ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಪ್ರಕರಣದಲ್ಲಿ ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ವೈಸ್ ಚಾನ್ಸಲರ್ಗೆ ಜಾರಿನಿರ್ದೇಶನಾಲಯ ಸಮನ್ಸ್ ನೀಡಿದೆ.
ಈ ಹಿಂದೆ ಅ. 9 ರಂದು ಮಧುಕರ್ ಅಂಗೂರ್ ಅವರ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಹಣ ವರ್ಗಾವಣೆ ಮತ್ತು ಹಣದ ವ್ಯವಹಾರದ ಬಗ್ಗೆ ಕೆಲ ಮಾಹಿತಿ ಬಿಚ್ಚಿಟ್ಟಿದ್ದರು. ಅಮೆರಿಕ ದೇಶದ ಪೌರತ್ವ ಹೊಂದಿರುವ ಮಧುಕರ್ ಅಂಗೂರ್ ಮೇಲೆ ಸಾರ್ವಜನಿಕರ 100 ಕೋಟಿ ರೂ. ದುರುಪಯೋಗ ಮಾಡಿರುವ ಆರೋಪವಿದೆ. ಸದ್ಯ ಮಧುಕರ್ ಅಂಗೂರ್ ಮತ್ತು ಸಹವರ್ತಿಗಳ ಬ್ಯಾಂಕ್ ಖಾತೆ, ಚಿರಾಸ್ತಿ ವಿವರ, 10 ವರ್ಷಗಳ ಐಟಿ ರಿಟರ್ನ್ ಸಲ್ಲಿಸಿದ ಮಾಹಿತಿಯನ್ನು ಇಡಿ ಕಲೆ ಹಾಕಿದ್ದಾರೆ.
ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದ ಹಿರಿಯ ಕಾನ್ಸ್ಟೇಬಲ್ಗಳು: ಕಾರಣ?
ಮಧುಕರ್ ಅಂಗೂರ್ 2010 -2017 ನಡುವೆ ವಿಶ್ವವಿದ್ಯಾಲಯ ಮತ್ತು ಅದರ ಪ್ರಾಯೋಜಕತ್ವ ಹೊಂದಿದ್ದರು. ಈ ವೇಳೆ ಕಂಪನಿಯಿಂದ ಬೃಹತ್ ಮೊತ್ತದ ಹಣ ದುರುಪಯೋಗ ಪಡಿಸಿಕೊಂಡ ಕಾರಣ ದೂರು ದಾಖಲಾಗಿತ್ತು. ಹಲವಾರು ಕ್ರಿಮಿನಲ್ ಆರೋಪಗಳನ್ನು ಹೊಂದಿದ್ದು, ಪ್ರಸ್ತುತ ಜಾಮೀನಿನ ಮೇಲಿರುವ ಅಂಗೂರ್ ಹೊರಗಡೆ ಇದ್ದಾರೆ. ಇತ್ತೀಚೆಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ದೊಡ್ಡ ಮೊತ್ತವನ್ನು ಪಾವತಿಸಿದ್ದರು.
ಮತ್ತೊಂದೆಡೆ ಮಾಜಿ ಸಚಿವನೋರ್ವನಿಗೆ ಅಲಯನ್ಸ್ ಕಂಪನಿಯಿಂದ ಹಣ ಹೋದ ವಿಚಾರ ಕೂಡ, ಕಳೆದ ವಿಚಾರಣೆ ವೇಳೆ ಬಾಯ್ಬಿಬಿಟ್ಟಿದ್ದಾನೆ ಎನ್ನಲಾಗ್ತಿದೆ. ಸದ್ಯ ಇಡಿ ಸಮನ್ಸ್ ಜಾರಿ ಮಾಡಿದ್ದು, ಡಿಸೆಂಬರ್ 2 ರಂದು 11 ಗಂಟೆಗೆ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.