ETV Bharat / state

ರಾಷ್ಟ್ರಪತಿ ಚುನಾವಣೆ : ದ್ರೌಪದಿ ಮುರ್ಮುಗೆ ಬೆಂಬಲದ ಸುಳಿವು ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ

ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಹತ್ಯೆ ಖಂಡನೀಯ. ಇದು ಅಮಾನುಷವಾದ ಘಟನೆ. ಇದರ ಹಿಂದೆ ಇಬ್ಬರು ವ್ಯಕ್ತಿಗಳು ಇದ್ದಾರೆ. ಕತ್ತಿ‌ ಜಳಪಿಸಿದ ವಿಡಿಯೋ ವೈರಲ್ ಆಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಆ ಸರ್ಕಾರ ಹೇಳಿದೆ. ಬಂಧಿಸುವುದರ ಜೊತೆಗೆ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಸರಿಯಾದ ಶಿಕ್ಷೆ ಆಗಲೇಬೇಕು. ಇಂತಹ ಸಂಘಟನೆ, ವ್ಯಕ್ತಿಗಳ ದಮನ ಆಗಲೇಬೇಕು ಎಂದು ಮಾಜಿ ಸಿಎಂ ಹೆಚ್​ಡಿಕೆ ಒತ್ತಾಯಿಸಿದ್ದಾರೆ..

author img

By

Published : Jun 29, 2022, 5:10 PM IST

ಮಾಜಿ ಸಿಎಂ ಕುಮಾರಸ್ವಾಮಿ
ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು : ರಾಷ್ಟ್ರಪತಿ ಆಯ್ಕೆ ಸಂಬಂಧ ಬಿಜೆಪಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು, ಈಗಾಗಲೇ ಅವರಿಗೆ ಬಹುಮತದ ಸಂಖ್ಯೆ ಸಿಕ್ಕಿದೆ. ನಮ್ಮ ಪಕ್ಷದ ಬೆಂಬಲದ ಅವಶ್ಯಕತೆ ಇಲ್ಲ. ಆದರೂ ನಮ್ಮ ಬೆಂಬಲ ಕೇಳಿದ್ದಾರೆ. ಅದು ಅವರ ಔದಾರ್ಯ ಎಂದು ಬೆಂಬಲ ನೀಡುವ ಬಗ್ಗೆ ಪರೋಕ್ಷವಾಗಿ ಹೇಳಿದರು.

ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಬೆಂಬಲಿಸುವ ಕುರಿತಂತೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿರುವುದು..

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುರ್ಮು ಈಗಾಗಲೇ ಗೆದ್ದಾಗಿದೆ.‌ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಮುರ್ಮು ಅವರು ಎರಡು ಬಾರಿ ದೂರವಾಣಿ ಕರೆ ಮಾಡಿ ಬೆಂಬಲಕ್ಕೆ ಮನವಿ ಮಾಡಿದ್ದಾರೆ. ಬೆಂಗಳೂರಿಗೆ ಬಂದು ಮನವಿ ಮಾಡಲು‌ ಅವರು ಸಮಯ ಕೋರಿದ್ದರು. ಅವರು ಖುದ್ದು ಬಂದು ಮನವಿ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಚುನಾವಣಾ ಅಭ್ಯರ್ಥಿಯಾಗಿ ಮುರ್ಮು ಕಣದಲ್ಲಿದ್ದಾರೆ. ಅವರ ಹಿನ್ನೆಲೆ ಏನು?. ಎಷ್ಟು ಕಷ್ಟ ಅನುಭವಿಸಿದ್ದಾರೆ ಅಂತಾ ನಾನು ಗಮನಿಸಿದ್ದೇನೆ ಎಂದರು.

ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಹಾಳು ಮಾಡಿವೆ : ಇಲ್ಲಿ ಕಾಂಗ್ರೆಸ್, ಬಿಜೆಪಿ ಅನ್ನುವ ಪ್ರಶ್ನೆ ಅಲ್ಲ. ಬಿ ಟೀಂ ಅನ್ನುವ ಪ್ರಶ್ನೆ ರಾಷ್ಟ್ರಪತಿ ಚುನಾವಣೆಗೆ ಬರಲ್ಲ. ನಾವು ತೆಗೆದುಕೊಂಡ ನಿರ್ಧಾರ ಬಿಜೆಪಿ ಬಿ ಟೀಂ ಅಂತಾ ಪ್ರಚಾರ ಮಾಡೋದು ಇದಕ್ಕೆ ಅನ್ವಯ ಆಗಲ್ಲ. ಹಾಗಾಗಿ, ಪಕ್ಷದ ನಾಯಕರು ಕುಳಿತು ಇಬ್ಬರು ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡಿ ನಂತರ ತೀರ್ಮಾನ ಮಾಡಲಾಗುವುದು ಎಂದರು. ರಾಜ್ಯದ ಜನರಿಗೆ ವಿದ್ಯುತ್ ಶಾಕ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗ ಹೆಚ್ಚಳ ಮಾಡಿ ಚುನಾವಣೆ ಸಮಯದಲ್ಲಿ ‌ಕಡಿಮೆ ಮಾಡ್ತಾರೆ. ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಹಾಳು ಮಾಡಿವೆ ಎಂದು ಕಿಡಿಕಾರಿದರು.

ವಿದ್ಯುತ್ ಸಚಿವರು ಕೆಇಆರ್​ಸಿ ದರ ಹೆಚ್ಚಳ ಮಾಡುತ್ತದೆಂದು ಹೇಳುತ್ತಾರೆ. ನಿವೃತ್ತ ಐಎಎಸ್ ಅಧಿಕಾರಿ ಗುರು ಚರಣ್ ಇಂಧನ ಇಲಾಖೆ ಪರಿಸ್ಥಿತಿ ಬಗ್ಗೆ ವರದಿ ಕೊಟ್ಟಿದ್ದಾರೆ. ಎಸ್ಕಾಂಗಳು ಸೇರಿ ಎಲ್ಲಾ ಕಂಪನಿಗಳ ಪರಿಸ್ಥಿತಿ ಬಗ್ಗೆ ವರದಿ ನೀಡಿದ್ದಾರೆ. ಈ ವರದಿಯಲ್ಲಿ 30-38 ಸಾವಿರ ಕೋಟಿ ಹಣ ಸರ್ಕಾರದಿಂದಲೇ ಕೆಇಆರ್​ಸಿಗೆ ಕೊಡಬೇಕು. ನಾನು ಕೂಡ ಸಿಎಂ ಆಗಿದ್ದಾಗ ಎಸ್ಕಾಂ ಸೇರಿದಂತೆ ಎಲ್ಲಾ ಕಂಪನಿಗಳಿಗೆ ನನ್ನ ಕಾಲದಲ್ಲಿ 13-14 ಸಾವಿರ ಕೋಟಿ ಮಾತ್ರ ಕೊಡಬೇಕಿತ್ತು. 3 ವರ್ಷಕ್ಕೆ ಬಿಜೆಪಿ-ಕಾಂಗ್ರೆಸ್ ಸರ್ಕಾರಗಳು 30 ಸಾವಿರ ಕೋಟಿ ಮಾಡಿವೆ. ಬುಕ್ಸ್ ಆಫ್ ಅಕೌಂಟ್​ನಲ್ಲಿ ಮಾತ್ರ ಲಾಭ ತೋರಿಸಿಕೊಂಡಿದ್ದಾರೆ ಎಂದರು.

