ETV Bharat / state

ಬೆಂಗಳೂರು: ಕೆಲಸ ಕೊಡಿಸುವುದಾಗಿ ನಂಬಿಸಿ ನಿವೃತ್ತ ಯೋಧನಿಗೆ ವಂಚನೆ - Fraud in the name of employment

ಉದ್ಯೋಗದ ಹೆಸರಿನಲ್ಲಿ ನಿವೃತ್ತ ಯೋಧರಿಗೆ ವಂಚನೆ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ.

Fraud to retired soldier in the name of employment in Bangalore
ಉದ್ಯೋಗದ ಹೆಸರಿನಲ್ಲಿ ವಂಚನೆ
author img

By

Published : Sep 1, 2022, 1:23 PM IST

ಬೆಂಗಳೂರು: ರೈಲ್ವೆ ಇಲಾಖೆ ಹಾಗು ಸಿಆರ್​ಪಿಎಫ್​ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಿವೃತ್ತ ಯೋಧನಿಗೆ ವಂಚನೆ ಮಾಡಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಗೋಪಾಲ್ ಎಂಬ ನಿವೃತ್ತ ಯೋಧ ಸೇರಿ 9 ಜನರಿಗೆ ಸುಮಾರು 28 ಲಕ್ಷ ರೂಪಾಯಿವರೆಗೂ ವಂಚನೆಯಾಗಿದೆ. ತನಗೆ ಕೇಂದ್ರ ಹಾಗು ರಾಜ್ಯ ಸಚಿವರು ಆಪ್ತರು. ಅವರಿಂದ ನೇರವಾಗಿ ನೇಮಕಾತಿ ಮಾಡಿಸುತ್ತೇನೆಂದು ನಂಬಿಸಿ ಆರೋಪಿ ವಂಚಿಸಿದ್ದಾನೆ ಎನ್ನಲಾಗ್ತಿದೆ.

ಗೋಪಾಲ್ ಅವರು ಸೇನೆಯಿಂದ ನಿವೃತ್ತರಾದ ಬಳಿಕ ಆಲ್ ಇಂಡಿಯಾ ಇನ್ಸ್​ಟಿಟ್ಯೂಟ್ ಆಫ್ ಪ್ರೊಫೆಷನ್ ಟ್ರೈನಿಂಗ್ ಮ್ಯಾನೇಜರ್ ಆಗಿದ್ದ ವೇಳೆ ಶ್ರೇಯಾಂಶ್ ಬೋಗಾರ್ ಎಂಬಾತ ಪರಿಚಯವಾಗಿದ್ದ. ನಂತರ ತನಗೆ ಗಣ್ಯರು, ಪ್ರಭಾವಿಗಳ ಪರಿಚಯವಿದೆ. ಅವರಿಂದಲೇ ಕೆಲಸ ಕೊಡಿಸುತ್ತೇನೆ. ಆದ್ರೆ ಪೋಸ್ಟಿಂಗ್​ಗೆ 9 ಲಕ್ಷ ರೂಪಾಯಿ ಖರ್ಚಾಗುತ್ತೆ ಎಂದು ಹೇಳಿದ್ದನಂತೆ. ಇದನ್ನು ನಂಬಿದ ಗೋಪಾಲ್ ಅವರು ತನ್ನ ಸ್ನೇಹಿತರಿಗೂ ಕೆಲಸ ಸಿಗಲಿ ಎಂಬ ಕಾರಣಕ್ಕೆ ಅವರಿಗೂ ಶ್ರೇಯಸ್ ಬೋಗಾರ್​ನನ್ನು ಪರಿಚಯ ಮಾಡಿಸಿದ್ರು.

ಕೆಲ ದಿನಗಳ ಬಳಿಕ ಹಣ ನೀಡಲು ಶ್ರೇಯಾಂಶ್ ಬೋಗಾರ್​ಗೆ ಕರೆ ಮಾಡಿದಾಗ ಆತ ಅಶೋಕ್ ಹೋಟೆಲ್​ಗೆ ಬರಲು ಹೇಳಿದ್ದ. ಅಲ್ಲಿ ಮಾತುಕತೆ ನಡೆದು ಗೋಪಾಲ್ ಹಾಗು ಅವರ ಸ್ನೇಹಿತರು ಹಣ ನೀಡಿ ಹೊರಟು ಹೋಗಿದ್ದರು. ಹಣ ನೀಡಿ ತಿಂಗಳುಗಳೇ ಕಳೆದರೂ ಯಾವುದೇ ಹುದ್ದೆಯ ಬಗ್ಗೆ ಮಾಹಿತಿ ಸಿಗಲಿಲ್ಲ. ಮತ್ತೆ ಶ್ರೇಯಾಂಶ್ ಬೋಗಾರ್​ಗೆ ಕರೆ ಮಾಡಿದಾಗ ನೇರವಾಗಿ ನೇಮಕಾತಿ‌ ಮಾಡಿಸುತ್ತೇನೆ ಎಂದೇ ಕಾಲ ಕಳೆಯುತ್ತಿದ್ದನಂತೆ.

ಆತನ ನಡೆ ಬಗ್ಗೆ ಅನುಮಾನಗೊಂಡ ಗೋಪಾಲ್ ಅವರು ಹಣ ವಾಪಸ್ ಕೇಳಿದ್ದಾರೆ. ಈ ವೇಳೆ ಶ್ರೇಯಾಂಶ್ ಉಳಿದ ಆರೋಪಿಗಳಾದ ಅಜಿತ್, ಅರುಣ್ ಹಾಗು ವಿಠಲ್ ಜೊತೆ ಸೇರಿ ಜೀವ ಬೆದರಿಕೆ ಹಾಕಿದ್ದ ಎನ್ನುವ ಆರೋಪವಿದೆ. ಈ ಸಂಬಂಧ ಗೋಪಾಲ್ ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಸ್ಮಶಾನಕ್ಕೆ ತೆರಳಲು ಮಳೆ ಅಡ್ಡಿ.. ಗ್ರಾ ಪಂ ಕಚೇರಿ ಮುಂದೆ ಶವ ಹೂತ ಗ್ರಾಮಸ್ಥರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.