ಬೆಂಗಳೂರು: ಕೇಂದ್ರ ಸರ್ಕಾರದ ಲಾಕ್ ಡೌನ್ ಆದೇಶ ಬಡ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದ ಒಂದೊತ್ತಿನ ಊಟಕ್ಕೂ ಜನರು ಪರದಾಟ ನಡೆಸುತ್ತಿರುವುದು ಗೊತ್ತೆ ಇದೆ.
ಈಗಾಗಲೇ ಸ್ವಯಂಸೇವಾ ಸಂಸ್ಥೆ(ಎನ್.ಜಿ.ಒ), ಸಮಾಜ ಸೇವಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಕೈಲಾದಷ್ಟು ನಗರದ ನಿರ್ಗತಿಕರಿಗೆ ಊಟ ಸರಬರಾಜು ಮಾಡುತ್ತಿದ್ದಾರೆ.
ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಗೇಹಳ್ಳಿಯಲ್ಲಿರುವ ಬಿಬಿಎಂಪಿ ವಸತಿ ಸಂಕೀರ್ಣದಲ್ಲಿ ವಾಸ ಮಾಡುತ್ತಿರುವ 160ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ರೈಸ್ ಬಾತ್ ಹಂಚಲಾಯಿತು. 300ಕ್ಕೂ ಹೆಚ್ಚು ಆಹಾರ ಪೊಟ್ಟಣ ವಿತರಿಸುವ ಮೂಲಕ ಹಸಿದ ಹೊಟ್ಟೆಗೆ ಆಹಾರ ನೀಡಿ ಧನ್ಯತೆ ಮೆರೆದರು.