ETV Bharat / state

ರಾಜ್ಯಕ್ಕೆ ಮೋದಿ ಮತ್ತೆ ಬಂದರೆ ಈ ಸರ್ಕಾರ ಇರುವುದಿಲ್ಲ.. ಸರ್ಕಾರಕ್ಕೆ ನೂರು ದಿನಗಳ ಕರಾಳ ದಿನ: ಮಾಜಿ ಸಚಿವ ಆರ್ ಅಶೋಕ್ - ಲೋಕಸಭೆ ಚುನಾವಣೆ

ಲೋಕಸಭೆ ಚುನಾವಣೆ ನಂತರ ಈ ಸರ್ಕಾರ ಇರುವುದಿಲ್ಲ ಎಂಬ ಭಯ ಕಾಂಗ್ರೆಸ್​ಗೆ ಉಂಟಾಗಿದೆ ಎಂದು ಮಾಜಿ ಸಚಿವ ಆರ್​ ಅಶೋಕ್ ಹೇಳಿದ್ದಾರೆ.

former-dcm-r-ashok-slams-state-govt
ಮಾಜಿ ಸಚಿವ ಆರ್ ಅಶೋಕ್
author img

By ETV Bharat Karnataka Team

Published : Aug 29, 2023, 4:34 PM IST

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಮತ್ತೆ ಬಂದರೆ ಈ ಸರ್ಕಾರ ಇರುವುದಿಲ್ಲ. ಇದು ಸರ್ಕಾರಕ್ಕೆ ನೂರು ದಿನಗಳ ಕರಾಳ ದಿನ ಎಂದು ಮಾಜಿ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಆದ ಮೇಲೆ ಈ ಸರ್ಕಾರ ಇರಲ್ಲ ಎಂಬ ಭಯ ಕಾಂಗ್ರೆಸ್​ಗೆ ಉಂಟಾಗಿದೆ. ಒಂದೇ ಒಂದು ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ಆಗುತ್ತಿಲ್ಲ. ನಗರ ಪ್ರದೇಶಗಳಲ್ಲಿ ಕಸ ವಿಲೇವಾರಿ ಆಗಿಲ್ಲ. ಎಲ್ಲ ಕಡೆ ಗುತ್ತಿಗೆದಾರರು ಕೆಲಸ ನಿಲ್ಲಿಸಿದ್ದಾರೆ. ಕಳೆದ ನೂರು ದಿನಗಳಲ್ಲಿ ಅಭಿವೃದ್ಧಿ ಕುಂಠಿತ ಅಲ್ಲ, ಸ್ಥಗಿತ ಆಗಿದೆ. ಕಾಂಗ್ರೆಸ್​ಗೆ ಲೋಕಸಭೆ ಚುನಾವಣೆ ನಂತರ ಸರ್ಕಾರ ಉಳಿಯಲ್ಲ ಎಂಬ ಭಯ ಉಂಟಾಗಿದ್ದು, ಮತ್ತೊಮ್ಮೆ ಮೋದಿ ಅವರು ಬಂದರೆ ಈ ಸರ್ಕಾರವೇ ಇರುವುದಿಲ್ಲ ಎಂದು ಹೇಳಿದರು.

ನಮ್ಮ ಆಡಳಿತಾವಧಿಯಲ್ಲಿ ಸರ್ಕಾರ ಎಲ್ಲಿಗೆ ನಿಂತಿತ್ತೋ ಅಲ್ಲೇ ಈ ಸರ್ಕಾರ ನಿಂತಿದೆ. ಹೊಸ ಯೋಜನೆಗಳಿಗೆ ಎಲ್ಲೂ ಚಾಲನೆ ನೀಡಲಾಗಿಲ್ಲ. ಬೆಂಗಳೂರಿನಂತ ನಗರದಲ್ಲೇ ಲೋಡ್ ಶೆಡ್ಡಿಂಗ್, ಉಚಿತ ವಿದ್ಯುತ್ ನೀಡಲು ಲೋಡ್ ಶೆಡ್ಡಿಂಗ್, ಅಭಿವೃದ್ಧಿ ಪರವಾಗಿ ಕಾಂಗ್ರೆಸ್​ ನಾಯಕರಿಂದ ಒಂದೇ ಒಂದು ಹೇಳಿಕೆ ಇಲ್ಲ. ರಾಜ್ಯದ ಎಲ್ಲ ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ತನಿಖೆ ಮಾಡಿ ಬಿಲ್ ಕೊಡಿ ಎಂದು ಸಿಎಂ ಹೇಳಿದ್ದಾರೆ. ಪಾಪ ಗುತ್ತಿಗೆದಾರರು ಮೋಸ ಹೋಗಿದ್ದಾರೆ. ಬಿಲ್ ಕೊಡೋಕಾಗದೇ ತನಿಖೆ ತನಿಖೆ ಎಂದು ಹೇಳ್ತಿದ್ದಾರೆ. ದುಡ್ಡಿಲ್ಲ ಎಂಬ ಕಾರಣಕ್ಕೆ ಎಲ್ಲವನ್ನು ನಿಲ್ಲಿಸಿದ್ದಾರೆ. ತನಿಖೆ ನೆಪದಲ್ಲಿ ಯೋಜನೆಗಳನ್ನು ನಿಲ್ಲಿಸಿದ್ದಾರೆ ಎಂದರು. 30-35 ಮಂತ್ರಿಗಳಿದ್ದಾರೆ ಸಾವಿರಾರು ಇಂಜಿನಿಯರ್​ಗಳಿದ್ದಾರೆ. ಕರ್ನಾಟಕದಲ್ಲಿ ಇರುವ ಎಲ್ಲ ಇಂಜಿನಿಯರ್​ಗಳು, ಗುತ್ತಿಗೆದಾರರು ಕಳ್ಳರು ಅಂತಂದ್ರೆ ಹೇಗೆ?. ಶೇ.10ರಷ್ಟು ತಪ್ಪಿರಬಹುದು, 20% ತಪ್ಪಿರಬಹುದು, 40-50% ತಪ್ಪಿರಬಹುದು. ಅಥವಾ ಎಲ್ಲವೂ ತಪ್ಪಿರಬಹುದು ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಹೇಳಿಕೆಗೆ ತಿರುಗೇಟು ನೀಡಿದ ಅಶೋಕ್, ಇದೇ ಜಗದೀಶ್ ಶೆಟ್ಟರ್ ನಮ್ಮಲ್ಲಿ ಇದ್ದಾಗ ನಾಲ್ಕು ಬಾರಿ ಸರ್ಕಾರದ ವಿರುದ್ಧ ಚಾರ್ಜ್ ಶೀಟ್ ಮಾಡಿದ್ದರು. ಆಗ ಅವರಿಗೆ ಕೆಲಸ ಇಲ್ಲದೆ ಚಾರ್ಜ್ ಶೀಟ್ ಮಾಡಿದ್ರಾ?. ಆಗ ಕೆಲಸ ಇಲ್ಲದೆ ಮಾಡಿದ್ರೆ ಈಗಲೂ ಹಾಗೆ ಅಂದುಕೊಳ್ಳಲಿ ಎಂದು ಹೇಳಿದ್ರು.

ಇದನ್ನೂ ಓದಿ : ನಾಡಹಬ್ಬ ದಸರಾ ಉದ್ಘಾಟಿಸಲಿರುವ ಹಂಸಲೇಖ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.