ETV Bharat / state

ಮೈತ್ರಿ ಸರ್ಕಾರ ಕೆಡವಿ 2 ವರ್ಷ ಶ್ರಮಪಟ್ಟಿರುವ ಬಿಜೆಪಿ, ಈಗ ನಾಯಕತ್ವದ ಕಚ್ಚಾಟದಲ್ಲೇ ಕಾಲಹರಣ ಮಾಡುತ್ತಿದೆ : ಹೆಚ್​​ಡಿಕೆ ವ್ಯಂಗ್ಯ - ಬೆಂಗಳೂರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ

ನೀರಾವರಿ ಯೋಜನೆಗಳ ಕುರಿತು ರಾಷ್ಟ್ರಪತಿ ಗಮನಕ್ಕೆ ತರಲು ಯೋಚಿಸಿದ್ದೇವೆ. ಸದ್ಯ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಎರಡ್ಮೂರು ದಿನಗಳ ಕಾಲ ಬಿಜೆಪಿಯ ನಾಟಕ‌ ನಡೆಯಲಿದೆ ನಡೀಲಿ, ರಾಜ್ಯಪಾಲರನ್ನು ಭೇಟಿ ಮಾಡಿ ನೀರಾವರಿ ವಿಚಾರದಲ್ಲಿ ಕೇಂದ್ರ ಕರ್ನಾಟಕವನ್ನು ಕಡೆಗಣಿಸಿದ ಬಗ್ಗೆ ಹೇಳುತ್ತೇವೆ..

ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ

author img

By

Published : Jul 23, 2021, 3:22 PM IST

ಬೆಂಗಳೂರು : ಮೈತ್ರಿ ಸರ್ಕಾರ ಕೆಡವಿ ಎರಡು ವರ್ಷ ಶ್ರಮ ಪಟ್ಟಿರುವ ಬಿಜೆಪಿ ಸರ್ಕಾರ, ಈಗ ನಾಯಕತ್ವದ ಕಚ್ಚಾಟದಲ್ಲೇ ಕಾಲಹರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಬೆಂಗಳೂರು ನಗರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿ ಶ್ರಮಪಟ್ಟು ಈ ಕೆಲಸ ಮಾಡುತ್ತಿದ್ದಾರಲ್ಲ, ಇದನ್ನು ರಾಜ್ಯದ ಜನತೆಯ ತೀರ್ಮಾನಕ್ಕೆ ಬಿಡುತ್ತೇನೆ ಎಂದರು.

ಮೈತ್ರಿ ಸರ್ಕಾರ ನಡೆಸುವ ಸಂದರ್ಭದಲ್ಲಿ ನಮ್ಮ ಸರ್ಕಾರವನ್ನು ಮಾರಕ ಎಂದು ಹೇಳುತ್ತಿದ್ದ ಬಿಜೆಪಿ, ಇದೀಗ ಜನರ ತೆರಿಗೆ ಹಣವನ್ನು ಯಾವ ರೀತಿ ಸದ್ಬಳಕೆ ಮಾಡಿದ್ದಾರೆ ಎಂಬುದನ್ನು ಅಂಕಿ-ಅಂಶ ಮೂಲಕ ಜನತೆ ಮುಂದೆ ಹೋಗುವ ಕಾಲ ದೂರ ಇಲ್ಲ. ಬಿಜೆಪಿ ಸರ್ಕಾರ ಎರಡು ವರ್ಷ ಪೂರೈಸಿದ್ದು, ರಾಜ್ಯದ ಅಭಿವೃದ್ಧಿಗೆ ಪೂರಕವಾದ ಸಾಧನೆಯೇನೂ ಮಾಡಿಲ್ಲ ಎಂದು ಟೀಕಿಸಿದರು.

ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ

ಕೋವಿಡ್‌ನಲ್ಲಾದ ಪರಿಸ್ಥಿತಿ ಸೇರಿದಂತೆ ಜನರ ನೆರವಿಗೆ ತೆರಿಗೆ ಹಣವನ್ನು ಬಳಸಿಲ್ಲ. ಇವತ್ತು ಯೋಜನೆಗಳ ಹೆಸರಲ್ಲಿ ಲೂಟಿ ಮಾಡಿದ್ದೇ ಈ ಸರ್ಕಾರದ ಸಾಧನೆ. ಈ ನಾಡಿಗೆ ಇಂತಹ ಕೆಟ್ಟ ಸರ್ಕಾರ ಇತಿಹಾಸದಲ್ಲೇ ಬಂದಿಲ್ಲ. ಹಿಂದಿನ ಸರ್ಕಾರದಲ್ಲಿ ಹಲವಾರು ಪ್ರಕರಣ ನೋಡಿದ್ದೇವೆ. ಆದರೆ, ಜನತೆಯ ತೆರಿಗೆ ಹಣದಲ್ಲಿ ಸ್ವೇಚ್ಛಾಚಾರದ ರೀತಿ ಲೂಟಿ ಮಾಡಿದ್ದಾರೆ. ಬಿಜೆಪಿ ತನ್ನ ಆಡಳಿತವನ್ನು ಹತ್ತು ವರ್ಷ ಹಿಂದೆ ತೆಗದುಕೊಂಡು ಹೋಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರವಾಹ ಪರಿಸ್ಥಿತಿಯಲ್ಲೂ ಸಿಎಂ ಬದಲಾವಣೆ, ಇದು ರಾಜ್ಯದ ದುರಾದೃಷ್ಟ : ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದೆ. ಪ್ರವಾಹದ ಪರಿಸ್ಥಿತಿಯ ಈ ಸಮಯದಲ್ಲಿ ಸಿಎಂ ಬದಲಾವಣೆ ವಿಚಾರ ಬಂದಿರುವುದು ಈ ರಾಜ್ಯದ ದುರಾದೃಷ್ಟ ಸಂಗತಿ. 2019ರಿಂದ ದೊಡ್ಡ ಮಟ್ಟದಲ್ಲಿ ಮಳೆ ಅನಾಹುತ ಆಯ್ತು.

ಜೊತೆಗೆ ಕೋವಿಡ್ ಸಮಯದಲ್ಲೂ ಜನ ಕಂಗಾಲಾದ್ರು. ಆದರೆ, ಬಿಜೆಪಿ ಪಕ್ಷ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮುಖ್ಯಮಂತ್ರಿ ಬದಲಾವಣೆ, ನಾಯಕತ್ವ ಬದಲಾವಣೆಯಲ್ಲೇ ಮುಳುಗಿದೆ. ಇದು ನಾಡಿನ ದೌರ್ಬಾಗ್ಯ ಅಂದರೆ ತಪ್ಪಾಗಲಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಠಾಧೀಶರ ಲಾಬಿ ಜನರ ತೀರ್ಮಾನಕ್ಕೆ ಬಿಟ್ಟಿದ್ದು : ಸಿಎಂ ಬದಲಾವಣೆ ಸಂದರ್ಭದಲ್ಲಿ ಮಠಾಧೀಶರ ಲಾಬಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಅವರವರ ಭಾವನೆ ವ್ಯಕ್ತಪಡಿಸಲು ಮಠಾಧೀಶರು ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಬಂದು ಸಂದೇಶ ನೀಡಲು ಮುಂದಾಗಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ. ಅವರ ತೀರ್ಮಾನ ಸರಿ ಇರಬಹುದು, ಅದು ನನಗೆ ಗೊತ್ತಿಲ್ಲ.

ಜನ ಅಂತಿಮವಾಗಿ ತೀರ್ಮಾನ ಮಾಡಬೇಕು. ಮಠಾಧೀಶರು ತೆಗೆದುಕೊಂಡ ತೀರ್ಮಾನದ ಬಗ್ಗೆ ನಾನು ಲಘುವಾಗಿ ಮಾತನಾಡಲು ಹೋಗಲ್ಲ. ಅವರ ಮನಸ್ಸಿನಲ್ಲಿ ಬಂದ ಭಾವನೆಯನ್ನು ಸಾರ್ವಜನಿಕವಾಗಿ ತಿಳಿಸಿರಬಹುದು.

ಸ್ವಾತಂತ್ರ್ಯ ಬಂದ ನಂತರ ಇಷ್ಟು ದೊಡ್ಡ ಮಟ್ಟದಲ್ಲಿ ವ್ಯಕ್ತಪಡಿಸಿರೋದು ಅದು ಸರಿಯೋ, ತಪ್ಪೋ ಅನ್ನೋದು ನಾಡಿನ ಜನರು ತೀರ್ಮಾನ ಮಾಡಬೇಕು ಎಂದು ಮಾರ್ಮಿಕವಾಗಿ ನುಡಿದರು. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರಿಗೆ ಪಶ್ಚಾತ್ತಾಪ ಇದೆಯೋ, ಇನ್ನು ಎತ್ತರಕ್ಕೆ ಹೋಗ್ತಾರೋ ಗೊತ್ತಿಲ್ಲ. ಅಥವಾ ಇನ್ನೂ ಕೆಳಗೆ ಇಳಿಯುತ್ತಾರೋ ಗೊತ್ತಿಲ್ಲ.

