ETV Bharat / state

ಕೈ ಬಿಟ್ಟು ಕಮಲ ಮುಡಿದ ಮಾಜಿ ಶಾಸಕ ಕೊಳ್ಳೆಗಾಲ ಬಾಲರಾಜ್ - ಮಾಜಿ ಶಾಸಕ ಕೊಳ್ಳೆಗಾಲ ಎಸ್ ಬಾಲರಾಜ್

ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಶಾಸಕ ಎಸ್ ಬಾಲರಾಜ್ ಮರಳಿ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.

former-mla-balaraj-joins-bjp
ಕೈ ಬಿಟ್ಟು ಕಮಲ ಮುಡಿದ ಮಾಜಿ ಶಾಸಕ ಕೊಳ್ಳೆಗಾಲ ಬಾಲರಾಜ್
author img

By

Published : Apr 21, 2023, 5:25 PM IST

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪದಲ್ಲಿ ಪಕ್ಷಾಂತರ ಮುಂದುವರೆದಿದ್ದು, ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಶಾಸಕ ಕೊಳ್ಳೆಗಾಲ ಎಸ್ ಬಾಲರಾಜ್ ಬಿಜೆಪಿಗೆ ಸೇರ್ಪಡೆಯಾದರು. ಬಾಲರಾಜ್​ಗೆ ಬಿಜೆಪಿ ಧ್ವಜ ನೀಡುವ ಮೂಲಕ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷಕ್ಕೆ ಬರ ಮಾಡಿಕೊಂಡರು. ಬಿಜೆಪಿಯಿಂದಲೇ ಚುನಾವಣಾ ರಾಜಕೀಯ ಆರಂಭಿಸಿದ್ದ ಬಾಲರಾಜ್ ಘರ್ ವಾಪಸಿ ಆಗಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಜಿ ಶಾಸಕ ಬಾಲರಾಜ್ ಬೆಂಬಲಿಗರ ಜೊತೆ ಬಿಜೆಪಿ ಸೇರಿದರು. ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಯಡಿಯೂರಪ್ಪ, 'ಬಾಲರಾಜ್ ಬಿಜೆಪಿ ಸೇರಿದ್ದಾರೆ, ಚಾಮರಾಜನಗರ ಬಿಜೆಪಿಗೆ ಬಲ ಬಂದಂತಾಗಿದೆ. ಬಾಲರಾಜ್ ಮಾತ್ರ ಅಲ್ಲ, ಅವರ ಜೊತೆ ಅನೇಕ ಹಿರಿಯ ಮುಖಂಡರು ಬಂದಿದ್ದಾರೆ. ಎಲ್ಲರಿಗೂ ಸ್ವಾಗತ, ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದಾರೆ. ಗೌರವದಿಂದ ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ' ಎಂದರು.

'ಸಾಕಷ್ಟು ಬಲಿಷ್ಟ ಮುಖಂಡರು ಬಿಜೆಪಿ ಸೇರಿರುವುದು ನಮಗೆ ದೊಡ್ಡ ಶಕ್ತಿ ತಂದಿದೆ. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಕಾಂಗ್ರೆಸ್ ಸಂಪೂರ್ಣ ನೆಲಸಮ ಆಗಲಿದೆ. ಬಿಜೆಪಿ 135ರಿಂದ 140 ಕ್ಷೇತ್ರ ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ. ನಾಮಪತ್ರ ವಾಪಸ್​​ ದಿನಾಂಕದ ಬಳಿಕ ರಾಜ್ಯ ಪ್ರವಾಸ ಮಾಡಲಾಗುತ್ತದೆ' ಎಂದು ಬಿಎಸ್​ವೈ ಹೇಳಿದರು.

'ಇಂದು ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾರೆ. ರಾಜ್ಯದ ಬಹುತೇಕ ಕ್ಷೇತ್ರಕ್ಕೆ ಮೋದಿ ಬಂದು ಪ್ರಚಾರ ನಡೆಸಲಿದ್ದಾರೆ. ಬಹುಮತ ಪಡೆದು ಸರ್ಕಾರ ರಚನೆ ಮಾಡುವುದರಲ್ಲಿ ಯಾವುದೇ ಸಂಶಯ ಇಲ್ಲ. ಅನೇಕ ಪ್ರಮುಖರು ಬಿಜೆಪಿ ಸೇರಲು ಸಂಪರ್ಕಿಸುತ್ತಿದ್ದಾರೆ. ತತ್ವ ಸಿದ್ಧಾಂತ ಒಪ್ಪಿ ಬರುವವರಿಗೆ ನಮ್ಮಲ್ಲಿ ಸ್ವಾಗತವಿದೆ. ಇಂದಿನಿಂದಲೇ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ' ಎಂದು ಯಡಿಯೂರಪ್ಪ ಕರೆ ನೀಡಿದರು.

ಬಿಜೆಪಿ ಸೇರಿದ ಎಸ್. ಬಾಲರಾಜ್ ಮಾತನಾಡಿ, 'ಚುನಾವಣಾ ಆರಂಭಿಕ ಜೀವನದಲ್ಲಿ ನನಗೆ ಬಿಜೆಪಿಯು 1999ರಲ್ಲಿ ಮೊದಲ ಬಿ ಫಾರಂ ನೀಡಿತ್ತು, ಗೆಲ್ಲುವ ವಾತಾವರಣ ನಿರ್ಮಾಣ ಆಗಿತ್ತು. ಆದರೆ, 4,000 ಮತಗಳ ಅಂತರದಲ್ಲಿ ಸೋತಿದ್ದೆ. ಬಿಜೆಪಿ ಹಾಗೂ ಜೆಡಿಯು ಮೈತ್ರಿ ಕಾರಣಕ್ಕೆ ಆನಂತರ ಟಿಕೆಟ್ ತಪ್ಪಿತ್ತು. ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದೆ, ಧೃವನಾರಾಯಣ್ ಕಾರಣಕ್ಕೆ ಕಾಂಗ್ರೆಸ್ ಸೇರಿದೆ. 2018ರಲ್ಲಿ ಟಿಕೆಟ್ ತಪ್ಪಿಸಿದಾಗ ಮನವೊಲಿಕೆ ಮಾಡಿದ್ದರು. 2023ರಲ್ಲಿಯೂ ಅದೇ ಪುನರಾವರ್ತನೆ ಆಯಿತು. ಹಾಗಾಗಿ ನನಗಾದ ನೋವು ತೋರ್ಪಡಿಸಲು ಕಾಂಗ್ರೆಸ್ ತೊರೆದಿದ್ದೇನೆ' ಎಂದರು.

'ಪ್ರಧಾನಿ ನರೇಂದ್ರ ಮೋದಿ ನಾಯಕತ್ವ, ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬಿಜೆಪಿಗೆ ಬಂದಿದ್ದೇನೆ. ಇಲ್ಲಿಗೆ ಬರಲು ನನಗೆ ಮುಜುಗರವಿಲ್ಲ, ಕೊಳ್ಳೆಗಾಲ ಸುತ್ತಮುತ್ತ ಕ್ಷೇತ್ರದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ. ಲೋಕಸಭೆ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡುತ್ತೇನೆ. ಇದು ನನಗೆ ರಾಜಕೀಯ ಜೀವನದ ತಿರುವು, ಪಕ್ಷ ಸೇರಿ ಸುಮ್ಮನೆ ಕೂರಲ್ಲ. ಕೆಲಸ ಮಾಡಿ ತೋರಿಸುತ್ತೇನೆ, ಬಿಜೆಪಿ ಕಟ್ಟುತ್ತೇನೆ' ಎಂದು ಬಾಲರಾಜ್ ಹೇಳಿದರು.

ಬಾಲರಾಜ್​ ಅವರು ಈ ಹಿಂದೆ ರಾಜಶೇಖರ ಮೂರ್ತಿ ನೇತೃತ್ವದಲ್ಲಿ ಬಿಜೆಪಿ ಸೇರಿ 1999ರಲ್ಲಿ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿ ಸೋತಿದ್ದರು. ಬಳಿಕ 2004ರಲ್ಲಿ ಬಂಡಾಯವಾಗಿ ಗೆದ್ದು ಶಾಸಕರಾಗಿದ್ದರು.

ಇದನ್ನೂ ಓದಿ: ಹೈಕೋರ್ಟ್​ನಲ್ಲೂ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅರ್ಜಿ ವಜಾ: ಧಾರವಾಡ ಪ್ರವೇಶಕ್ಕಿಲ್ಲ ಅನುಮತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.