ETV Bharat / state

ಕರ್ನಾಟಕದಲ್ಲೇ ಮೊದಲ ಬಾರಿಗೆ 'ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿ': ಕೇವಲ 30 ನಿಮಿಷದಲ್ಲಿ ಚಿಕಿತ್ಸೆ

author img

By

Published : Feb 4, 2022, 7:48 AM IST

ಸ್ತನ ಕ್ಯಾನ್ಸರ್ ಹೊಂದಿರುವವರಿಗಾಗಿ ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿ ಪರಿಚಯಿಸಿದ್ದೇವೆ. ಐಒಆರ್‌ಟಿ ಇದೊಂದು ವಿಕಿರಣ ಚಿಕಿತ್ಸಾ ತಂತ್ರಜ್ಞಾನವಾಗಿದೆ. ಸ್ತನ ಕ್ಯಾನ್ಸರ್ ಹೊಂದಿದವರಿಗೆ ಗಡ್ಡೆ ತೆಗೆದ ನಂತರ ರೇಡಿಯೋಥರಪಿ ನಡೆಸಲು 30 ರಿಂದ 40 ದಿನಗಳ ಕಾಲ ತೆಗೆದುಕೊಳ್ಳಲಾಗುತ್ತದೆ ಎಂದು ಫೋರ್ಟಿಸ್ ಆಸ್ಪತ್ರೆ ಸರ್ಜಿಕಲ್ ಆಂಕೋಲಜಿ ನಿರ್ದೇಶಕ ಡಾ. ಸಂದೀಪ್ ನಾಯಕ್ ತಿಳಿಸಿದ್ದಾರೆ.

Fortis Hospital in Karnataka
ಫೋರ್ಟಿಸ್ ಆಸ್ಪತ್ರೆ ಸರ್ಜಿಕಲ್ ಆಂಕೋಲಜಿ ನಿರ್ದೇಶಕ ಡಾ. ಸಂದೀಪ್ ನಾಯಕ್ ಸುದ್ದಿಗೋಷ್ಠಿ

ಬೆಂಗಳೂರು: ಸ್ತನ ಕ್ಯಾನ್ಸರ್ ವಿಕಿರಣ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆ ಕರ್ನಾಟಕದಲ್ಲೇ ಮೊದಲ ಬಾರಿಗೆ 'ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿ'(ಐಓಆರ್‌ಟಿ) ಚಿಕಿತ್ಸಾ ತಂತ್ರಜ್ಞಾನ ಪರಿಚಯಿಸಿದೆ. ಈ ಚಿಕಿತ್ಸೆಯ ಮೂಲಕ 30 ದಿನಗಳು ತೆಗೆದುಕೊಳ್ಳಬೇಕಾದ ವಿಕಿರಣ ಚಿಕಿತ್ಸೆ ಕೇವಲ 30 ನಿಮಿಷದೊಳಗೆ ಪೂರ್ಣಗೊಳ್ಳಲಿದೆ.

ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೋರ್ಟಿಸ್ ಆಸ್ಪತ್ರೆ ಸರ್ಜಿಕಲ್ ಆಂಕೋಲಜಿ ನಿರ್ದೇಶಕ ಡಾ. ಸಂದೀಪ್ ನಾಯಕ್, ಸ್ತನ ಕ್ಯಾನ್ಸರ್ ಹೊಂದಿರುವವರಿಗಾಗಿ ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿ ಪರಿಚಯಿಸಿದ್ದೇವೆ. ಐಓಆರ್‌ಟಿ ಇದೊಂದು ವಿಕಿರಣ ಚಿಕಿತ್ಸಾ ತಂತ್ರಜ್ಞಾನವಾಗಿದೆ. ಸ್ತನ ಕ್ಯಾನ್ಸರ್ ಹೊಂದಿದವರಿಗೆ ಗಡ್ಡೆ ತೆಗೆದ ನಂತರ ರೇಡಿಯೋಥರಪಿ ನಡೆಸಲು 30 ರಿಂದ 40 ದಿನಗಳ ಕಾಲ ತೆಗೆದುಕೊಳ್ಳಲಾಗುತ್ತದೆ.

