ETV Bharat / state

ವಿವಿಧ ಕಾರಣ ಮುಂದಿಟ್ಟು ಕೆಲ ದಿನ ವಿಶ್ರಾಂತಿಗೆ ಮುಂದಾಗಿದ್ದಾರೆ ಡಿಕೆಶಿ! - D.K. Shivakumar going to take some days rest

ಹಲವು ಕಾರಣಗಳನ್ನು ನೀಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
author img

By

Published : Jul 7, 2020, 11:48 PM IST

ಬೆಂಗಳೂರು: ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಮೂರ್ನಾಲ್ಕು ಕಾರಣಗಳನ್ನು ಇದಕ್ಕೆ ನೀಡಲಾಗುತ್ತಿದೆ. ಪುತ್ರಿಯ ವಿವಾಹ ನಿಶ್ಚಿತಾರ್ಥವನ್ನು ಆಗಸ್ಟ್ ತಿಂಗಳಲ್ಲಿ ನಡೆಸಲು ಉದ್ದೇಶಿಸಿರುವ ಡಿಕೆಶಿ ಇದರ ಸಿದ್ಧತೆಯತ್ತ ಕೊಂಚ ಗಮನ ಹರಿಸಬೇಕಾಗಿದೆ. ಕಳೆದ ಜು. 2ರವರೆಗೂ ಪದಗ್ರಹಣ ಸಿದ್ಧತೆಯಲ್ಲಿ ತೊಡಗಿದ್ದರಿಂದ ಸಾಕಷ್ಟು ಸುಸ್ತಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಬೆನ್ನು ನೋವಿಗೆ ಒಂದಿಷ್ಟು ದಿನ ವಿಶ್ರಾಂತಿ ಮಾಡಲೇಬೇಕಾಗಿದೆ. ಇದೆಲ್ಲದರ ಜತೆ ತಮ್ಮ ಸಂಬಂಧಿ ಹಾಗೂ ಕುಣಿಗಲ್ ಶಾಸಕ ಡಾ. ರಂಗನಾಥ್​ಗೆ ಕೊರೊನಾ ಮಹಾಮಾರಿ ವಕ್ಕರಿಸಿದ್ದು. ಇದೆಲ್ಲಾ ಕಾರಣಗಳಿಂದ ಒಂದಿಷ್ಟು ಏಕಾಂತ, ವಿಶ್ರಾಂತಿ ಕಡೆಗೆ ಗಮನ ಹರಿಸಲು ಶಿವಕುಮಾರ್ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸ

ಈ ಸಂಬಂಧ ಅವರು ಮೂವರು ಕಾರ್ಯಾಧ್ಯಕ್ಷರ ಜತೆ ಈಗಾಗಲೇ ಸಮಾಲೋಚಿಸಿದ್ದು, ಕೊರೊನಾ ಅಟ್ಟಹಾಸ ಕಡಿಮೆ ಆದ ನಂತರ ಕೆಪಿಸಿಸಿ ವಿವಿಧ ಸಮಿತಿಗಳ ಪದಾಧಿಕಾರಿಗಳ ನೇಮಕ ಮಾಡೋಣ, ಅಲ್ಲಿಯವರೆಗೂ ಪಕ್ಷದ ಚಟುವಟಿಕೆಯನ್ನು ಕೊಂಚ ನಿಭಾಯಿಸಿ. ನಾನು ಸಾಧ್ಯವಾದಷ್ಟು ವಿಶ್ರಾಂತಿ ಹಾಗೂ ಏಕಾಂತವನ್ನು ನಿರೀಕ್ಷಿಸುತ್ತಿದ್ದೇನೆ. ಅನಿವಾರ್ಯ ಸಭೆ, ಸಮಾರಂಭಗಳಿಗೆ ಮಾತ್ರ ಆಗಮಿಸುತ್ತೇನೆ. ಹೆಚ್ಚು ಹೊತ್ತು ಇರುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಒಬ್ಬೊಬ್ಬ ಕಾರ್ಯಾಧ್ಯಕ್ಷರಿಗೆ ಒಂದೊಂದು ಜವಾಬ್ದಾರಿಯನ್ನು ಡಿಕೆಶಿ ವಹಿಸಿದ್ದಾರೆ. ರಾಜ್ಯದ ವಿಚಾರವಾಗಿ ಸತೀಶ್ ಜಾರಕಿಹೊಳಿ ಗಮನ ಹರಿಸಿದರೆ, ಪಕ್ಷದ ಚಟುವಟಿಕೆಯನ್ನು ಸಲೀಂ ಅಹಮದ್ ನಿಭಾಯಿಸಲಿದ್ದಾರೆ. ಈಶ್ವರ್ ಖಂಡ್ರೆ ಸರ್ಕಾರ ಮಾಡುವ ತಪ್ಪುಗಳನ್ನು ಎತ್ತಿ ಆರೋಪಿಸುವ ಮೂಲಕ ಸರ್ಕಾರಕ್ಕೆ ಚುರುಕು ಮುಟ್ಟಿಸುವ ಕಾರ್ಯ ಮಾಡಲಿದ್ದಾರೆ. ಈ ಜವಾಬ್ದಾರಿಯನ್ನು ನಿಭಾಯಿಸಲು ಸೂಚಿಸಿರುವ ಡಿ.ಕೆ. ಶಿವಕುಮಾರ್ ಪುತ್ರಿಯ ವಿವಾಹ ನಿಶ್ಚಿತಾರ್ಥ ಸಿದ್ಧತೆ ಜತೆಗೆ, ವಿಶ್ರಾಂತಿಗೆ ಒತ್ತು ಕೊಡಲಿದ್ದಾರೆ. ಜುಲೈ ಕೊನೆಯವರೆಗೆ ಕೌಟುಂಬಿಕ ಕಾರ್ಯಕ್ರಮದ ಬಗ್ಗೆ ಹೆಚ್ಚಾಗಿ ಗಮನ ಹರಿಸಲು ಅವರು ತೀರ್ಮಾನಿಸಿದ್ದು, ಬೆಂಗಳೂರು ಇಲ್ಲವೇ ಬೇರೆ ಕಡೆ ತೆರಳಿ ಕೆಲ ದಿನ ಪ್ರಾಕೃತಿಕ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಕೂಡ ಯೋಚನೆ ನಡೆಸಿದ್ದಾರೆ.

ಕೊರೊನಾ ಆತಂಕ:

ರಾಜ್ಯ ಕಾಂಗ್ರೆಸ್ ನಾಯಕರಿಗೆ ಕೊರೊನಾ ಆತಂಕ ಶುರುವಾಗಿದೆ. ಈಗಾಗಲೇ ಸಾಕಷ್ಟು ದಿನ ಕಾರ್ಯಕರ್ತರ ಮಧ್ಯದಲ್ಲೇ ಕಳೆದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇದೀಗ ಮಹಾಮಾರಿಯ ಆತಂಕಕ್ಕೆ ತುತ್ತಾಗಿದ್ದಾರೆ. ಸದಾ ಜತೆಗಿದ್ದು ಪದಗ್ರಹಣ ಸಮಾರಂಭ ಜವಾಬ್ದಾರಿ ವಹಿಸಿಕೊಂಡು, ಕಾಂಗ್ರೆಸ್ ಕಚೇರಿ ಸುತ್ತಾ ಓಡಾಡಿಕೊಂಡಿದ್ದ ಡಾ. ರಂಗನಾಥ್ ಈಗ ಕೊರೊನಾ ಸೋಂಕಿತ. ಇವರು ಓಡಾಡಿದ ಹಿನ್ನೆಲೆ ಖುದ್ದು ತಪಾಸಣೆಗೆ ಒಳಗಾಗುವ ಜೊತೆಗೆ ಜು.2ರ ಅಕ್ಕಪಕ್ಕದ ದಿನಗಳಲ್ಲಿ ಓಡಾಡಿದ್ದ ಕಾಂಗ್ರೆಸ್​ನ 35 ಕ್ಕೂ ಹೆಚ್ಚು ನಾಯಕರು, ಮುಖಂಡರು, ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸುವ ಚಿಂತನೆಯನ್ನು ಡಿಕೆಶಿ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.