ಬೆಂಗಳೂರು: ರಾಜ್ಯದ 3 ಪ್ರಧಾನ ಆಸ್ಪತ್ರೆಗಳು, 20 ಜಿಲ್ಲಾ ಆಸ್ಪತ್ರೆಗಳು ಹಾಗೂ 148 ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯವನ್ನು ಉಚಿತವಾಗಿ ಎಲ್ಲ ವರ್ಗದ ಜನರಿಗೆ 2017-18 ರಿಂದ ಒದಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅವಕಾಶ ಕಲ್ಪಿಸಿತ್ತು.
ರಾಜ್ಯದ 163 ಆಸ್ಪತ್ರೆಗಳಲ್ಲಿ ಇಲ್ಲಿಯವರೆಗೆ ಸುಮಾರು 3856 ರೋಗಿಗಳು ಡಯಾಲಿಸಿಸ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಸದ್ಯ ರೋಗಿಗಳಿಗೆ ಕನಿಷ್ಠ 3 ತಿಂಗಳಿಗೊಮ್ಮೆ ELISA (enzyme-linked immunosorbent assay) ವಿಧಾನದ ಮುಖಾಂತರ HIV,HBV,HCV ಸೋಂಕು ಪರೀಕ್ಷೆ ಮಾಡಬೇಕೆಂದು ಇಲಾಖೆ ಸೂಚಿಸಿದೆ.
ಡಯಾಲಿಸಿಸ್ ಕಾರ್ಯನಿರ್ವಹಿಸುತ್ತಿರುವ ಎರಡು ಆಸ್ಪತ್ರೆಗಳಲ್ಲಿ ಸುಮಾರು ರೋಗಿಗಳಿಗೆ HCV ಸೋಂಕು ತಗುಲಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಕ್ತ ನಿಧಿ ಕೇಂದ್ರಗಳಲ್ಲಿ ಡಯಾಲಿಸಿಸ್ ರೋಗಿಗಳಿಗೆ ಉಚಿತವಾಗಿ ಕನಿಷ್ಠ 3 ತಿಂಗಳಿಗೊಮ್ಮೆ ELISA ವಿಧಾನ ಮುಖಾಂತರ HIV,HBV,HCV ಸೋಂಕು ಪರೀಕ್ಷೆ ಮಾಡಲು ಸೂಚಿಸಿದೆ.