ETV Bharat / state

ಜೀವವನ್ನೇ ಪಣಕ್ಕಿಟ್ಟಿರುವ ಕೊರೊನಾ ವಾರಿಯರ್ಸ್​ಗೆ ಹೂವಿನ ಕಲಾಕೃತಿ ರಚಿಸಿ ಗೌರವ - flower salute for corona warriors at bengalore

ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ವಿವಿಧ ಇಲಾಖೆಗಳ ಸಿಬ್ಬಂಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಸರ್ಕಾರಿ ಇಲಾಖೆಯ ಹಲವಾರು ಕಚೇರಿಗಳಲ್ಲಿ ಫ್ಲವರ್​ ಆರ್ಟ್​ ನಿರ್ಮಾಣಗೊಂಡಿದೆ.

flower salute for corona warriors at bengalore
ಸರ್ಕಾರಿ ಇಲಾಖೆಯ ಹಲವಾರು ಕಛೇರಿಗಳಲ್ಲಿ ಫ್ಲವರ್​ ಆರ್ಟ್​ ನಿರ್ಮಾಣ
author img

By

Published : Jun 11, 2020, 6:07 PM IST

ಬೆಂಗಳೂರು: ನಗರದಲ್ಲಿ ಕೊರೊನಾ ವಾರಿಯರ್ಸ್​​ ಆಗಿ ಕೆಲಸ ನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಸಿಬ್ಬಂದಿಗೆ ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ಹೂವಿನ ಆರ್ಟ್ ಮೂಲಕ ಗೌರವ ಸಲ್ಲಿಸಲಾಗುತ್ತಿದೆ.

ಜೀವವನ್ನೇ ಪಣಕ್ಕಿಟ್ಟ ಕೊರೊನಾ ವಾರಿಯರ್ಸ್​ಗೆ ಗೌರವ
ನಗರದ ವಿಂಡ್ಸರ್ ಮ್ಯಾನರ್, ‌ವಿಧಾನಸೌಧ, ಟೌನ್ ಹಾಲ್, ನಗರ ಪೊಲೀಸ್ ಆಯುಕ್ತರ ಕಚೇರಿ, ಫ್ರೇಜರ್ ಟೌನ್ ಸೇರಿದಂತೆ ಹಲವೆಡೆ ಫ್ಲವರ್​​ ಆರ್ಟ್ ಮೂಲಕ ಗೌರವ ಸೂಚಿಸಲಾಗುತ್ತಿದ್ದು, ಇಂದಿನಿಂದ 3 ದಿನಗಳ ಕಾಲ ಈ ಗೌರವಾರ್ಪಣೆ ನಡೆಯಲಿದೆ. ಗೌರವ ಏಕೆ?: ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ನಿರಂತರವಾಗಿ ತನ್ನ ಅಟ್ಟಹಾಸವನ್ನು ಹೆಚ್ಚಿಸುತ್ತಲೇ ಬಂದಿದೆ. ಇಂತಹ ಸಂದರ್ಭದಲ್ಲಿಯೂ ತಮ್ಮ ಜೀವದ ಹಂಗನ್ನು ಬಿಟ್ಟು ರೋಗಿಗಳ ಸೇವೆಯಲ್ಲಿ ನಿರತರಾಗಿರುವ ಕೊರೊನಾ ವಾರಿಯರ್ಸ್​ಗೆ ಅಭಿನಂದಿಸುವ ಸಲುವಾಗಿ ಈ ಹೂವಿನ ಗೌರವ ಸಲ್ಲಿಸಲಾಗುತ್ತಿದೆ.

ಇದನ್ನು ಮನಗಂಡಿರುವ ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾ ವಿವಿಧ ಹೂಗಳ ಮೂಲಕ ಕಚೇರಿಗಳ ಎದುರು ಶೃಂಗಾರ ಮಾಡಿದ್ದು, ಕಚೇರಿ ಬಳಿಗೆ ಹೋಗುವ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗೆ ಇದು ಖುಷಿ ನೀಡುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.