ETV Bharat / state

ಜನವರಿ ಅಂತ್ಯಕ್ಕೆ ನೆರೆ ಕಾಮಗಾರಿ ಪೂರ್ಣ: ಡಿಸಿಎಂ ಕಾರಜೋಳ - ಕರ್ನಾಟಕ ನೆರೆ ಹಾವಳಿ ಕಾಮಗಾರಿ

ನೆರೆ ಹಾವಳಿಗೊಳಗಾದ ರಸ್ತೆ, ಸೇತುವೆ ಕಾಮಗಾರಿಗಳನ್ನು ಜನವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

DCM govind karjol
ಡಿಸಿಎಂ ಗೋವಿಂದ ಕಾರಜೋಳ
author img

By

Published : Jan 4, 2020, 5:25 PM IST

ಬೆಂಗಳೂರು: ನೆರೆ ಹಾವಳಿಗೊಳಗಾದ ರಸ್ತೆ, ಸೇತುವೆ ಕಾಮಗಾರಿಗಳನ್ನು ಜನವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಡಿಸಿಎಂ ಗೋವಿಂದ ಕಾರಜೋಳ

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಹಾನಿಯಾಗಿರುವ 1,816 ರಸ್ತೆ ಕಾಮಗಾರಿಗಳ ಪೈಕಿ 733 ಕಾಮಗಾರಿ ಪೂರ್ಣಗೊಳಿಸಲಾಗಿದೆ. 247 ಸೇತುವೆಗಳು ಸಂಪೂರ್ಣ ಹಾನಿಯಾಗಿದ್ದು, ಅವುಗಳಲ್ಲಿ 140 ಕಾಮಗಾರಿ ಪೂರ್ಣವಾಗಿದೆ. ಬಾಕಿ ಕಾಮಗಾರಿಗಳನ್ನು ಜನವರಿ ಅಂತ್ಯಕ್ಕೆ ಮುಗಿಸಲು ತಿಳಿಸಿದೆ. ಜಿಲ್ಲಾ ಹೆದ್ದಾರಿಗಳ ಗುಂಡಿ ಮುಚ್ಚಲು 691 ಕೋಟಿ ಅನುದಾನ ನೀಡಲಾಗಿದೆ ಎಂದರು.

2018-19ರ ನೆರೆ ಹಾವಳಿ ಕಾಮಗಾರಿಗೆ 9 ಸಾವಿರ ಕೋಟಿ ಅನುದಾನವಿದೆ. ಅದರಲ್ಲಿ ಈಗಾಗಲೇ ಸುಮಾರು 3 ಸಾವಿರ ಕೋಟಿ ವೆಚ್ಚವಾಗಿದೆ. ಶೇಕಡಾ 60ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

Intro:Body:KN_BNG_01_KARAJOLA_PRESSMEET_SCRIPT_7201951

ನೆರೆ ಹಾನಿ ರಸ್ತೆ, ಸೇತುವೆ ಕಾಮಗಾರಿ ಜನವರಿ ಅಂತ್ಯಕ್ಕೆ ಪೂರ್ಣ: ಡಿಸಿಎಂ ಕಾರಜೋಳ

ಬೆಂಗಳೂರು: ನೆರೆಯಿಂದ‌ ಹಾನಿಗೊಳಗಾಗಿರುವ ರಸ್ತೆ, ಸೇತುವೆ ಕಾಮಗಾರಿಗಳನ್ನು ಜನವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನೆರೆಗೆ ಹಾನಿಯಾಗಿರುವ 1,816 ರಸ್ತೆ ಕಾಮಗಾರಿಗಳ ಪೈಕಿ, 733 ಕಾಮಗಾರಿ ಪೂರ್ಣಗೊಳಿಸಲಾಗಿದೆ. 247 ಸೇತುವೆಗಳು ಸಂಪೂರ್ಣ ಹಾನಿಯಾಗಿದ್ದು, 140 ಕಾಮಗಾರಿ ಪೂರ್ಣ ಆಗಿದೆ. ಬಾಕಿ ಕಾಮಗಾರಿಗಳನ್ನು ಜನವರಿ ಅಂತ್ಯಕ್ಕೆ ಮುಗಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಇಲಾಖೆ ಮೊದಲ ಹಂತದಲ್ಲಿ 500 ಕೋಟಿ ರೂ.‌ನೀಡಲಾಗಿದೆ‌. ಎರಡನೇ ಹಂತದ ಪ್ರವಾಹಕ್ಕೆ 250 ಕೋಟಿ ರೂ. ನಷ್ಟ ಆಗಿದ್ದು, ಈ ಸಂಬಂಧ ಪರಿಹಾರ ನೀಡುವಂತೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ತಿಳಿಸಿದರು.

