ETV Bharat / state

ಕಾಂಗ್ರೆಸ್ ಸರ್ಕಾರ ಹಣ ಲೂಟಿ ಮಾಡಿ ತೆಲಂಗಾಣದ ಚುನಾವಣೆಗೆ ಖರ್ಚು ಮಾಡ್ತಿದೆ: ಡಿ ವಿ ಸದಾನಂದಗೌಡ

ಬೆಂಗಳೂರಿನಲ್ಲಿ ಮಾಜಿ ಸಿಎಂ ಡಿ ವಿ ಸದಾನಂದಗೌಡ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಡಿ ವಿ ಸದಾನಂದಗೌಡ ಮಾಧ್ಯಮದವರೊಂದಿಗೆ ಮಾತನಾಡಿದರು.

author img

By ETV Bharat Karnataka Team

Published : Nov 28, 2023, 6:14 PM IST

ಬೆಂಗಳೂರು: ರಾಜ್ಯದ ಕಾಂಗ್ರೆಸ್​ನವರು ಅಮಲಿನಲ್ಲಿದ್ದಾರೆ. ಗ್ಯಾರಂಟಿ ನೀಡಿ ನಾವು ಗೆದ್ದಿದ್ದು ಅಂತ ಭ್ರಮೆಯಲ್ಲಿದ್ದಾರೆ ಎಂದು ಸಂಸದ ಡಿ.ವಿ. ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಬಿಜೆಪಿಯವರ ಆಂತರಿಕ ಸಮಸ್ಯೆ, ಮತ್ತಿತರ ಕಾರಣಗಳಿಂದ ಕಾಂಗ್ರೆಸ್ ರಾಜ್ಯದಲ್ಲಿ ಗೆದ್ದಿದೆ ಅಷ್ಟೇ. ಗ್ಯಾರಂಟಿಗಳನ್ನು ಕೊಡುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಸಮರ್ಪಕವಾಗಿ ಜನರಿಗೆ ಪೂರೈಸುತ್ತಿಲ್ಲ ಎಂದು ಆರೋಪಿಸಿದರು.

ಕರ್ನಾಟಕ ಸರ್ಕಾರದ ಜಾಹೀರಾತುಗಳು ತೆಲಂಗಾಣದಲ್ಲಿ: ತೆಲಂಗಾಣದಲ್ಲಿ ಜಾಹೀರಾತು ಕೊಟ್ಟಿರುವ ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗದ ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ಜಾಹೀರಾತುಗಳು ಎಲ್ಲಿರಬೇಕಿತ್ತೋ ಅಲ್ಲಿ ಇಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್​ನವ್ರು ತಮ್ಮ ಫ್ರಿಬೀಸ್​ಗಳ ಜಾಹೀರಾತು ಕೊಟ್ಟಿದ್ದಾರೆ. ಕಾಂಗ್ರೆಸ್ ರಾಜ್ಯದ ಜನರ ತೆರಿಗೆ ಹಣ ಪೋಲು ಮಾಡಿದೆ. ಹೀಗಾಗಿ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ನೋಟಿಸ್​ ಕೊಟ್ಟಿದೆ. ಆಯೋಗ ಖಂಡಿತ ಈ ಸರ್ಕಾರದ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದು ಡಿವಿಎಸ್​ ಹೇಳಿದರು.

