ETV Bharat / state

ನಮ್ಮ ಪಕ್ಷದಿಂದ ಕೆಲವು ಗ್ರಹಗಳು ಕಾಂಗ್ರೆಸ್​ಗೆ ಹೋಗಿದ್ದಾವೆ, ಇನ್ನಷ್ಟೂ ಹೋಗಬೇಕಿದೆ: ಹೆಚ್.ಡಿ ರೇವಣ್ಣ

ಕುಮಾರಣ್ಣ ಹತ್ರ ಕೆಲವು ಗ್ರಹಗಳು ಇದ್ದವು. ಅವು ಈಗ ಡಿಕೆಶಿ ಹತ್ರ ಸೇರಿವೆ. ಕುಮಾರಣ್ಣ ಕೆಲ ದಿನ ನೋವು ಅನುಭವಿಸಿದರು, ಆ ಗ್ರಹದ ಎಫೆಕ್ಟ್ ಡಿಕೆಶಿ ಅನುಭವಿಸೋದು ಬೇಡ ಅಂತ ನಮ್ಮ ಮನವಿ- ಹೆಚ್‌.ಡಿ.ರೇವಣ್ಣ

Former Minister HD Revanna Press Meet in Bangalore
ಮಾಜಿ ಸಚಿವ ಹೆಚ್.ಡಿ ರೇವಣ್ಣ
author img

By

Published : Mar 15, 2021, 5:19 PM IST

ಬೆಂಗಳೂರು: ರಾಜ್ಯದಲ್ಲಿ 2023 ಕ್ಕೆ ಮತ್ತೊಮ್ಮೆ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಭವಿಷ್ಯ ನುಡಿದಿದ್ದಾರೆ.

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಂದು ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೇವೋ, ಮೈತ್ರಿ ಸರ್ಕಾರ ಬರುತ್ತದೆಯೋ ಹೇಳುವುದಿಲ್ಲ. ಆದರೆ ಅಧಿಕಾರಕ್ಕೆ ಬರುವುದು ಪಕ್ಕಾ ಎಂದರು. ಕುಮಾರಣ್ಣ ಹತ್ರ ಕೆಲವು ಗ್ರಹಗಳು ಇದ್ದವು. ಅವು ಈಗ ಡಿಕೆಶಿ ಹತ್ರ ಸೇರಿವೆ. ಕುಮಾರಣ್ಣ ಕೆಲ ದಿನ ನೋವು ಅನುಭವಿಸಿದರು, ಆ ಗ್ರಹದ ಎಫೆಕ್ಟ್ ಡಿಕೆಶಿ ಅನುಭವಿಸೋದು ಬೇಡ ಅಂತ ನಮ್ಮ ಮನವಿ. ಇನ್ನೂ ಕೆಲವು ಗ್ರಹಗಳಿವೆ, ಅವು ಹೋದರೆ ಎಲ್ಲವೂ ಸ್ವಚ್ಛ ಆಗುತ್ತೆವೆ. ಕಾಂಗ್ರೆಸ್‌ನಲ್ಲಿ ಗ್ರಹಗಳು ಕಮ್ಮಿ ಇವೆ. ಈ ಗ್ರಹಗಳೆಲ್ಲ ಹೋದರೆ, ಅವರಿಗೆ ಒಳ್ಳೆಯದಂತೂ ಆಗಲ್ಲ. ಭಗವಂತ ಶಿವಕುಮಾರ್ ಅವರಿಗೆ ಒಳ್ಳೆಯದು ಮಾಡಲಿ. ಒಂಭತ್ತು ಗ್ರಹಗಳು ಸುತ್ತುತ್ತವೆ. ಗ್ರಹಗಳು ಪಥ ಬದಲಿಸುತ್ತಿವೆ. ಕೆಪಿಸಿಸಿ ಅಧ್ಯಕ್ಷರು ಅದನ್ನ ಬರಮಾಡಿಕೊಳ್ಳುತ್ತಿದ್ದಾರೆ. ಕೆಟ್ಟ ಗ್ರಹಗಳೆಲ್ಲ ಹೋದರೆ ಜೆಡಿಎಸ್ ಪಕ್ಷಕ್ಕೆ ಒಳ್ಳೆಯದು. 2023ಕ್ಕೆ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ. ಕೆಟ್ಟ ಗ್ರಹಗಳೆಲ್ಲ ಹೋದಷ್ಟು ಒಳ್ಳೆಯದೇ ಎಂದರು.