2019-20ನೇ ಸಾಲಿನಲ್ಲಿ
ಲೋಕೋಪಯೋಗಿ ಇಲಾಖೆ ಭೌತಿಕವಾಗಿ ಶೇ.60 ಸಾಧನೆ ಆಗಿದ್ದು, ಆರ್ಥಿಕವಾಗಿ 40% ಪ್ರಗತಿಯಾಗಿದೆ. ಈವರೆಗೆ 7,122 ಕಾಮಗಾರಿಗಳಲ್ಲಿ, 2,810 ಕಾಮಗಾರಿ ಪೂರ್ಣಗೊಳಿಸಲಾಗಿದೆ. ಬಾಕಿ ಕಾಮಗಾರಿಗಳನ್ನು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಹೆದ್ದಾರಿಗಳ ಗುಂಡಿ ಮುಚ್ಚಲು 691 ಕೋಟಿ ರೂ. ಅನುದಾನ ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ಗುಂಡಿ ಮುಚ್ಚದಿದ್ದರೆ ಸಂಬಂಧ ಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು. ಒಟ್ಟು 43 ಸಾವಿರ ಕಿ.ಮೀ ರಸ್ತೆಯಲ್ಲಿ 39 ಸಾವಿರ ಕಿ.ಮೀ.ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಪೂರ್ಣವಾಗಿದೆ. ಜನವರಿ ಅಂತ್ಯದೊಳಗೆ ರಸ್ತೆ ಗುಂಡು ಮುಚ್ಚದಿದ್ದರೆ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಇನ್ನು ಗುತ್ತಿಗೆದಾರರಿಗೆ ಒಂದು ಸಾವಿರ ಕೋಟಿ ರೂ.ಬಾಕಿ ಕೊಡಬೇಕಾಗಿದೆ. ಮೂರು ವರೆ ಸಾವಿರ ಕೋಟಿ ರೂ ವೆಚ್ಚದ ಕಾಮಗಾರಿಗಳು ನಡೆಯುತ್ತಿದೆ. ಇಲಾಖೆಯಲ್ಲಿ ಸದ್ಯಕ್ಕೆ ಆರ್ಥಿಕ ಸಂಕಷ್ಟ ಇದೆ. ಪ್ರವಾಹದಿಂದ ಸುಮಾರು 30 ಸಾವಿರ ಕೋಟಿ ನಷ್ಟ ಉಂಟಾಗಿದ್ದು ಅದನ್ನು ಸರಿದೂಗಿಸಬೇಕಿದೆ‌. ಯಾವುದೇ ಕಾಮಗಾರಿಗಳನ್ನು ನಿಲ್ಲಿಸುವುದಿಲ್ಲ. ಹೇಗಾದರೂ ಹಣ ಹೊಂದಿಸಿ ಕಾಮಗಾರಿ ಪೂರ್ಣ ಗೊಳಿಸುತ್ತೇವೆ ಎಂದು ತಿಳಿಸಿದರು.

ಕೆಆರ್ ಡಿಸಿ ಯಲ್ಲಿ ಬೆಂಗಳೂರು ಸುತ್ತಮುತ್ತ 155 ಕಿ.ಮೀ. ರಸ್ತೆಗಳನ್ನು ಒಟ್ಟು 10 ಪ್ಯಾಕೇಜ್ ಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಒಟ್ಟು 2,095 ಕೋಟಿ ರೂ. ವೆಚ್ಚದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಭೂಸ್ವಾಧೀನಕ್ಕಾಗಿ 545 ಕೋಟಿ ರೂ. ಮೀಸಲಿಡಾಗಿದೆ ಎಂದು ಇದೇ ವೇಳೆ ವಿವರಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.