ಫ್ರೀ ಬೀಸ್ ಜಾಹೀರಾತು: ತೆಲಂಗಾಣದಲ್ಲಿ ಫ್ರೀ ಬೀಸ್ ಜಾಹೀರಾತು ಹಾಕಿ, ಕರ್ನಾಟಕದ ಹಣ ದುರುಪಯೋಗ ಮಾಡುತ್ತಿರುವುದು ಕಂಡುಬಂದಿದೆ. ರಾಜ್ಯದ ಖಜಾನೆ ಬರ್ಬಾದ್ ಮಾಡಲು ಹೊರಟಿದ್ದಾರೆ. ರಾಜ್ಯದ ವಿಚಾರ ಜಾಹೀರಾತು ಮಾಡಬಾರದು ಅಂತಿಲ್ಲ. ಅದಕ್ಕೆ ಕಾಲ ಸನ್ನಿವೇಶ ಇದೆ. ಕರ್ನಾಟಕ ಕುಲಗೆಡಿಸಿರುವಂತೆ, ತೆಲಂಗಾಣ ರಾಜ್ಯ ಕುಲಗೆಡಿಸಲು ಹೊರಟಿದೆ. ಕರ್ನಾಟಕದ ಹಣ ಲೂಟಿ ಮಾಡಿ ಚುನಾವಣೆ ಮಾಡುವ ಕೆಲಸ‌ ಕಾಂಗ್ರೆಸ್ ಮಾಡುತ್ತಿದೆ. ಅಲ್ಲಿ ಖರ್ಚು ಮಾಡಿದ ಹಣ ಕಾಂಗ್ರೆಸ್ ನವರಿಗೆ ಎಲ್ಲಿಂದ ಬಂತು?. ಇದರ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ಕೊಡಬೇಕಿದೆ. ಜನ ದುರುಪಯೋಗ ಮಾಡುವುದರ ವಿರುದ್ಧ ನಿಲ್ಲಬೇಕು. ಮುಂದಿನ ದಿನಗಳಲ್ಲಿ ಜನ ತೀರ್ಮಾನ ಮಾಡಬೇಕು ಎಂದರು.

ಬಾಲಕೃಷ್ಣಗೆ ತಿರುಗೇಟು: ಮಾಗಡಿ ಕ್ಷೇತ್ರದ ಶಾಸಕ ಎಚ್ ಸಿ ಬಾಲಕೃಷ್ಣ ಹೇಳಿಕೆಗೆ ಸದಾನಂದಗೌಡ ಪ್ರತಿಕ್ರಿಯಿಸಿ, ಕೋಣಗಳಿಗೆ ಕೆಸರಿನ ನೀರೇ ಪ್ರಿಯ. ಅದಕ್ಕೆ ಚಾವಟಿ ಏಟು ಬೀಳುತ್ತಾ, ಬೀಳುತ್ತಾ ಎಚ್ಚೆತ್ತು ಓಡುತ್ತವೆ. ಇವರಿಗೂ ಹಾಗೆಯೇ ಏಟಿನ ಮೇಲೆ ಏಟು ಬೀಳುತ್ತಿವೆ. ಆದರೂ ಎಚ್ಚೆತ್ತುಕೊಂಡಿಲ್ಲ. ಪುಲ್ವಾಮ ದೇಶದ ಸೈನಿಕರ ವಿಚಾರದಲ್ಲಿ ಮಾತನಾಡಬಾರದು. ಮಂತ್ರಿ ಸ್ಥಾನ ಸಿಕ್ಕಿಲ್ಲವೆಂದು ಹತಾಶರಾಗಿ ಈ ರೀತಿ ಮಾತನಾಡಬಾರದು ಎಂದು ಬಾಲಕೃಷ್ಣ ವಿರುದ್ಧ ಸದಾನಂದಗೌಡ ಕಿಡಿಕಾರಿದರು.

ಬೆಂಗಳೂರು ಉತ್ತರ ಕ್ಷೇತ್ರದ ಆಕಾಂಕ್ಷಿ ಪಟ್ಟಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಂತಿಮವಾಗಿ ಅಭ್ಯರ್ಥಿ ಆಯ್ಕೆ ಮಾಡುವುದು ಕೇಂದ್ರದ ವರಿಷ್ಠರು. ಬಿಜೆಪಿಗೆ ಅತ್ಯಂತ ಸ್ಟ್ರಾಂಗ್ ಕ್ಷೇತ್ರ ಬೆಂಗಳೂರು ಉತ್ತರ. ಬೇರೆ ಕಡೆ ಸಮಸ್ಯೆ ಇದ್ದಾಗಲೂ ಉತ್ತರ ಗಟ್ಟಿಯಾಗಿತ್ತು. ಬ್ಯಾಟರಾಯನಪುರದಲ್ಲಿ ನಮ್ಮವರ ಲೋಪದಿಂದ ಸೋತಿತ್ತು. ಸುಲಭವಾಗಿ ಗೆಲ್ಲಲು ಬೆಂಗಳೂರು ಉತ್ತರ ಉತ್ತಮ. ಸಿ ಟಿ ರವಿ ಅವರಿಗೆ ಸೋಲಾಯಿತು. ಅವರು ಅರ್ಹರಿದ್ದಾರೆ.

