಬೆಂಗಳೂರು): ಕೊರೊನಾ ಎರಡನೇ ಅಲೆ ಆರಂಭವಾದಾಗಿನಿಂದಲೂ ರಾಜ್ಯ ಸರ್ಕಾರಗಳಿಗೆ ಕೇಂದ್ರವು ಎಲ್ಲ ರೀತಿಯಿಂದಲೂ ಬೆಂಬಲ ನೀಡಿದ್ದು, ಇದು ಮುಂದುವರಿಯಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ರಾಜ್ಯ ಸರ್ಕಾರ, ಬೋಯಿಂಗ್ ಇಂಡಿಯಾ, ಡಾಕ್ಟರ್ಸ್ ಫಾರ್ ಯು, ಸೆಲ್ಕೋ ಫೌಂಡೇಷನ್ ಮತ್ತು ಕೆಪಿಸಿಎಲ್ ಸಂಸ್ಥೆಗಳು ಜಂಟಿಯಾಗಿ ಯಲಹಂಕದಲ್ಲಿ ನಿರ್ಮಿಸಿರುವ ಆಮ್ಲಜನಕ ವ್ಯವಸ್ಥೆ ಹೊಂದಿರುವ ಸುಸಜ್ಜಿತ 100-ಬೆಡ್ ಕೋವಿಡ್ ಕೇರ್ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸದಾನಂದ ಗೌಡರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ಕೋವಿಡ್ 2ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾದಾಗ ಆಮ್ಲಜನಕ, ಹಾಸಿಗೆಗಳು, ಕೆಲವೊಂದು ಔಷಧಗಳ ಕೊರತೆ ಕಾಣಿಸಿಕೊಂಡಿದ್ದು ನಿಜ. ಆದರೆ, ಕೇಂದ್ರ ಸರ್ಕಾರವು ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡಿತು. ಮೆಡಿಕಲ್ ಮತ್ತು ಆಮ್ಲಜನಕದ ಉತ್ಪಾದನೆಯನ್ನು 10 ಪಟ್ಟು ಹೆಚ್ಚಿಸಲಾಯಿತು. ಆಮ್ಲಜನಕ ಟ್ಯಾಂಕರ್​​ಗಳನ್ನು ಹೊತ್ತು ಸುಮಾರು 443 ಆಕ್ಸಿಜನ್ ಎಕ್ಸಪ್ರೆಸ್​​ಗಳು ದೇಶದ ತುಂಬಾ ಮಿಂಚಿನ ವೇಗದಲ್ಲಿ ಸಂಚರಿಸಿದವು. ಹಾಗೆಯೇ ವಾಯುದಳದ ಯುದ್ಧ ವಿಮಾನಗಳು ಸಹ ಆಮ್ಲಜನಕ ಹಾಗೂ ಔಷಧಗಳನ್ನು ಸಾಗಿಸಿದವು. ದೇಶದ ಮೂಲೆ ಮೂಲೆಗಳಲ್ಲಿ 1,500 ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಯಿತು. ರೆಮ್ಡೆಸಿವಿರ್​​ನಂತಹ ಔಷಧಗಳ ಉತ್ಪಾದನೆಯನ್ನು ಮಾಸಿಕ 27 ಲಕ್ಷ ವಯಲ್ಸ್​ನಿಂದ 1.19 ಕೋಟಿ ವಯಲ್ಸ್​ಗೆ ಏರಿಸಲಾಯಿತು. ಈಗ ಆಮ್ಲಜನಕ ಅಥವಾ ಔಷಧಗಳ ಕೊರತೆ ಇಲ್ಲ. ಇದರಿಂದ ಎರಡನೇ ಅಲೆ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಅಷ್ಟೇ ಅಲ್ಲ, ಸಂಭವನೀಯ ಮೂರನೇ ಅಲೆಯನ್ನು ಎದುರಿಸಲು ಕೂಡ ದೇಶವು ಸಜ್ಜುಗೊಂಡಿದೆ ಎಂದರು.

