ETV Bharat / state

"ಬಿಜೆಪಿಗೆ ಯಡಿಯೂರಪ್ಪ ಒಬ್ಬರನ್ನೇ ನಂಬಿ ಬಂದಿಲ್ಲ, ಮೋದಿ ಪಾರದರ್ಶಕ ಆಡಳಿತ ನೋಡಿ ಬಂದಿದ್ದೇವೆ" - ಬೆಂಗಳೂರಿನಲ್ಲಿ ಯಡಿಯೂರಪ್ಪ ಭೇಟಿಯಾದ ಮಾಜಿ ಸಚಿವ ಎಂಟಿಬಿ ನಾಗರಾಜ್

ಬಿಜೆಪಿಗೆ ಯಡಿಯೂರಪ್ಪ ಒಬ್ಬರನ್ನೇ ನಂಬಿ ಬಂದಿಲ್ಲ. ಮೋದಿ ಅವರ ಪಾರದರ್ಶಕ ಆಡಳಿತ ನೋಡಿ ಬಂದಿದ್ದೇವೆ. ಸಂಪುಟದಲ್ಲಿ ಯಾರನ್ನು ಕೈ ಬಿಡುತ್ತಾರೆ ಉಳಿಸುತ್ತಾರೆ ಎಂಬ ಮಾಹಿತಿ ಇಲ್ಲ. ನಮಗೆ ಯಾವುದೇ ಆತಂಕ ಇಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

Former Minister MTB Nagaraj on Next CM
"ಬಿಜೆಪಿಗೆ ಯಡಿಯೂರಪ್ಪ ಒಬ್ಬರನ್ನು ನಂಬಿ ಬಂದಿಲ್ಲ"
author img

By

Published : Jul 27, 2021, 12:31 PM IST

Updated : Jul 27, 2021, 12:54 PM IST

ಬೆಂಗಳೂರು: ಸಂಪುಟದಲ್ಲಿ ಯಾರನ್ನು ಕೈ ಬಿಡುತ್ತಾರೆ ಅಥವಾ ಉಳಿಸುತ್ತಾರೆ ಎಂಬ ಮಾಹಿತಿ ಇಲ್ಲ. ನಮಗೆ ಯಾವುದೇ ಆತಂಕ ಇಲ್ಲ, ಯಾರೇ ಸಿಎಂ ಆದರೂ ಭಯ ಇಲ್ಲ.‌ ಒಳ್ಳೆಯ ರೀತಿಯ ಆಡಳಿತ ನಡೆಸುವವರು ಮುಖ್ಯಮಂತ್ರಿ ಆಗಲಿ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಮಾಜಿ ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ

ನಿರ್ಗಮಿತ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಯಾವುದೇ ಆತಂಕ ಇಲ್ಲ. ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆ ಆಗುತ್ತೆ ಎಂಬ ನಿರೀಕ್ಷೆ ಇರಲಿಲ್ಲ. ಇವೆಲ್ಲವೂ ಈಗ ಆದ ನಿರ್ಧಾರ. ಯಡಿಯೂರಪ್ಪ ರಾಜೀನಾಮೆ ನೀಡುವಾಗ ಅವರ ರಾಜಕೀಯ ಏಳು-ಬೀಳುಗಳ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಭಾವುಕರಾಗಿದ್ದಾರೆ ಎಂದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ವಿಧಾನ ಪರಿಷತ್​ ಸದಸ್ಯ ಹೆಚ್​ ವಿಶ್ವನಾಥ್ ಆರೋಪ ವೈಯಕ್ತಿಕವಾಗಿದ್ದು, ಅಧಿಕಾರದ ಆಸೆಯಿಂದ ರಾಜಕೀಯ ಮಾಡಿಲ್ಲ. ಸಚಿವ ಸ್ಥಾನ ಕೈತಪ್ಪುವ ಬಗ್ಗೆ ಯಾವುದೇ ಆತಂಕ ಇಲ್ಲ. ಮಿತ್ರಮಂಡಳಿಯ ಎಲ್ಲರೂ ಒಗ್ಗಟ್ಟಾಗಿದ್ದೇವೆ. ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದು ಸ್ಪಷ್ಟಪಡಿಸಿದರು.

ಓದಿ: ‘ಮುಂದಿನ ಸಿಎಂ ಸಿದ್ದರಾಮಯ್ಯ’.. ಬೆಳಗಾವಿಯಲ್ಲೂ ವಿಪಕ್ಷ ನಾಯಕನ ಪರ ಘೋಷಣೆ

ಬಿಜೆಪಿಗೆ ಯಡಿಯೂರಪ್ಪ ಒಬ್ಬರನ್ನು ನಂಬಿ ಬಂದಿಲ್ಲ. ಮೋದಿ ಅವರ ಪಾರದರ್ಶಕ ಆಡಳಿತ ನೋಡಿ ಬಂದಿದ್ದೇವೆ. ವರಿಷ್ಠರು ಯಾರನ್ನಾದರೂ ಮಾಡಲಿ. ಆದರೆ, ಉತ್ತಮ ಆಡಳಿತ ನೀಡುವ ಪ್ರಾಮಾಣಿಕರು ಸಿಎಂ ಆಗಲಿ. ಯಾವುದೇ ಆತಂಕ ಬೇಡ, ಒಳ್ಳೆಯದಾಗುತ್ತೆ ಅಂತ ಯಡಿಯೂರಪ್ಪ ಅಭಯ ನೀಡಿ ಎಂದು ಎಂಟಿಬಿ ತಿಳಿಸಿದರು.

Last Updated : Jul 27, 2021, 12:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.