ಇದು ಅತ್ಯಂತ ದೀರ್ಘಾವಧಿಯಾಗಿರುವುದರಿಂದ ರೋಗಿಯೂ ಇದರಿಂದ ಬಳಲಬಹುದು. ಇಂಟ್ರಾಆಪರೇಟಿವ್ ರೇಡಿಯೋ ಥೆರಪಿ ಚಿಕಿತ್ಸಾ ತಂತ್ರಜ್ಞಾನದಿಂದ ಕೇವಲ 30 ರಿಂದ 40 ನಿಮಿಷಗಳಲ್ಲಿ ಈ ಥೆರಪಿ ಪೂರ್ಣ ಮಾಡಬಹುದು. ಇದು ಅತ್ಯಂತ ಪರಿಣಾಮಕಾರಿ ಎಂದು ಈಗಾಗಲೇ ಸಾಬೀತಾಗಿದೆ. ದೇಶದಲ್ಲಿ ಕೆಲವು ಆಸ್ಪತ್ರೆಗಳು ಮಾತ್ರ ಈ ಚಿಕಿತ್ಸಾ ವಿಧಾನವನ್ನು ಹೊಂದಿವೆ.

ಆದರೆ, ಕರ್ನಾಟಕದಲ್ಲಿ ಈ ತಂತ್ರಜ್ಞಾನವನ್ನು ಫೋರ್ಟಿಸ್‌ನಲ್ಲಿ ಮಾತ್ರ ಅವಳವಡಿಸಲಾಗಿದೆ. ಡಿಸೆಂಬರ್‌ನಿಂದ ಜನವರಿಯೊಳಗೆ ನಾಲ್ಕು ಸ್ತನಕ್ಯಾನ್ಸರ್ ರೋಗಿಗಳಿಗೆ ಐಒಆರ್‌ಟಿ ತಂತ್ರಜ್ಞಾನದಿಂದ ಕೇವಲ 30 ನಿಮಿಷದಲ್ಲಿ ಥೆರಪಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದರು.

ಫೋರ್ಟಿಸ್ ಆಸ್ಪತ್ರೆ ಶಾಖೆ ನಿರ್ದೇಶಕ ಡಾ, ಮನೀಶ್ ಮಟ್ಟೂ ಮಾತನಾಡಿ, ಕೋಮಾಬಿಡಿಟಿ ಸಮಸ್ಯೆ ಇರುವವರಿಗೆ ತಂತ್ರಜ್ಞಾನ ಹೆಚ್ಚು ಉಪಯುಕ್ತ. ಗಡ್ಡೆ ತೆರವುಗಳಿಗೆ ರೇಡಿಯೋ ಥೆರಪಿಗಾಗಿ 30 ದಿನಗಳ ಕಾಲ ಆಸ್ಪತ್ರೆಗೆ ಬಂದು ಹೋಗುವುದು ಅತ್ಯಂತ ಕಷ್ಟದ ಕೆಲಸ. ಐಒಆರ್‌ಟಿ ಕೇವಲ 30 ನಿಮಿಷದಲ್ಲೇ ಥೆರಪಿ ಪೂರ್ಣಗೊಳಿಸುವುದರಿಂದ ಸ್ತನ ಕ್ಯಾನ್ಸರ್ ರೋಗಿಗಳು ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ.

ಮತ್ತೊಂದು ವಿಶೇಷವೆಂದರೆ, ಈ ತಂತ್ರಜ್ಞಾನದಿಂದ ನೇರವಾಗಿ ವಿಕಿರಣ ಗಡ್ಡೆ ತೆರವುಗೊಳಿಸಿದ ಜಾಗಕ್ಕೆ ನೇರವಾಗಿ ಮುಟ್ಟುತ್ತದೆ. ಇದರಿಂದ ವಿಕಿರಣಗಳು ಇತರ ಅಂಗಗಳಿಗೂ ತಗುಲುವ ಅಪಾಯ ಇರುವುದಿಲ್ಲ ಎಂದು ವಿವರಿಸಿದರು.

ಇದನ್ನೂ ಓದಿ: ಆರೋಗ್ಯವಂತ ಮಹಿಳೆಯರಲ್ಲಿ ಹೆಚ್ಚುತ್ತಿದೆ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.