ETV Bharat / state

ಬೆಂಗಳೂರಲ್ಲಿ ನವಜಾತ ಶಿಶುಗಳಿಗೂ ಕೊರೊನಾ : ಆತಂಕ ಮೂಡಿಸಿದ 14 ಪಾಸಿಟಿವ್​ ಕೇಸ್​! - ನವಜಾತ ಶಿಶುಗಳಿಗೂ ಕೊರೊನಾ

ಬೆಂಗಳೂರಿನಲ್ಲಿ ಹದಿನಾಲ್ಕು ನವಜಾತ ಶಿಶುಗಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಇದಕ್ಕೆ ನಿಖರ ಕಾರಣ ವೈದ್ಯರಿಗೂ ಇನ್ನೂ ತಿಳಿದುಬಂದಿಲ್ಲ.

fourteen-newborn-babies-tested-corona-positive
ಬೆಂಗಳೂರಲ್ಲಿ ನವಜಾತ ಶಿಶುಗಳಿಗೂ ಕೊರೊನಾ
author img

By

Published : Aug 27, 2020, 3:45 AM IST

ಬೆಂಗಳೂರು: ಗರ್ಭಿಣಿಯರಲ್ಲಿ ಕೊರೊನಾ ಸೋಂಕು ಇದ್ದರೂ, ಮಕ್ಕಳಿಗೆ ವರ್ಗಾವಣೆಯಾಗುವುದಿಲ್ಲ ಎನ್ನಲಾಗುತ್ತಿತ್ತು. ಆದರೆ ನಗರದ ವಾಣಿವಿಲಾಸ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಜನಿಸಿದ 14 ನವಜಾತ ಶಿಶುಗಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಇದಕ್ಕೆ ನಿಖರ ಕಾರಣ ವೈದ್ಯರಿಗೂ ಇನ್ನೂ ತಿಳಿದುಬಂದಿಲ್ಲ. ವಾಣಿವಿಲಾಸದಲ್ಲಿ ಸಾವಿರಕ್ಕೂ ಹೆಚ್ಚು ಗರ್ಭಿಣಿಯರು ದಾಖಲಾಗಿದ್ದು, 260ಕ್ಕೂ ಹೆಚ್ಚು ಮಂದಿಗೆ ಸುರಕ್ಷಿತ, ಯಶಸ್ವಿ ಹೆರಿಗೆಯಾಗಿದೆ. ಆದರೀಗ ಹದಿನಾಲ್ಕು ಮಕ್ಕಳಲ್ಲಿ ಸೋಂಕು ಕಂಡುಬಂದಿರುವುದು ಭಯ ಮೂಡಿಸಿದೆ.

ಇನ್ನೊಂದೆಡೆ ನಗರದಲ್ಲಿ ಕೋವಿಡ್ ಸೋಂಕಿತರ ಪ್ರಕರಣದ ಜೊತೆಗೆ ನಾಪತ್ತೆಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. 15 ದಿನದಲ್ಲಿ 4,327 ಮಂದಿ ಸಿಸಿಸಿ ಕೇಂದ್ರದಿಂದ ಪರಾರಿಯಾಗಿದ್ದು, ಅವರಲ್ಲಿ 3,303 ಮಂದಿಯನ್ನು ಪತ್ತೆ ಮಾಡಲಾಗಿದ್ದು, 769 ಸೋಂಕಿತರ ಪತ್ತೆ ಕಾರ್ಯಾಚರಣೆ ಮುಂದುವರೆದಿದೆ. ಆಸ್ಪತ್ರೆಗೆ ದಾಖಲಾದ ವೇಳೆ ತಪ್ಪು ವಿಳಾಸ ಹಾಗೂ ಮೊಬೈಲ್​ ನಂಬರ್ ಕೊಟ್ಟಿರುವುದರಿಂದ ಪತ್ತೆಹಚ್ಚುವುದು ಕಷ್ಟವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.