ಬೆಂಗಳೂರು: ಮಾಜಿ ಕಾರ್ಪೊರೇಟರ್ ಧನರಾಜ್ ವಿರುದ್ಧ ಮಹಿಳಾ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, ಪ್ರಕರಣ ದಾಖಲಾಗಿದೆ.
ಈ ಹಿಂದೆ ಚಿಕ್ಕಪೇಟೆ ಕ್ಷೇತ್ರದ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ನ ಕಾರ್ಪೊರೇಟರ್ ಆಗಿದ್ದ ಧನ್ರಾಜ್ ಲಾಲ್ ಬಾಗ್ ರಸ್ತೆಯಲ್ಲಿರುವ ಕಲ್ಕತ್ ಟ್ಯೂಬ್ ಅಂಗಡಿಗೆ ತೆರಳಿದ್ದರು. ಅಂಗಡಿಯಲ್ಲಿ ಪೈಪ್ ಕೊಟೇಷನ್ ಕೇಳಿ ಕಡಿಮೆ ಬೆಲೆಗೆ ನೀಡಿ ಎಂದು ಕಿರಿಕ್ ಮಾಡಿದ್ದಾರೆ.
ಓದಿ: ಡ್ರಗ್ಸ್ ಪೆಡ್ಲರ್ ವಿನಯ್ನಿಂದ ಬಯಲಾಗುತ್ತಾ ಮತ್ತಷ್ಟು ನಟಿಯರ ಬಣ್ಣ ?
ತನಗೆ ಬೇಕಾದ ಬ್ರಾಂಡೆಡ್ ವಸ್ತುಗಳನ್ನು ಕಡಿಮೆ ಬೆಲೆಗೆ ನೀಡುವಂತೆ ಅಂಗಡಿ ಮಾಲೀಕ ಸಾವರ್ ಮಲ್ ಅಗರ್ವಾಲ್ಗೆ ಧಮ್ಕಿ ಹಾಕಿದ್ದಾರೆ. ಇದನ್ನು ಗಮನಿಸಿದ ಅಲ್ಲೇ ಇದ್ದ ಅಂಗಡಿ ಮಾಲೀಕನ ಸೊಸೆ ಪೂಜಾ ಅಗರ್ವಾಲ್ ಪ್ರಶ್ನಿಸಿದ್ದಾರೆ. ಈ ವೇಳೆ ಮಾಜಿ ಕಾರ್ಪೋರೇಟರ್ ಪೂಜಾ ಅಗರ್ವಾಲ್ ಜೊತೆ ಮಾತನಾಡಿ, ನಾನು ಸಾವಿರ ಜನರಿಂದ ಚುನಾಯಿತನಾದವ ಎಂದು ಅವಾಜ್ ಹಾಕಿದ್ದಾರಂತೆ.
ಈ ಕುರಿತು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಮಾಜಿ ಕಾರ್ಪೊರೇಟರ್ ಧನರಾಜ್ ವಿರುದ್ಧ ಪೂಜಾ ಎಫ್ ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ.