ಬೆಂಗಳೂರು: ಪ್ರವಾಹ ವಿಕೋಪವಾಗಿ ಎರಡು ತಿಂಗಳು ಆಗಿದೆ. ಒಂದು ಬಿಡಿಗಾಸನ್ನೂ ಈವರೆಗೆ ಪ್ರಧಾನಿ ಮೋದಿ ಸರ್ಕಾರ ನೀಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೂರಿದ್ದಾರೆ.
![tweet](https://etvbharatimages.akamaized.net/etvbharat/prod-images/4647009_vicky.jpg)
ಈ ಕುರಿತು ಟ್ವೀಟ್ ಮಾಡಿರುವ ಅವರು, ಈಗ ಕರ್ನಾಟಕ ಸರ್ಕಾರದ ನೆರೆ ಪರಿಹಾರ ವರದಿಗೂ ಕಿಮ್ಮತ್ತಿಲ್ಲ. ಗಾಯದ ಮೇಲೆ ಬರೆ ಹಾಕಿದ್ದಾರೆ ಎಂದು ಟೀಕಿಸಿದ್ದಾರೆ. ಈಗಲಾದರೂ ಸಿಎಂ ಬಿ ಎಸ್ ಯಡಿಯೂರಪ್ಪನವರು ಸರ್ವಪಕ್ಷದ ಮುಖಂಡರ ಸಭೆಯನ್ನು ತಕ್ಷಣ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ. ಕೇಂದ್ರದಿಂದ ಆಗುತ್ತಿರುವ ಘೋರ ಅನ್ಯಾಯದ ಬಗ್ಗೆ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ.