ETV Bharat / state

ಬೈಪಾಸ್‌ ಶಸ್ತ್ರಚಿಕಿತ್ಸೆಗೊಳಗಾದ ಮಾಜಿ ಸಿಎಂ ಬೊಮ್ಮಾಯಿ ಚೇತರಿಕೆ, ಸೋಮವಾರ ಡಿಸ್ಚಾರ್ಜ್ ಸಾಧ್ಯತೆ

ಬೈಪಾಸ್ ಶಸ್ತ್ರಚಿಕಿತ್ಸೆಗೊಳಗಾಗಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚೇತರಿಸಿಕೊಳ್ಳುತ್ತಿದ್ದು, ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ.

former-cm-basavaraj-bommai-recovering-after-bypass-surgery
ಬೈಪಾಸ್‌ ಶಸ್ತ್ರಚಿಕಿತ್ಸೆಗೊಳಗಾದ ಮಾಜಿ ಸಿಎಂ ಬೊಮ್ಮಾಯಿ ಚೇತರಿಕೆ, ಸೋಮವಾರ ಡಿಸ್ಚಾರ್ಜ್ ಸಾಧ್ಯತೆ
author img

By ETV Bharat Karnataka Team

Published : Oct 21, 2023, 8:29 PM IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೈಪಾಸ್ ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಕೆ ಕಾಣುತ್ತಿದ್ದು, ಸೋಮವಾರ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಬಸವರಾಜ್ ಬೊಮ್ಮಾಯಿ ಅವರಿಗೆ ಇತ್ತೀಚೆಗೆ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಪರಿಧಮನಿಯ ಬೈಪಾಸ್ ಗ್ರಾಫ್ಟಿಂಗ್ (ಸಿಎಬಿಜಿ) ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಬಸವರಾಜ ಬೊಮ್ಮಾಯಿ ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಕೆಲ ಪ್ರಾಥಮಿಕ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಅವರಿಗೆ ಹೃದಯ ಸಂಬಂಧಿ ಕೆಲ ಸಮಸ್ಯೆ ಇರುವ ಅನುಮಾನ ಮೂಡಿತ್ತು. ಹೀಗಾಗಿ, ಅವರ ಸಮಗ್ರ ಮತ್ತು ಪರಿಣಿತ ವೈದ್ಯಕೀಯ ಆರೈಕೆಗಾಗಿ, ಫೋರ್ಟಿಸ್‌ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕಲರ್‌ ಸೈನ್ಸ್‌ ಅಧ್ಯಕ್ಷ ಡಾ. ವಿವೇಕ್‌ ಜವಳಿ ಅವರ ಮೇಲ್ವಿಚಾರಣೆಯಲ್ಲಿ ಅಕ್ಟೋಬರ್‌ 15 ರಂದು ಅವರನ್ನು ಸಂಪೂರ್ಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಆಂಜಿಯೋಗ್ರಾಮ್ ನಂತರ, ಎಲ್ಲಾ ಮೂರು ಪರಿಧಮನಿಯ ಅಪಧಮನಿಗಳಲ್ಲಿ ತೀವ್ರ ಮತ್ತು ಪ್ರಸರಣ ತಡೆ ಇರುವುದು ಕಂಡು ಬಂದಿತ್ತು. ಈ ಲಕ್ಷಣಗಳು ಇದ್ದರೆ ಭವಿಷ್ಯದಲ್ಲಿ ಹೃದಯಾಘಾತ ಸಂಭವನೀಯ ಅಪಾಯವನ್ನು ಉಂಟುಮಾಡುತ್ತವೆ. ಹೀಗಾಗಿ ಅವರಿಗೆ ಕರೋನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್ (ಸಿಎಬಿಜಿ) ಶಸ್ತ್ರಕ್ರಿಯೆಯನ್ನು ನಡೆಸಿ, ಫೈವ್‌ ಗ್ರಾಫ್ಸ್‌ ಸಮಸ್ಯೆ ಉಂಟಾಗಿದ್ದ ಪರಿಧಮನಿಯ ಅಪಧಮನಿ ಹೃದಯದ ಬಡಿತದ ಮೇಲೆ ಇರಿಸಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ಬೊಮ್ಮಾಯಿ ಅವರು ವೇಗವಾಗಿ ಚೇತರಿಕೆ ಕಾಣುತ್ತಿದ್ದು, ಒಂದೆರಡು ವಾರದಲ್ಲಿ ಎಂದಿನಂತೆ ತಮ್ಮ ದಿನಚರಿಯಲ್ಲಿ ತೊಡಗಿಕೊಳ್ಳಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರ ಬದ್ಧತೆಗೆ ಬೊಮ್ಮಾಯಿ ಮೆಚ್ಚುಗೆ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯ ವೈದ್ಯರ ತಂಡ ಅದರಲ್ಲೂ ಡಾ. ವಿವೇಕ್‌ ಜವಳಿ ಅವರ ತಂಡ ನನ್ನನ್ನು ಉತ್ತಮವಾಗಿ ಆರೈಕೆ ಮಾಡಿದ್ದಾರೆ. ಅವರ ಪರಿಣತಿಯಿಂದ ಭವಿಷ್ಯದಲ್ಲಿ ಸಂಭವಿಸಬೇಕಾದ ಅಪಾಯವನ್ನು ತಡೆದಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು, ನನ್ನ ಯೋಗಕ್ಷೇಮಕ್ಕೆ ಇಡೀ ತಂಡದ ಬದ್ಧತೆಯನ್ನು ಪ್ರಶಂಸಿಸುವೆ. ನಾನು ಈಗ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.

ಫೋರ್ಟಿಸ್‌ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕಲರ್‌ ಸೈನ್ಸ್‌ ಅಧ್ಯಕ್ಷರಾದ ಡಾ. ವಿವೇಕ್‌ ಜವಳಿ ಮಾತನಾಡಿ, 5-ಗ್ರಾಫ್ಟ್ಸ್‌ ಹೃದಯ ಬೈಪಾಸ್ ಅನ್ನು ನಿರ್ವಹಿಸುವುದು ನಮಗೆ ವಾಡಿಕೆಯಾಗಿದೆ. ಆದರೆ ಬೊಮ್ಮಾಯಿ ಅವರ ಅಚಲವಾದ ನಂಬಿಕೆ. ಅವರ ಧೈರ್ಯದ ಮನೋಭಾವಕ್ಕೆ ನಾನು ನಿಜವಾಗಿಯೂ ಪ್ರಭಾವಿತನಾಗಿದ್ದೇನೆ. ಅವರ ಬೆಂಬಲಕ್ಕೆ ಅವರ ಕುಟುಂಬ ವರ್ಗ ಅಚಲವಾಗಿ ನಿಂತಿತ್ತು ಎಂದು ವಿವರಿಸಿದರು.‌

ಇದನ್ನೂ ಓದಿ: ಮಾಜಿ ಸಿಎಂ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.