ETV Bharat / state

ನೆರೆಯಿಂದ 8,071 ಕೋಟಿಯಷ್ಟು ಹಾನಿ: ಹೆಚ್ಚು ಹಣ ಬಿಡುಗಡೆಗೆ ಕೇಂದ್ರಕ್ಕೆ ಮನವಿ-ಸಚಿವ ಆರ್. ಅಶೋಕ್ - ಕೇಂದ್ರ ಸರ್ಕಾರಕ್ಕೆ ಸಚಿವ ಆರ್. ಅಶೋಕ್ ಮನವಿ

ವಿಕಾಸಸೌಧದಲ್ಲಿ ಇಂದು ಕೇಂದ್ರದ ಅಧ್ಯಯನ ತಂಡದ ಜೊತೆ ಕಂದಾಯ ಸಚಿವ ಆರ್. ಅಶೋಕ್ ಸಭೆ ನಡೆಸಿದರು.

R Ashok
ಸಚಿವ ಆರ್. ಅಶೋಕ್
author img

By

Published : Sep 9, 2020, 6:02 PM IST

ಬೆಂಗಳೂರು: ಬೆಳಗಾವಿ ಕೊಡಗು ಸೇರಿದಂತೆ ಹಲವು ಕಡೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ನೆರೆಯಿಂದಾದ ಹಾನಿ ಕುರಿತು ಮಾಹಿತಿ ಪಡೆದುಕೊಂಡಿದೆ. 8,071 ಕೋಟಿ ಯಷ್ಟು ಹಾನಿಯಾಗಿರುವ ಬಗ್ಗೆ ಅಂದಾಜು ಮಾಡಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ಕೇಂದ್ರದ ಅಧ್ಯಯನ ತಂಡದ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಅಧ್ಯಯನ ತಂಡ ಬಂದಿತ್ತು. ಮೂರು ತಂಡಗಳಾಗಿ ಮಾಡಲಾಗಿತ್ತು. ಮೂರು ತಂಡಗಳು ಬೆಳಗಾವಿ, ಧಾರವಾಡ, ಕೊಡಗು, ಬಾಗಲಕೋಟೆ ಮತ್ತಿತರ ಕಡೆ ಭೇಟಿ ನೀಡಿ ಪರಿಶೀಲಿಸಿದೆ. ಕೇಂದ್ರ ತಂಡಕ್ಕೆ ಜಿಲ್ಲಾಧಿಕಾರಿಗಳು ಎಲ್ಲ ಮಾಹಿತಿ ಒದಗಿಸಿದ್ದಾರೆ ಎಂದರು.

ಕಂದಾಯ ಸಚಿವ ಆರ್. ಅಶೋಕ್

ಕೇಂದ್ರ ತಂಡ ಎಲ್ಲ ಕಡೆ ಒಂದು ಗಂಟೆಗೂ ಹೆಚ್ಚು ಸಮಯ ಅಧ್ಯಯನ ಮಾಡಿದೆ. ಸುಮಾರು ಇನ್ನೂರರಿಂದ ಮುನ್ನೂರು ಕಿಲೋ ಮೀಟರ್ ಪ್ರವಾಸ ಮಾಡಿ ಅಧ್ಯಯನ ನಡೆಸಿದೆ. ಮೂರು ತಂಡಗಳು ಬೇರೆ ಬೇರೆ ಕಡೆ ತೆರಳಿ ಸುದೀರ್ಘವಾಗಿ ಅಧ್ಯಯನ ಮಾಡಿದ್ದು, ಒಂದು ಮಾತ್ರ ಗಲಾಟೆ ಆಗಿದೆ ಎಂದರು.

ಹಾನಿ ಏನೇನು?: ನೆರೆಯಿಂದಾಗಿ 3,31,170 ಹೆಕ್ಟೇರ್ ಕೃಷಿ ಭೂಮಿ, 32976 ಹೆಕ್ಟೇರ್ ನಷ್ಟು ತೋಟಗಾರಿಕೆ ಬೆಳೆಗಳು ನಾಶವಾಗಿವೆ. 1,0978 ಮನೆಗಳು ಹಾನಿಯಾಗಿವೆ. 14,182 ಕಿಲೋ ಮೀಟರ್ ರಸ್ತೆಗಳು ಹಾಳಾಗಿವೆ. 360 ಕೆರೆಗಳು, 1,268 ಸೇತುವೆಗಳು ಹಾಗೂ 3,168 ಸರ್ಕಾರಿ ಕಟ್ಟಡಗಳು ಹಾನಿಯಾಗಿವೆ ಎಂದು ಸಚಿವರು ಮಾಹಿತಿ ನೀಡಿದರು.

ಎನ್​ಡಿಆರ್​ಎಫ್​ ನಿಯಮದ ಪ್ರಕಾರ 628 ಕೋಟಿ ರೂ. ನಮಗೆ ಕೊಡಬೇಕು‌. ಆದರೆ ಈ ಬಾರಿ ಹೆಚ್ಚು ಹಣ ಬಿಡುಗಡೆ ಮಾಡಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದರು. ಅಲ್ಲದೇ ರಾಜ್ಯದಲ್ಲಿ ನೆರೆ ಪರಿಸ್ಥಿತಿಯನ್ನು ಕೇಂದ್ರ ತಂಡ ಕಣ್ಣಾರೆ ನೋಡಿದೆ. ಹೆಚ್ಚಿನ ಹಣ ಬಿಡುಗಡೆ ಮಾಡಿಕೊಡಿ ಎಂದು ಮನವಿ ಮಾಡಿದ್ದೇವೆ‌. ಕೇಂದ್ರ ತಂಡ ಹೆಚ್ಚು ಅನುದಾನ ಬಿಡುಗಡೆಗೆ ಶಿಫಾರಸ್ಸು ಮಾಡುತ್ತೇವೆ ಎಂದು ಸಚಿವರು ಭರವಸೆ ನೀಡಿದರು. ಎನ್​ಡಿಆರ್​ಎಫ್ ನಿಯಮ ಬದಲಾವಣೆ ಮಾಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಹೆಚ್ಚು ಹಣ ಇದರ ಅಡಿ ಬಿಡುಗಡೆಗೆ ಮನವಿ ಮಾಡಿದ್ದೇವೆ ಎಂದರು.

ಎರಡು ಮನವಿ: ಕೇಂದ್ರ ನೆರೆ ಅಧ್ಯಯನ ತಂಡಕ್ಕೆ ಸರ್ಕಾರದಿಂದ ಎರಡು ಮನವಿ ಮಾಡಿದ್ದೇವೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ Integrated flood forecasting and response system ಸ್ಥಾಪನೆಗೆ ಮನವಿ ಮಾಡಲಾಗಿದೆ. ಅದೇ ರೀತಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಭೂ ಕುಸಿತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟದಲ್ಲಿ Landslide hazard mapping and early warning system ಸ್ಥಾಪಿಸಲು ಕೋರಲಾಗಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.