2016-17ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸೌರಶಕ್ತಿ ಇದ್ದಾಗ ಯುನಿಟ್ 9 ರೂ. ಮಾಡಿ ಖರೀದಿಗೆ ನಿಗದಿ ಮಾಡಿದಾಗ ನಾನೇ ವಿರೋಧ ಮಾಡಿದ್ದೆ. ಅವತ್ತಿನ ಅಧ್ಯಕ್ಷರು ಯಾಕೆ ಮಾಡಬಾರದೆಂದು ನನ್ನ ವಿರುದ್ದ ಮಾತನಾಡಿದ್ದರು. 2008ರಿಂದ ಆಡಳಿತ ಮಾಡಿರುವ ಸರ್ಕಾರಗಳು‌ ಮಾಡಿದ ವಿದ್ಯುತ್ ಶಕ್ತಿ ಕರ್ಮಕಾಂಡ ತೆರೆಯಲು ಹೋದೆ. ಅಂದಿನ ಸದನ ಸಮಿತಿ ಅಧ್ಯಕ್ಷ ಕುರಿ ಕಾಯೋಕೆ ತೋಳದ ರೀತಿ ಮಾಡಿದ್ರು. ಪ್ರಕರಣ ಮುಚ್ಚಿ ಹಾಕಲು ಹೋಗಿದ್ರು. ಈಗ ದರ ಏರಿಕೆ ಅಂತಾ ಹೇಳ್ತಿದ್ದಾರೆ. ಇದು ಎರಡು ರಾಷ್ಟ್ರೀಯ ಪಕ್ಷದ ಕೊಡುಗೆ. ಇನ್ನು ಕಷ್ಟದ ದಿನಗಳು ರಾಜ್ಯಕ್ಕೆ ಬರಲಿವೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ವಿವರವಾದ ಮಾಹಿತಿ ಕೊಡುತ್ತೇನೆ ಎಂದರು.

ಟೈಲರ್ ಹತ್ಯೆ ಅಮಾನುಷ : ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಹತ್ಯೆ ಖಂಡನೀಯ. ಇದು ಅಮಾನುಷವಾದ ಘಟನೆ. ಇದರ ಹಿಂದೆ ಇಬ್ಬರು ವ್ಯಕ್ತಿಗಳು ಇದ್ದಾರೆ. ಕತ್ತಿ‌ ಜಳಪಿಸಿದ ವಿಡಿಯೋ ವೈರಲ್ ಆಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಆ ಸರ್ಕಾರ ಹೇಳಿದೆ. ಬಂಧಿಸುವುದರ ಜೊತೆಗೆ ಅವರಿಗೆ ಕಠಿಣ ಕ್ರಮ ಜರುಗಿಸಬೇಕು. ಸರಿಯಾದ ಶಿಕ್ಷೆ ಆಗಲೇಬೇಕು. ಇಂತಹ ಸಂಘಟನೆ, ವ್ಯಕ್ತಿಗಳ ದಮನ ಆಗಲೇಬೇಕು ಎಂದು ಆಗ್ರಹಿಸಿದರು.

ನಾವು ಸರ್ಕಾರದಲ್ಲಿ ಇದ್ದಾಗ ಇಂಥ ಘಟನೆ ಆಗುವುದಕ್ಕೂ ಮುನ್ನ ಗಮನಿಸಬೇಕಾಗುತ್ತದೆ. ಇದು ದೇಶದಲ್ಲಿ ಹೀಗೆ ಮುಂದುವರೆದರೆ ಕಷ್ಟ. ಇಡೀ ಸರ್ಕಾರಗಳಿಗೆ ಹೇಳೋದು ಅಧಿಕಾರಿಗಳಿಗೆ ಸೂಚನೆ ಕೊಡಿ, ರಸ್ತೆಯಲ್ಲಿ ಹೋಗುವ ಸೈಕಲ್, ಮರಳಗಾಡಿ ಹಿಡಿಯುವುದಲ್ಲ. ನಿತ್ಯ ಇಂಥವರ ಬಗ್ಗೆ ವಾಚ್ ಮಾಡಬೇಕು. ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅವರು ಜೀವದ ಹಂಗು ತೊರೆದು ಇಂಥ ಕೆಲಸ ಮಾಡ್ತಾ ಇದ್ದಾರೆ ಅಂದರೆ ಪ್ರಚೋದನೆ ಎಷ್ಟಿರಬೇಕು. ಹಾಗಾಗಿ, ಮೊದಲು ಪ್ರಚೋದನೆ ಕೊಡುವ ಸಂಘಟನೆಗಳನ್ನು ಹಿಡಿಯಿರಿ ಎಂದು ಒತ್ತಾಯಿಸಿದರು.

ಓದಿ : ಟೈಲರ್​ ಶಿರಚ್ಛೇದದ ಬಗ್ಗೆ ಬುದ್ಧಿ ಜೀವಿಗಳೇ ಒಬ್ಬರಾದ್ರು ಮಾತಾಡಿ: ಪ್ರಮೋದ್​ ಮುತಾಲಿಕ್ ಕಿಡಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.