ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ ಎಸ್ ದ್ವಾರಕಾನಾಥ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅವರು, 40 ವರ್ಷ ಸಾಮಾಜಿಕ ಹೋರಾಟ ಮಾಡಿದವನು ನಾನು. ಪತ್ರಕರ್ತನಾಗಿ 20 ವರ್ಷ ಕೆಲಸ ಮಾಡಿದ್ದೇನೆ. ಇಂದು ಕಾಂಗ್ರೆಸ್ ಪಕ್ಷವನ್ನ ಸೇರಿದ್ದೇನೆ. ಜಾತಿ ಸಮೀಕರಣ, ಸಂಪನ್ಮೂಲ ಕ್ರೋಢೀಕರಣ ಮಾಡಿದ ಕಾರಣ ಅರಸು ಆಡಳಿತದಲ್ಲಿ ಯಶಸ್ವಿಯಾದ್ರು ಎಂದರು.
ನಾನು ಅದೇ ಗುರಿ ಇಟ್ಟುಕೊಂಡು ಬಂದಿದ್ದೇನೆ. ಸಣ್ಣ ಸಮುದಾಯ ಸೇರಿಸುವ ಕೆಲಸ ಮಾಡಬೇಕಿದೆ. ದಕ್ಕಲಿಗ ಸಮುದಾಯವನ್ನು ಮನಮೋಹನ್ ಸಿಂಗ್ ಗುರುತಿಸಿದ್ದರು. ಆ ಸಮುದಾಯದ ಅಭಿವೃದ್ಧಿಗೆ ನೆರವಾಗಿದ್ದರು. ಇಂತಹ ಸಮುದಾಯಗಳನ್ನು ಗುರುತಿಸಿದ್ದು ಕಾಂಗ್ರೆಸ್. ಆ ಕೆಲಸವನ್ನ ನಾನು ಮಾಡುತ್ತೇನೆ ಎಂದರು.
ಓದಿ: ಖಾದ್ಯ ತೈಲ ಸ್ವಾವಲಂಬನೆ, ಸಿರಿಧಾನ್ಯ ಉತ್ಪಾದನೆ ಹೆಚ್ಚಳ, ಕೃಷಿ ಉತ್ಪನ್ನ ರಫ್ತು.. ಇದು ಮೋದಿ ಟಾರ್ಗೆಟ್!