ETV Bharat / state

ಹೈಕೋರ್ಟ್​ಗೆ ನಾಳೆಯಿಂದ ಮೂರು ದಿನ ರಜೆ - 27, 28 ಹಾಗೂ 29 ರಂದು ಹೈಕೋರ್ಟ್​ಗೆ ರಜೆ

ವರ್ಕೋಹಾಲಿಕ್ ಗುಣ ಹೊಂದಿರುವ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರ ಈ ನಿರ್ಧಾರಕ್ಕೆ ವಕೀಲರು ಅಭಿನಂದಿಸಿದ್ದಾರೆ. ರಜೆಗಳಿರುವ ಅವಧಿಯಲ್ಲೇ ದಸರಾ ರಜೆ ನೀಡಿರುವುದರಿಂದ ಉಳಿದ ಮೂರು ದಿನಗಳು ಕೋರ್ಟ್ ಕಲಾಪಕ್ಕೆ ಬಳಕೆಯಾಗಲಿವೆ..

high court
ಹೈಕೋರ್ಟ್
author img

By

Published : Oct 26, 2020, 7:40 PM IST

ಬೆಂಗಳೂರು: ದಸರಾ ಹಿನ್ನೆಲೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರ ಆದೇಶದ ಮೇರೆಗೆ 27, 28 ಹಾಗೂ 29 ರಂದು ಹೈಕೋರ್ಟ್​ಗೆ ರಜೆ ನೀಡಲಾಗಿದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ತಿಳಿಸಿದ್ದಾರೆ.

ತುರ್ತು ಪ್ರಕರಣಗಳ ವಿಚಾರಣೆಗಾಗಿ ಅಕ್ಟೋಬರ್ 29 ರಂದು ಒಂದು ವಿಭಾಗಿಯ ಹಾಗೂ ಮೂರು ಏಕಸದಸ್ಯ ರಜಾ ಪೀಠಗಳು ಕಾರ್ಯ ನಿರ್ವಹಿಸಲಿವೆ. ಪ್ರತಿ ವರ್ಷದಂತೆ ದಸರಾಗೆ ನೀಡುವ ಒಂದು ವಾರ ರಜೆಯನ್ನು ಈ ಬಾರಿ ಅಕ್ಟೋಬರ್ 19ರಿಂದ 24ರವರೆಗೆ ನಿಗದಿ ಮಾಡಲಾಗಿತ್ತು. ಆದರೆ, ಮರುವಾರ 26ರಿಂದ 31ರ ನಡುವೆ ಮೂರು ದಿನ ಸರ್ಕಾರಿ ರಜೆಗಳಿದ್ದವು. ಈ ಹಿನ್ನೆಲೆ ದಸರಾ ರಜೆಯನ್ನು ಈ ವಾರ ನೀಡಲಾಗಿದೆ. ಅದರಂತೆ ಹೈಕೋರ್ಟ್ ಪೀಠಗಳಿಗೆ 27, 28 ಹಾಗೂ 29ರಂದು ರಜೆ ಇರಲಿದೆ.

ವರ್ಕೋಹಾಲಿಕ್ ಗುಣ ಹೊಂದಿರುವ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರ ಈ ನಿರ್ಧಾರಕ್ಕೆ ವಕೀಲರು ಅಭಿನಂದಿಸಿದ್ದಾರೆ. ರಜೆಗಳಿರುವ ಅವಧಿಯಲ್ಲೇ ದಸರಾ ರಜೆ ನೀಡಿರುವುದರಿಂದ ಉಳಿದ ಮೂರು ದಿನಗಳು ಕೋರ್ಟ್ ಕಲಾಪಕ್ಕೆ ಬಳಕೆಯಾಗಲಿವೆ. ಇದರಿಂದ ವಕೀಲರು ಮತ್ತು ಕಕ್ಷೀದಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.