ಬೆಂಗಳೂರು: ನಗರದ ಪ್ರತ್ಯೇಕ ಕಡೆಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಅವರು ಆಹಾರ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಿದರು.

ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ವಿಕಲಚೇತನ ವ್ಯಕ್ತಿಗೆ ಹಣ ಸಹಾಯ ಮಾಡಿದರು.
ನಗರದ ಜೆ.ಸಿ ರಸ್ತೆ, ಜಯನಗರದ ಗುರಪ್ಪನಪಾಳ್ಯದ ಬಡ ಜನರ ಪ್ರದೇಶಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿ ನೀಡಿದರು. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಆಸಿಫ್ ಹಾಗೂ ಬೆಂಗಳೂರು ದಕ್ಷಿಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೃಷ್ಣಪ್ಪ ಅವರು ಬಡವರಿಗೆ ಆಹಾರ ಪದಾರ್ಥ ವಿತರಣಾ ಕಾರ್ಯದಲ್ಲಿ ಭಾಗಿಯಾದರು.

ರಾಮಲಿಂಗಾರೆಡ್ಡಿ ವಿತರಣೆ: ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಅಡುಗೋಡಿ 147ನೇ ವಾರ್ಡ್ನ 5 ಸಾವಿರಕ್ಕೂ ಹೆಚ್ಚು ಜನರಿಗೆ ಆಹಾರದ ಕಿಟ್ಗಳನ್ನು ಶಾಸಕ ರಾಮಲಿಂಗಾರೆಡ್ಡಿ ಇಂದು ವಿತರಿಸಿದರು.
ನಿತ್ಯ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಾವಿರಾರು ಜನರಿಗೆ ಬೆಳಗ್ಗೆ ಮತ್ತು ಸಂಜೆ ಉಪಹಾರ ವಿತರಿಸುತ್ತಿರುವ ರಾಮಲಿಂಗ ರೆಡ್ಡಿ ಇಂದು ದೊಡ್ಡ ಮಟ್ಟದಲ್ಲಿ ದಿನಸಿಗಳನ್ನು ನೀಡಿದರು.