ಇದನ್ನೂ ಓದಿ: Karnataka Unlock 2.0: ಬಸ್ ಸಂಚಾರ ಸೇರಿ ಯಾವೆಲ್ಲಾ ಸೇವೆ ಲಭ್ಯ?

ಕೋವಿಡ್ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರಗಳು ಸಹ ಪರಿಣಾಮಕಾರಿಯಾಗಿ ಕೆಲಸ ಮಾಡಿವೆ. ಸಿಎಂ ಯಡಿಯೂರಪ್ಪನವರಿಗೆ ಎರಡು ಬಾರಿ ಕೋವಿಡ್ ತಗುಲಿದರೂ ಅವರು ಧೃತಿಗೆಡಲಿಲ್ಲ. ಆಸ್ಪತ್ರೆಗೆ ದಾಖಲಾದಾಗ ಅಲ್ಲಿಂದಲೇ ಕೊರೊನಾ ನಿರ್ವಹಣೆಯ ಮೇಲುಸ್ತುವಾರಿ ಮಾಡಿದರು ಎಂದರು.

ಸುಸಜ್ಜಿತ 100-ಬೆಡ್ ಕೋವಿಡ್ ಕೇರ್ ಆಸ್ಪತ್ರೆ
ಸುಸಜ್ಜಿತ 100-ಬೆಡ್ ಕೋವಿಡ್ ಕೇರ್ ಆಸ್ಪತ್ರೆ

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಬೋಯಿಂಗ್ ಇಂಡಿಯಾ ಅಧ್ಯಕ್ಷ ಸಲೀಲ್ ಗುಪ್ತೆ, ಡಾಕ್ಟರ್ಸ್ ಫಾರ್ ಯು ಸಂಸ್ಥೆಯ ಅಧ್ಯಕ್ಷ ಡಾ ರಜತ್ ಜೈನ್, ಐಎಎಸ್ ಅಧಿಕಾರಿಗಳಾದ ವಂದಿತಾ ಶರ್ಮಾ, ಪೊನ್ನುರಾಜ್, ಗುಂಜನ್ ಕೃಷ್ಣ ಭಾಗವಹಿಸಿದ್ದರು.

ಸುಸಜ್ಜಿತ 100-ಬೆಡ್ ಕೋವಿಡ್ ಕೇರ್ ಆಸ್ಪತ್ರೆ
ಸುಸಜ್ಜಿತ 100-ಬೆಡ್ ಕೋವಿಡ್ ಕೇರ್ ಆಸ್ಪತ್ರೆ

21 ದಿನಗಳಲ್ಲೇ 100 ಬೆಡ್​​​​​ ಸಾಮರ್ಥ್ಯದ ಕೋವಿಡ್ ಆಸ್ಪತ್ರೆ ನಿರ್ಮಾಣ

ಕೊರೊನಾ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಯಲಹಂಕ ನಗರದ ಕೆಪಿಸಿಎಲ್ ಅವರಣದಲ್ಲಿ 100 ಬೆಡ್ ಸಾಮರ್ಥ್ಯದ ಕೋವಿಡ್ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಕೇವಲ 21 ದಿನದಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಾಣ ಮಾಡಿರುವುದು ವಿಶೇಷವಾಗಿದೆ. ಆಸ್ಪತ್ರೆಯಲ್ಲಿ 10 ಐಸಿಯು ಹಾಸಿಗೆ, ಅತ್ಯಾಧುನಿಕ ಸಲಕರಣೆಗಳ 50 ಹಾಸಿಗೆ, 70 ಆಕ್ಸಿಜನ್ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಔಷಧಾಲಯ, ಪ್ರಯೋಗಾಲಯ, ವಿಶ್ರಾಂತಿ ಕೊಠಡಿ, ದಾದಿಯರ ಕೇಂದ್ರ, ತಾಯಿಯರ ಆರೈಕೆ ಕೇಂದ್ರ ಮತ್ತು ಸಭಾಂಗಣವಿದೆ.

Last Updated : Jun 19, 2021, 11:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.