ETV Bharat / state

ಫೇಸ್​ಬುಕ್​​ ಜಾಹೀರಾತು ನೋಡಿ ಜಾಬ್‌ಗೆ ಅಪ್ಲೈ ಮಾಡ್ತೀರಾ? ಇಂಥ ವಂಚಕರಿದ್ದಾರೆ ಜೋಕೆ! - ಫೇಸ್​ಬುಕ್​​ನಲ್ಲಿ ಕೆಲಸ ಖಾಲಿಯಿರುವ ಪೋಸ್ಟ್

ಕೆಲಸ ಕೊಡಿಸುವುದಾಗಿ ನಂಬಿಸಿ ಯುವಕನಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದ ನಾಲ್ವರನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಆರೋಪಿಗಳು

author img

By

Published : Feb 3, 2023, 3:24 PM IST

Updated : Feb 3, 2023, 3:37 PM IST

ಕೆಲಸ ಕೊಡಿಸುವುದಾಗಿ ವಂಚಿಸಿದ ಪ್ರಕರಣ

ಬೆಂಗಳೂರು: ಸಾಮಾಜಿಕ ಜಾಲತಾಣಗಳು ಎಷ್ಟು ಸದ್ಬಳಕೆ ಆಗುತ್ತದೋ ಅಷ್ಟೇ ದುರ್ಬಳಕೆಯೂ ಆಗುತ್ತಿದೆ ಎಂಬುದು ಕೂಡಾ ಸತ್ಯ. ಕೆಲಸಕ್ಕೆ ಬೇಕಾಗಿದ್ದಾರೆ ಎಂಬಂತಹ ಫೇಸ್​ಬುಕ್​ ಪೋಸ್ಟ್ ನೋಡಿ ನೌಕರಿಗೆ ರೆಸ್ಯೂಮ್ ಹಾಕುವ ಮುನ್ನ ಯೋಚಿಸಿ, ಮುಂದುವರೆಯಿರಿ. ನಿಮ್ಮನ್ನು ಮೋಸಗೊಳಿಸುವ ಜಾಲ ಸಕ್ರಿಯವಾಗಿದೆ.

ಫೇಸ್​ಬುಕ್​ನಲ್ಲಿ ಪರಿಚಯಿಸಿಕೊಂಡು ಕೆಲಸ ಕೊಡಿಸುವ ಸೋಗಿನಲ್ಲಿ ಬೆಂಗಳೂರಿಗೆ ಕರೆಯಿಸಿಕೊಂಡು ಯುವಕನಿಂದ ಲಕ್ಷಾಂತರ ರೂಪಾಯಿ ಪಡೆದು ಕೆಲಸವನ್ನೂ ಕೊಡಿಸದೆ ವಂಚಿಸಿದ್ದ ನಾಲ್ವರನ್ನು ಕೊಡಿಗೇಹಳ್ಳಿ ಪೊಲೀಸರು ಸೆರೆಹಿಡಿದಿದ್ದಾರೆ. ಹೈದರಾಬಾದ್‌ನ ಗಾಂಧಿನಗರದ ಮೂಲದ ನಿವಾಸಿಯಾಗಿರುವ ಪ್ರದೀಪ್ ಆಂಸರ್ ಹಲ್ಲೆಗೊಳಗಾಗಿದ್ದು, ಈತ ನೀಡಿದ ದೂರಿನ ಮೇರೆಗೆ ಮಲ್ಲು ಶಿವಶಂಕರ ರೆಡ್ಡಿ, ಗುಂಜಮಂಗರಾವ್, ಶಹಬಾಜಿ ಹಾಗೂ ಮಹೇಶ್ ಎಂಬುವವರನ್ನು ಬಂಧಿಸಲಾಗಿದೆ.

ಬಿಇ ವ್ಯಾಸಂಗ ಮಾಡಿದ್ದ ಪ್ರದೀಪ್ ಕೆಲಸಕ್ಕೆ ಅಲೆದಾಡುತ್ತಿದ್ದ. ಈ ವೇಳೆ, ಫೇಸ್​ಬುಕ್​​ನಲ್ಲಿದ್ದ ಪೋಸ್ಟ್ ಗಮನಿಸಿದ್ದಾನೆ. ಆ ಪೋಸ್ಟ್​ನಲ್ಲಿ ಬೆಂಗಳೂರಿನ ಎಂಎನ್​ಸಿ ಕಂಪನಿಯೊಂದರಲ್ಲಿ ಕೆಲಸ ಖಾಲಿಯಿದೆ ಎಂದರಿತು ಕೂಡಲೇ ಆರೋಪಿಗೆ ಫೋನ್ ಮಾಡಿದ್ದಾನೆ. ಇದೇ ಸಂದರ್ಭಕ್ಕೆ ಕಾಯುತ್ತಿದ್ದ ಶಿವಶಂಕರ್ ರೆಡ್ಡಿ, ಬೆಂಗಳೂರಿನಲ್ಲಿ‌ ಕೆಲಸ ಖಾಲಿಯಿದ್ದು, ಇಲ್ಲಿಗೆ ಬಂದರೆ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ಆರೋಪಿ ಮಾತು ನಂಬಿ ಕಳೆದ‌ ಜನವರಿ 11ರಂದು ಹೆಬ್ಬಾಳಕ್ಕೆ ಬಂದಿದ್ದಾನೆ. ಇತ್ತ ಶಿವಶಂಕರ್ ರೆಡ್ಡಿ ಹಾಗೂ ಸಹಚರರು ಹಣ ಕಬಳಿಸಲು ಸಂಚು‌ ರೂಪಿಸಿದ್ದರು.

ಪ್ರದೀಪ್‌ ಬರುತ್ತಿದ್ದಂತೆ ಆರೋಪಿಗಳು ತಂದಿದ್ದ ಸ್ವಿಫ್ಟ್ ಕಾರ್‌ನಲ್ಲಿ ಕೂರಿಸಿಕೊಂಡು ಕಂಪನಿಯ ಹೆಚ್ ಆರ್ ಭೇಟಿ ಮಾಡಿಸುವುದಾಗಿ ಹೇಳಿ ಚಿಕ್ಕಜಾಲ, ಏರ್‌ಪೋರ್ಟ್ ಸೇರಿದಂತೆ ಹಲವು ಕಡೆಗಳಲ್ಲಿ ಸುತ್ತಾಡಿಸಿದ್ದರು. ಆರೋಪಿಗೆ ಅನುಮಾನ ಬಂದಿರುವುದನ್ನು ಕಂಡು ಪ್ರದೀಪನ‌‌ ಮೊಬೈಲ್ ಕಸಿದುಕೊಂಡು ಹಲ್ಲೆ ನಡೆಸಿದ್ದರು. ಪ್ರೊಸೆಸಿಂಗ್ ಶುಲ್ಕ ಹೆಸರಿನಲ್ಲಿ 30 ಸಾವಿರ ರೂ ಕೊಡುವಂತೆ ಒತ್ತಾಯಿಸಿದ್ದರು. ಅಲ್ಲದೇ ಕಂಪನಿಯಿಂದ ಆಫರ್ ಲೆಟರ್ ಬಂದಿರುವುದಾಗಿ ತಿಳಿಸಿ ಅವರಿಂದಲೂ ಹಣ ತರಿಸಿಕೊಳ್ಳುವಂತೆ ಒತ್ತಡ ಹೇರಿದ್ದರು.

ಅಂತಿಮವಾಗಿ, ಪ್ರದೀಪ್ ಕಡೆಯಿಂದ ಸುಮಾರು 6 ಲಕ್ಷದವರೆಗೂ ಹಣ ಪಡೆದು ಹಾಸ್ಟೆಲ್‌ನಲ್ಲಿ ಉಳಿದುಕೋ ನಾವೇ ನಿನ್ನನ್ನು ಕಂಪನಿಯ ಕೆಲಸಕ್ಕಾಗಿ ಕರೆದೊಯ್ಯುತ್ತೇವೆ ಎಂದು ಸುಳ್ಳು ಹೇಳಿ ಕಾಲ್ಕಿತ್ತಿದ್ದರು. ಈ ಸಂಬಂಧ ಸಂತ್ರಸ್ತ ಯುವಕ ಕೊಡಿಗೇಹಳ್ಳಿ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಇನ್ಸ್​ಸ್ಪೆಕ್ಟರ್ ಎನ್.ರಾಜಣ್ಣ ನೇತೃತ್ವದ ತಂಡ ಕಾರ್ಯಾಚರಣೆ ಮಾಡಿ ವಂಚಕರನ್ನು ಮಟ್ಟ ಹಾಕಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದರು.

ಇದನ್ನೂ ಓದಿ: ಬೀಟೆ ಮರ ಕಡಿದು ಸಾಗಿಸಿದ ಆರೋಪ: ಚಿಕ್ಕಮಗಳೂರು ಅರಣ್ಯಾಧಿಕಾರಿ ಅಮಾನತು

ಆರೋಪಿಗಳೆಲ್ಲರೂ ವಿಜಯವಾಡ ಮೂಲದವರು. ಆಂಧ್ರದಲ್ಲಿ ಸಣ್ಣಪುಟ್ಟ ಕ್ರೈಂ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು.‌ ಪ್ರಕರಣದ ಪ್ರಮುಖ ಆರೋಪಿ ಶಿವಶಂಕರ್ ರೆಡ್ಡಿ ಅಲಿಯಾಸ್ ಗೋಪಿಚಂದ್ ಕೆಲವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೂರು ತಿಂಗಳ ಕಾಲ ಖಾಸಗಿ ಕಂಪನಿಯೊಂದರಲ್ಲಿ ಕೆಲಸ‌ ಮಾಡಿದ್ದಾನೆ. ಸುಲಭವಾಗಿ ಹಣ ಸಂಪಾದ‌ನೆಗಾಗಿ ಸಹಚರರನ್ನು‌ ಒಗ್ಗೂಡಿಸಿಕೊಂಡು ಫೇಸ್​ಬುಕ್​​ನಲ್ಲಿ ಕೆಲಸ ಖಾಲಿಯಿರುವ ಪೋಸ್ಟ್ ಹಾಕುತ್ತಿದ್ದ. ಆಂಧ್ರದ ಮೂಲದ ನಿರುದ್ಯೋಗಿಗಳನ್ನೇ ಗುರಿಯಾಗಿಸಿಕೊಂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ದಂಪತಿಯಿಂದ ಸುಲಿಗೆ ಆರೋಪ: ಸಂಪಿಗೆಹಳ್ಳಿ ಠಾಣೆಯ ಇಬ್ಬರು ಸಿಬ್ಬಂದಿ ವಜಾ

Last Updated : Feb 3, 2023, 3:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.