ನಿವೃತ್ತಿ ಆಗಬೇಕು ಅಂತ ಬಯಸಿದ್ದೆ‌: ಅವರು ಕೇಳೋದ್ರಲ್ಲಿ ತಪ್ಪಿಲ್ಲ. ನನ್ನ ಸಲಹೆ ಯಾರಿಗೂ ಕೊಡಲ್ಲ. ಚುನಾವಣಾ ಸಮಿತಿಗೆ ನೇರವಾಗಿ ಹೇಳುತ್ತೇನೆ. ಮಾಧ್ಯಮದವರು ಏನಾದ್ರೂ ಹೇಳಿಕೊಳ್ಳಲಿ. ನಾನು ನಿವೃತ್ತಿ ಆಗಬೇಕು ಅಂತ ಬಯಸಿದ್ದೆ‌. ಅದರಂತೆ ನಿವೃತ್ತಿ ಆಗಿದ್ದೇನೆ. ಅಭ್ಯರ್ಥಿಗಳ ಆಯ್ಕೆ ಆರು ತಿಂಗಳ ಮೊದಲೇ ಮಾಡಿದ್ರೆ ಒಳ್ಳೆಯದು. ಅಭ್ಯರ್ಥಿ ಓಡಾಡಲು ಅನುಕೂಲ ಆಗಲಿದೆ. ಬಿಜೆಪಿ ಗೆಲ್ಲಬೇಕು ಅನ್ನೋದೇ ನಮ್ಮ ಆಶಯ ಎಂದು ತಿಳಿಸಿದರು.

ಪಕ್ಷದಲ್ಲಿ ಅಸಮಾಧಾನ ಇಲ್ಲ: ಪಕ್ಷದಲ್ಲಿ ಕೆಲವರ ಅಸಮಾಧಾನ ಇದೆ ಹೊರತು ಪಕ್ಷದ ವಿರುದ್ಧ ಅಸಮಾಧಾನ ಇಲ್ಲ. ಪಕ್ಷದ ವಿರುದ್ಧ ಮಾತನಾಡಿಲ್ಲ. ನಾನು ಅಧ್ಯಕ್ಷನಾಗಿದ್ದಾಗ ಬಿ.ಎಸ್. ಯಡಿಯೂರಪ್ಪ ಬಣ ಹಾಗೂ ಅನಂತ್ ಕುಮಾರ್ ಬಣ ಇತ್ತು. ನಾನು ನಿಭಾಯಿಸಲಿಲ್ಲವೇ? ಎಲ್ಲರನ್ನೂ ಸಮಾಧಾನ ಮಾಡುವ ಕೆಲಸ ಆಗಬೇಕು. ಅಧ್ಯಕ್ಷರು ಕರೆದರೆ ನಾನೂ ಕೂಡ ಹೋಗುತ್ತೇನೆ. ನಾವು ಮಠ, ಮಂದಿರಕ್ಕೆ ಜಾಸ್ತಿ ಹೋಗಿದ್ದೇವೆ. ಮುಂದೆ ಕಾರ್ಯಕರ್ತರ ಮನೆಗೆ ಹೆಚ್ಚು ಹೋಗಬೇಕು. ಕಾರ್ಯಕರ್ತರೇ ನಮ್ಮ‌ ಆಸ್ತಿ. ಅವರ ಮನೆಗೆ ಹೋಗಬೇಕು. ಜಾಸ್ತಿ ಕೋಪ ಇದ್ದವರ ಮನೆಗೆ ಹೋಗಬಾರದು. ತಣ್ಣಗಾದವರ ಮನೆಗೆ ಹೋಗಬೇಕು ಎಂದು ಡಿವಿಎಸ್​ ಸಲಹೆ ನೀಡಿದರು.

