ETV Bharat / state

ಪಶ್ಚಿಮ ಬಂಗಾಳ ಬಿಜೆಪಿ ಶಾಸಕನ ಸಾವಿಗೆ ಆತಂಕ-ಸಂತಾಪ ಸೂಚಿದ ಸಿದ್ದರಾಮಯ್ಯ

author img

By

Published : Jul 13, 2020, 4:02 PM IST

ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ದೇಬೇಂದ್ರ ನಾಥ್ ರಾಯ್ ಮನೆಯ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಕೇಳಿ ಆಘಾತವಾಯಿತು. ಇವರ ಸಾವಿನ ನೈಜ ತನಿಖೆ ಆಗಬೇಕು. ಅಲ್ಲದೆ ಘಟನೆ ಕೊಲೆಯಾಗಿದ್ದರೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ ಮೂಲಕ ಆಗ್ರಹಿಸಿದ್ದಾರೆ.

former minister siddaramiah tweet
ಪಶ್ಚಿಮ ಬಂಗಾಳ ಶಾಸಕ ದೇಬೇಂದ್ರ ನಾಥ್ ರಾಯ್ ಸಾವಿಗೆ ಸಿದ್ದರಾಮಯ್ಯ ಆತಂಕ..!

ಬೆಂಗಳೂರು: ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ದೇಬೇಂದ್ರ ನಾಥ್ ರಾಯ್ ಸಾವಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

former minister siddaramiah tweet
ಪಶ್ಚಿಮ ಬಂಗಾಳ ಶಾಸಕ ದೇಬೇಂದ್ರ ನಾಥ್ ರಾಯ್ ಸಾವಿಗೆ ಸಿದ್ದರಾಮಯ್ಯ ಆತಂಕ

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಶಾಸಕ ದೇಬೇಂದ್ರ ನಾಥ್ ರಾಯ್ ಮನೆಯ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಕೇಳಿ ಆಘಾತವಾಯಿತು. ಇವರ ಸಾವಿನ ನೈಜ ತನಿಖೆ ಆಗಬೇಕು. ಅಲ್ಲದೇ ಘಟನೆ ಕೊಲೆಯಾಗಿದ್ದರೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕು. ಅವರ ಹಿತೈಷಿಗಳಿಗೆ ನನ್ನ ಸಂತಾಪ ಸೂಚಿಸುತ್ತೇನೆ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ಹೆಮತಾಬಾದ್​ ಶಾಸಕ ದೇಬೇಂದ್ರ ನಾಥ್ ರಾಯ್​, ಬಿಂದಾಲ್ ಗ್ರಾಮದಲ್ಲಿ ಇಂದು ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಕುಟುಂಬ ಸದಸ್ಯರು ಇದನ್ನು ಕೊಲೆ ಎಂದು ಆರೋಪಿಸಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಅಸಲಿ ವಿಷಯ ಹೊರ ಬೀಳಲಿದೆ. ಈ ಹಿಂದೆ ಸಿಪಿಐ(ಎಂ) ಶಾಸಕರಾಗಿದ್ದ ರಾಯ್ 2019ರಲ್ಲಿ ಪಕ್ಷ ಬದಲಿಸಿ ಬಿಜೆಪಿಗೆ ಸೇರಿದ್ದರು. ರಾಯ್ ಅವರು ಬಿಜೆಪಿಯ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.