ಅದು ಅವರಿಗೆ ಸೇರಿರುವ ವಿಷಯ. ನಾನು ಯಾಕೆ ಅವರ ಬಗ್ಗೆ ಸಣ್ಣದಾಗಿ ಮಾತನಾಡಲಿ. ಪಾಪ ಒಳ್ಳೆ ಸರ್ಕಾರ ತರಬೇಕು ಅಂತಾ ಹೋಗಿ ಸೇರಿಕೊಂಡಿದ್ದಾರೆ. ಮುಂದೆ ಇನ್ನು ಯಾವ ರೀತಿ ರಾಜಕೀಯ ನಾಟಕದ ಡ್ರಾಮಾಗಳು ನಡೆಯುತ್ತವೆಯೋ ನೋಡೋಣ ಎಂದರು.

ಕೇಂದ್ರದ ವಿರುದ್ಧ ಪಾದಯಾತ್ರೆ : ಮಹದಾಯಿ, ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮೀನಾಮೇಷ ಎಣಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆ ಹಮ್ಮಿಕೊಳ್ಳಲು ತೀರ್ಮಾನ ಮಾಡಿದ್ದೇವೆ ಎಂದರು.

ನಿನ್ನೆ ನಮ್ಮ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳ ವೀಕ್ಷಣೆಗೆ ಹೋಗಿದ್ದೆ. ನಿನ್ನೆ ಸಂಜೆ ಮಂಡ್ಯ ಜಿಲ್ಲೆಯ ಶಾಸಕರ ಸಭೆ ಕರೆದಿದ್ದೆ. ಈ ಸಭೆಯಲ್ಲಿ ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರ ನಮಗೆ ಸಕಾರಾತ್ಮಕ ಸ್ಮಂದನೆ ನೀಡುತ್ತಿಲ್ಲ ಎಂಬುದು ಗೊತ್ತಾಗುತ್ತಿದೆ. ಮಹದಾಯಿ ಮತ್ತು ಕೃಷ್ಣ ಮೇಲ್ದಂಡೆ ಹಾಗೂ ಮೇಕೆದಾಟು ವಿಚಾರದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡ್ತೇನೆ.

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ವರುಣಾರ್ಭಟ.. ಭೂಕುಸಿತ.. ಪ್ರವಾಹಕ್ಕೆ ನಲುಗಿದ ಜನ!

ನೀರಾವರಿ ಯೋಜನೆಗಳ ಕುರಿತು ರಾಷ್ಟ್ರಪತಿ ಗಮನಕ್ಕೆ ತರಲು ಯೋಚಿಸಿದ್ದೇವೆ. ಸದ್ಯ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಎರಡ್ಮೂರು ದಿನಗಳ ಕಾಲ ಬಿಜೆಪಿಯ ನಾಟಕ‌ ನಡೆಯಲಿದೆ ನಡೀಲಿ, ರಾಜ್ಯಪಾಲರನ್ನು ಭೇಟಿ ಮಾಡಿ ನೀರಾವರಿ ವಿಚಾರದಲ್ಲಿ ಕೇಂದ್ರ ಕರ್ನಾಟಕವನ್ನು ಕಡೆಗಣಿಸಿದ ಬಗ್ಗೆ ಹೇಳುತ್ತೇವೆ.

ಅಂಕಿ-ಅಂಶಗಳ ಆಧಾರದ ಮೇಲೆ ತಿಳಿಸುತ್ತೇವೆ. ಕೇಂದ್ರ ಸರ್ಕಾರ ತಮಿಳುನಾಡಿಗೆ ತೋರಿಸಿದ ಔದಾರ್ಯ ನಮಗೆ ತೋರಿಸಿಲ್ಲ ಎಂದು ಕಿಡಿಕಾರಿದರು. ಮೇಕೆದಾಟು ಒಂದೇ ಅಲ್ಲ ಮಹದಾಯಿ ಯೋಜನೆ, ಕೃಷ್ಣ ಮೇಲ್ದಡೆ ಯೋಜನೆ ಕುರಿತು ಗೆಜೆಟ್ ನೋಟಿಫಿಕೇಷನ್ ಆಗಬೇಕಿತ್ತು. ಆದರೆ, ಅದಕ್ಕೆ ಸಬೂಬು ಹೇಳುತ್ತಿದ್ದಾರೆ.

ಇದರ ಬಗ್ಗೆ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳುವ ಕುರಿತು ನಿನ್ನೆ ಮಂಡ್ಯದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದ್ದೇವೆ. ಸದ್ಯದಲ್ಲೇ ಈ ಮೂರು ಭಾಗದಲ್ಲಿ ನದಿಗಳ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡ್ತೇವೆ. ಅಷ್ಟೇ ಅಲ್ಲ, ಹೊಸ ಮುಖ್ಯಮಂತ್ರಿ ರಾಜ್ಯಕ್ಕೆ ಬಂದರೆ ಅವರನ್ನೂ ಭೇಟಿ ಮಾಡುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.