ಕಲಾಪ ಚರ್ಚೆ ನಿಯಮ 62ರಲ್ಲಿ ಚರ್ಚೆ ಕೈಗೆತ್ತಿಕೊಳ್ಳುವ ಸಂಬಂಧ ಪಕ್ಷದ ನಾಯಕ ಮತ್ತು ಸದಸ್ಯರು ಸೇರಿ ಶಾಸಕಾಂಗ ಸಭೆ ನಡೆಸಿದ್ದೇವೆ. 2019-20, 20-21 ನೇ ಸಾಲಿನಲ್ಲಿ ಕೊಟ್ಟ ಕಾಮಗಾರಿ ಟೆಂಡರ್ ಹಂತದಲ್ಲಿದ್ದವು. ಕೆಲವು ಕಾಮಗಾರಿ ಆರಂಭವಾಗಿದ್ದವು. ಕೆಲವು ಇಲಾಖೆ ಹಂತದಲ್ಲಿದ್ದವು. ಸಿಎಂ ಹೇಳಿದ್ದರು ದ್ವೇಶದ ರಾಜಕಾರಣ ಮಾಡಲ್ಲ, ಎಲ್ಲಾ ಕಾಮಗಾರಿ ಮಾಡಿಸೋಣ ಅಂತ. ಕಾವೇರಿ ಬೇಸಿನ್‌ನಲ್ಲಿ ಮೂರ್ನಾಲ್ಕು ಜನರಿಗೆ ಟೆಂಡರ್ ನೀಡಿದ್ದಾರೆ. ಕಾವೇರಿ ನಿಗಮದಲ್ಲಿ 515 ಕೋಟಿ ಕೊಡಲಾಗಿದೆ. ರೈತರು ಜಮೀನು ಕಳೆದುಕೊಂಡಿದ್ದಾರೆ, ಅವರಿಗೆ ಜಮೀನು ಇಲ್ಲ, ಹಣವೂ ಇಲ್ಲ. ಒಬ್ಬನಿಗೆ ಹಣ ಕೊಟ್ಟು, ಮತ್ತೊಬ್ಬರಿಗೆ ನೀಡಿಲ್ಲ. ರಾಜ್ಯದ ಮೂರು ಪಕ್ಷದ ಶಾಸಕರಿಗೆ, ಹೆಚ್.ಡಿ.ಕೆ ಸಿಎಂ ಆಗಿದ್ದಾಗ ಮೀಸಲಿಟ್ಟ ಹಣ ಕೊಡುವಂತೆ ಆಗ್ರಹ ಮಾಡುತ್ತೇವೆ ಎಂದರು.

ಇದನ್ನೂ ಓದಿ: 23 ದಿನಗಳ ಪಂಚಮಸಾಲಿ ಧರಣಿ ಸತ್ಯಾಗ್ರಹ ತಾತ್ಕಾಲಿಕ ಅಂತ್ಯ

ಇಷ್ಟು ದಿನ ಕೊರೋನಾ ಅಂತ ಹೇಳ್ತಿದರು. ಈಗಲಾದರು ಅನುದಾನ ಬಿಡುಗಡೆ ಮಾಡಿ, ಇಲ್ಲದೇ ಹೋದಲ್ಲಿ ಧರಣಿ ಮಾಡೋದಾಗಿ ಎಚ್ಚರಿಕೆ ನೀಡಿದ ಅವರು, ಚುನಾವಣೆ ಬಂದಾಗ ಮಾತ್ರವೇ ಪಕ್ಷ, ಇಲ್ಲದೇ ಹೋದಾಗ ಜನರಿಗೆ ಕೆಲಸ ಮಾಡಬೇಕು ಎಂದರು.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಚಾರ ಮಾತನಾಡಿ, ರಾಜಕಾರಣ ಪ್ರತ್ಯೇಕ. ವೈಯಕ್ತಿಕವಾಗಿ ರಮೇಶ್ ಜಾರಕಿಹೊಳಿಗೆ ಕರೆ ಮಾಡಿದ್ದೆ. ಸಣ್ಣ ಸಮಾಜದಲ್ಲಿ ರಾಜಕಾರಣಕ್ಕೆ ಬಂದಿದ್ದಾರೆ. ಇಂತಹವು ಬಂದಾಗ ಸಮಾಜದಲ್ಲಿ ಎದುರಿಸಿ ನಿಲ್ಲಬೇಕು. ನನಗೆ ಯಾವುದೇ ವೈಯಕ್ತಿಕ ಇಲ್ಲ. ನಾಯಕ ಸಮುದಾಯದ ನಾಯಕ ಅವರು. ನಾನು ಜಾರಕಿಹೊಳಿ ಬಗ್ಗೆ ಎಂದೂ ಕೆಟ್ಟದಾಗಿ ಮಾತನಾಡಿಲ್ಲ. ಮೈತ್ರಿ ಸರ್ಕಾರ ಬಿದ್ದಾಗಲೂ ಮಾತನಾಡಿಲ್ಲ ಎಂದು ಹೇಳಿದರು

ರಮೇಶ್ ಜಾರಕಿಹೊಳಿ ಇಂದ ಮಹಾನಾಯಕ ಆರೋಪ ವಿಚಾರ ಪ್ರಸ್ತಾಪ ಮಾಡಿ, ಆ ಮಹಾನಾಯಕ ಯಾರು ಅಂತ ಗೊತ್ತಿಲ್ಲ. ಯಾರಿಗಾದರು ಪಕ್ಷ ಮುಖ್ಯ. ಯಾರೇ ಮನುಷ್ಯನಿಗೆ ನೋವಾದಾಗ ಸಮಾಧಾನ ಮಾಡಬೇಕು. ಆತ್ಮ ಸ್ಥೈರ್ಯ ತುಂಬಬೇಕು. ವಿಡಿಯೋದಲ್ಲಿ ನಾನಿಲ್ಲ ಅಂತ ಅವರು ಹೇಳಿರುವಾಗ, ಸಾಬೀತು ಮಾಡಲಿ. ನಾವೆಲ್ಲ ಅವರ ಜೊತೆ ನಿಲ್ಲುತ್ತೇವೆ. ಯಾರೇ ಕಷ್ಟದಲ್ಲಿರಲಿ ಧೈರ್ಯ ತುಂಬಬೇಕು. ಯಾರು ಶಾಶ್ವತ ಅಲ್ಲ, ಅಧಿಕಾರವೂ ಶಾಶ್ವತ ಅಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.