ಬೆಂಗಳೂರು: ನಂಬಿಕೆ ದ್ರೋಹ ಪ್ರಕರಣದಲ್ಲಿ ಪ್ರೇಮಕುಮಾರಿ ಸಲ್ಲಿಸಿದ್ದ ಅರ್ಜಿಯನ್ನ ವಿಚಾರಣೆಗೆ ತೆಗೆದುಕೊಂಡ ಜನಪ್ರತಿನಿಧಿ ನ್ಯಾಯಾಲಯ ಬಿಜೆಪಿಯ ಕೆ.ಆರ್. ನಗರ ಶಾಸಕಾರದ ಮಾಜಿ ಸಚಿವ ರಾಮ್ದಾಸ್ ಅವರಿಗೆ ಸಮನ್ಸ್ ನೀಡಿದೆ.
ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ರಾಮ್ ದಾಸ್ಗೆ ಸಮನ್ಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ರಾಮ್ದಾಸ್ ಪ್ರೇಮಕುಮಾರಿ ಅವರನ್ನು ಮದುವೆಯಾಗುವುದಾಗಿ ಹೇಳಿ ವಂಚನೆ ಮಾಡಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ನ್ಯಾಯ ದೊರಕಿಸಿ ಕೊಡಿ ಎಂದು ಪ್ರೇಮಕುಮಾರಿ ನ್ಯಾಯಾಲಯದ ಮೊರೆ ಹೋಗಿದ್ದರು.
ರಾಮ್ದಾಸ್ ಮತ್ತು ಪ್ರೇಮಕುಮಾರಿ ನಡುವಿನ ಮೋಸ ಹಾಗೂ ವಂಚನೆ ಪ್ರಕರಣದಲ್ಲಿ, ಮಾಜಿ ಸಚಿವರ ಪಾತ್ರ ಇಲ್ಲವೆಂದು ಮೈಸೂರಿನ ಸರಸ್ವತಿಪುರಂ ಠಾಣೆ ಪೊಲೀಸರು ಸಲ್ಲಿಸಿದ್ದ ಬಿ ರೀಪೊರ್ಟ್ನ್ನ ನ್ಯಾಯಾಲಯ ರದ್ದು ಪಡಿಸಿದೆ. ಕೋರ್ಟ್ ವಿಚಾರಣೆಯಿಂದ ರಾಮ್ದಾಸ್ ಮತ್ತು ಪ್ರೇಮಕುಮಾರಿ ಅವರ ಪ್ರೇಮ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ.