ETV Bharat / state

ಎನ್ ಟಿ ರಾಮರಾವ್​ಗೆ ಭಾರತರತ್ನ ನೀಡಲು ಆಂಧ್ರದ ಮಾಜಿ ಸಚಿವ ಬಂಡಾರು ಸತ್ಯನಾರಾಯಣಮೂರ್ತಿ ಒತ್ತಾಯ - ಆಂಧ್ರಪ್ರದೇಶಕ್ಕೆ ಅನೇಕ ಜನಪರ ಕಾರ್ಯಕ್ರಮ

ಎನ್ ಟಿ ರಾಮರಾವ್ ಅವರು ನನಗೆ ಬಂಧು, ಉತ್ತಮ ಸ್ನೇಹಿತರು, ಗುರುವು ಹೌದು ಎಂದು ಆಂಧ್ರದ ಮಾಜಿ ಸಚಿವ ಬಂಡಾರು ಸತ್ಯನಾರಾಯಣ ಮೂರ್ತಿ ಅವರು ತಿಳಿಸಿದ್ದಾರೆ.

ಆಂಧ್ರದ ಮಾಜಿ ಸಚಿವ ಬಂಡಾರು ಸತ್ಯನಾರಾಯಣಮೂರ್ತಿ

author img

By

Published : May 21, 2023, 6:12 PM IST

ಆಂಧ್ರದ ಮಾಜಿ ಸಚಿವ ಬಂಡಾರು ಸತ್ಯನಾರಾಯಣಮೂರ್ತಿ

ಬೆಂಗಳೂರು : ದೇಶದಲ್ಲಿ ಎನ್ ಟಿ ರಾಮರಾವ್ ಹೊಸ ಚರಿತ್ರೆಯನ್ನೇ ಸೃಷ್ಟಿ ಮಾಡಿದ್ದರು. ಅವರು ನನಗೆ ದೇವರು. ರಾಜಕೀಯ ಕಲಿಸಿದ ಗುರು, ರಾಜಕೀಯ ನಡವಳಿಕೆಗಳನ್ನು ಕಲಿಸಿಕೊಟ್ಟರು. ನನಗೆ ಜನ್ಮ ನೀಡಿದ್ದು ತಂದೆ ತಾಯಿಯಾದರೆ, ರಾಜಕೀಯ ಜನ್ಮ ನೀಡಿದ್ದು ಎನ್ ಟಿ ರಾಮರಾವ್ ಅವರು ಎಂದು ಆಂಧ್ರ ಪ್ರದೇಶದ ಮಾಜಿ ಸಚಿವ ಬಂಡಾರು ಸತ್ಯನಾರಾಯಣ ಮೂರ್ತಿ ಬಣ್ಣಿಸಿದ್ದಾರೆ.

ತೆಲುಗು ಫ್ರೈಡ್ ಹಾಗೂ ತೆಲುಗು ಸಂಘಗಳು ಜಂಟಿಯಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಎನ್ ಟಿ ರಾಮರಾವ್ ಅವರ 100ನೇ ವರ್ಷದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ಬಂಧು, ಉತ್ತಮ ಸ್ನೇಹಿತರು, ಗುರುವು ಹೌದು, ಸ್ನೇಹಿತರು ಹೌದು. ಎನ್ ಟಿ ರಾಮರಾವ್ ಅವರು ಸ್ನೇಹಿತರಂತೆ ಮಾತನಾಡುತ್ತಿದ್ದರು. ಕಲ್ಮಶ ಇಲ್ಲದೆ ಮಾತನಾಡುತ್ತಿದ್ದರು ಎಂದು ಹೇಳಿದರು.

ಅವರು ನನ್ನ ಗುರುತಿಸಿ ರಾಜಕೀಯ ಭಿಕ್ಷೆ ನೀಡದಿದ್ದರೆ ನನ್ನನ್ನು ಯಾರು ಗುರುತಿಸುತ್ತಿದ್ದರು. ರಾಜಕೀಯದಲ್ಲಿ ಇರುವುದಕ್ಕೆ ಪ್ರಮುಖ ಕಾರಣ ಎನ್ ಟಿ ರಾಮರಾವ್. ಪ್ರಪಂಚದಲ್ಲಿ ತಿಳಿದಿರುವ ಕೃಷ್ಣ ಯಾರೆಂದು ಹೇಳುವುದಾದರೆ ಅದು ಎನ್ ಟಿ ಆರ್ ಅವರೇ. ನಾವು ಕಾಲೇಜ್​ನಲ್ಲಿ ಓದುತ್ತಿದ್ದಾಗ, ಅವರ ಆಲೋಚನೆ ನೋಡಿ ಅವರ ಜೊತೆ ನಾವು ನಡೆಯಲು ಆರಂಭಿಸಿದೆವು. ಅವರ ಜೊತೆ ಹೋದಾಗ, ಕೆಲವು ಕುಹಕವಾಡಿದರು. ವೇಶ ಹಾಕುವವರ ಜೊತೆ ತಿರುಗುತ್ತಿಯಾ, ಇದೊಂದು ಪಾರ್ಟಿನಾ ಎಂದು ವ್ಯಂಗ್ಯವಾಡಿದ್ದರು. ಅವರ ಸಿನಿಮಾ ನೋಡಿ ಅವರ ಆಲೋಚನೆ, ಸಮಾಜಕ್ಕೆ ಮೆಸೇಜ್ ಕೊಡುವಂತಹ ಸಿನಿಮಾ ಮಾಡುತ್ತಿದ್ದರು ಎಂದರು.

ಎನ್ ಟಿ ರಾಮರಾವ್ ಅವರಿಗೆ ಭಾರತರತ್ನ ಶಿಫಾರಸು ಮಾಡಬೇಕು: ಬಡವರ ಪರವಾಗಿದ್ದ ಅವರು, ಮುಖ್ಯಮಂತ್ರಿಯಾಗಿ 2 ಕೆಜಿ ಅಕ್ಕಿ ಸೇರಿದಂತೆ ಬಡವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದರು. ಆಂಧ್ರಪ್ರದೇಶಕ್ಕೆ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದರು. ಜೊತೆಗೆ ಸಿನಿಮಾ ರಂಗದಲ್ಲೂ ಉತ್ತುಂಗ ಸ್ಥಾನಕ್ಕೆ ಏರಿದರು. ಎನ್ ಟಿ ರಾಮರಾವ್ ಅವರಿಗೆ ಭಾರತರತ್ನ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಇದೇ ವೇಳೆ ಆಗ್ರಹಿಸಿದರು.

ಕರ್ನಾಟಕದ ಮಾಜಿ ಸಚಿವ ಮುನಿರತ್ನ ನಾಯ್ಡು ಮಾತನಾಡಿ, ಕನ್ನಡ ಚಲನಚಿತ್ರರಂಗದ ನಟಸಾರ್ವಭೌಮ ಡಾ ರಾಜ್ ಕುಮಾರ್ ಹಾಗೂ ತೆಲುಗು ಚಿತ್ರರಂಗದ ನಟಸಾರ್ವಭೌಮ ಆಗಿದ್ದಂತಹ ಡಾ ಎನ್ ಟಿ ರಾಮರಾವ್ ಒಂದೇ ಸಾರಿ ಹುಟ್ಟಿದ್ದು, ಮತ್ತೆ ಹುಟ್ಟುವುದಿಲ್ಲ.

ಎನ್ ಟಿ ರಾಮರಾವ್ ವಿಶ್ವವಿಖ್ಯಾತ, ನಟಸಾರ್ವಭೌಮ, ಬಹಳಷ್ಟು ಸಿನಿಮಾ ನೋಡಿದ್ದೇನೆ. ಇವರೆಲ್ಲರೂ ಭೂಮಿಗೆ ಬಂದು ಅವರ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಅವರು ಇಲ್ಲದಿದ್ದರೂ ಅವರ ನೆನಪುಗಳು ಜೀವಂತವಾಗಿವೆ. ಅದಕ್ಕೆ ಇವರೆಲ್ಲಾ ಒಂದೊಂದೇ ಸಾರಿ ಹುಟ್ಟುವುದು ಎಂದು ಬಣ್ಣಿಸಿದರು.

ರಾಜ್ ಕುಮಾರ್ ನಿಮ್ಮ ಜೀವ, ಕನ್ನಡವನ್ನು ಮರೆಯಬೇಡಿ. ನಿಮಗೆ ಜೀವ ಕೊಟ್ಟಿದೆ, ಜೀವನ ಕೊಟ್ಟಿದೆ. ಕನ್ನಡ ಈ ಮಣ್ಣಿಗೆ ಋಣಿಯಾಗಿರಿ ಎಂದ ಅವರು, ನಾಲ್ಕನೇ ಬಾರಿ ಶಾಸಕನಾದ ಮೇಲೆ ಫಲಿತಾಂಶ ಬಂದ ಮೇಲೆ ಮೊದಲ ಕಾರ್ಯಕ್ರಮ ಇದು ಎಂದರು.

ಶ್ರೀಕೃಷ್ಣದೇವರಾಯ ಸಿನಿಮಾ ಮಾಡುವ ಕನಸು : ಮುಂದಿನ ದಿನಗಳಲ್ಲಿ ದೊಡ್ಡ ಕನಸು ಹೊಂದಿದ್ದೇನೆ. ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ ಕುರಿತು ಸಿನಿಮಾ ಮಾಡುವ ಕನಸಿದೆ. ಆದಷ್ಟು ಬೇಗ ಆ ಚಿತ್ರ ಮಾಡಲು ಸಿದ್ದತೆ ಮಾಡಿಕೊಳ್ಳುತ್ತೇನೆ. ಈಗ ಆಡಳಿತ ಪಕ್ಷ ಇಲ್ಲ. ನಾನು ವಿರೋಧ ಪಕ್ಷದಲ್ಲಿರುವುದರಿಂದ ಕೆಲಸ ಕಡಿಮೆ ಇರುತ್ತದೆ. ಹಾಗಾಗಿ, ಸಿನಿಮಾ ಮಾಡುವ ಆಲೋಚನೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಆಂಧ್ರದ ವಿಧಾನಪರಿಷತ್ ಸದಸ್ಯ ಭೂಮರೆಡ್ಡಿ, ಕಂಚರ್ಲ ಶ್ರೀಕಾಂತ್, ದಿನಕರ್ ರೆಡ್ಡಿ, ರಾಜಗೋಪಾಲರೆಡ್ಡಿ, ಆರ್ ವಿ ಹರೀಶ್, ಲಹರಿ ವೇಲು, ರಾಜೇಂದ್ರರೆಡ್ಡಿ, ಗುರಪ್ಪ ನಾಯ್ಡು ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ : 'ಅಧಿಕಾರಕ್ಕಾಗಿ ನನ್ನ ಮನೆ, ಸಿದ್ದರಾಮಯ್ಯರ ಮನೆ ಎಂದು ಸುತ್ತಬೇಡಿ': ಡಿಕೆಶಿ ಖಡಕ್ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.