ಬಸನಗೌಡ ಪಾಟೀಲ್ ಯತ್ನಾಳ್, ವಿ. ಸೋಮಣ್ಣ ಅವರು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿಕೊಂಡಿದ್ದಾರೆ. ಸೋಮಣ್ಣ ಮಠದಲ್ಲಿ ಸ್ವಾಮೀಜಿ ಬಳಿ ಹೇಳಿದ್ದಾರೆ. ಸೋಮಣ್ಣ ಗೋವಿಂದರಾಜನಗರ ಕ್ಷೇತ್ರಕ್ಕೆ ನಿಂತಿದ್ದರೆ ಗೆಲ್ಲುತ್ತಿದ್ದರು. ಹೈಕಮಾಂಡ್ ಮಾತಿಗೆ ಮಣಿದು ಬೇರೆ ಕಡೆ ನಿಂತರು. ಮುಂದೆ ಎಲ್ಲವೂ ಸರಿಹೋಗಲಿದೆ ಎಂದು ತಿಳಿಸಿದರು.

ಎಲ್ಲ ಮಂತ್ರಿಗಳ ಅಪ್ತರು ಎಜೆಂಟ್​ರಾಗಿ ನೇಮಕ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಏಜೆಂಟ್ ಇಟ್ಟುಕೊಂಡಿರುವ ಕುರಿತಾಗಿ ಕೇಳಿದ ಪ್ರಶ್ನೆಗೆ ಸದಾನಂದ ಗೌಡ ಮಾತನಾಡಿ, ಲಕ್ಷ್ಮಿ ಹೆಬ್ಬಾಳ್ಕರ್ ಮಾತ್ರ ಅಲ್ಲ. ಎಲ್ಲ ಮಂತ್ರಿಗಳು ಏಜೆಂಟ್ ನೇಮಿಸಿಕೊಂಡಿದ್ದಾರೆ. ತಮ್ಮ ಇಲಾಖೆಯ ಅನುದಾನಗಳನ್ನು ಲೂಟಿ ಮಾಡಲು ಏಜೆಂಟರ ಟೀಮ್ ಮಾಡಿದ್ದಾರೆ. ನಾನು ಅಂತಹ ಸಚಿವರ ಹೆಸರುಗಳನ್ನು ಹೇಳಬಲ್ಲೆ, ಆದರೆ ಇನ್ನೂ ಹೊರಗೆ ಬರಲಿ. ಮಂತ್ರಿಗಳು ತಮ್ಮ ಇಲಾಖೆಗಳ ಶೇ.75 ರಷ್ಟು ಅನುದಾನ‌ ಕೊಳ್ಳೆ ಹೊಡೆಯಲು ಪ್ಲಾನ್ ಆಫ್ ಆ್ಯಕ್ಷನ್ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಆತ್ಮೀಯರನ್ನು ಏಜೆಂಟರಾಗಿ ನೇಮಕ ಮಾಡಿಕೊಂಡಿದ್ದಾರೆ. ಕೃಷಿ ಇಲಾಖೆ ಮಂಡ್ಯದಿಂದ ಇದು ಪ್ರಾರಂಭವಾಗಿದೆ. ಕೆಎಸ್‌ಆರ್‌ಟಿಸಿ ಟಿಕೆಟ್ ಹರಿದು ಬಿಸಾಕೋದ್ರಲ್ಲೇ ಎಲ್ಲರಿಗೂ ಪಾಲಿದೆ ಎಂದು ಗಂಭೀರ ಆರೋಪ ಮಾಡಿದರು.

ಇದನ್ನೂಓದಿ:ಜಾಹೀರಾತಿನಲ್ಲಿ ನಾವು ಮತ ಯಾಚನೆ ಮಾಡಿಲ್ಲ, ಹೀಗಾಗಿ ನೀತಿ ಸಂಹಿತೆ ಉಲ್ಲಂಘನೆ ಅಲ್ಲ: ಡಿಸಿಎಂ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.