ETV Bharat / state

ಯುುಪಿಎ ಅಥವಾ ಎನ್‌ಡಿಎ, 10 ವರ್ಷದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಬಿಡಿಗಾಸಿನ ಪರಿಹಾರ

ರಾಜ್ಯಕ್ಕೆ ಬರಬೇಕಾದ ಪರಿಹಾರ ಹಣಕ್ಕೇ ಯಾವತ್ತೂ ಕತ್ತರಿ ಬೀಳುತ್ತಿದೆ. 2008-09 ರಿಂದ 2019-20 ಸಾಲಿನವರೆಗೆ ರಾಜ್ಯ ಸರ್ಕಾರ ಸುಮಾರು 53,625 ಕೋಟಿ ರೂ. ಪರಿಹಾರ ಕೋರಿದ್ರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಮಾತ್ರ 11,495 ಕೋಟಿ ರೂ. ಮಾತ್ರ..

Flood
ನೆರೆ
author img

By

Published : Sep 12, 2020, 5:02 PM IST

ಬೆಂಗಳೂರು : ನೆರೆ ಪರಿಹಾರ ಸಂಬಂಧ ಕರ್ನಾಟಕದ ಪರ ಕೇಂದ್ರ ಸರ್ಕಾರ ತಾರತಮ್ಯ ತೋರುತ್ತಿದೆ. ಕಳೆದ 10 ವರ್ಷದಲ್ಲಿ ಪರಿಹಾರ ಮೊತ್ತ ಬಿಡುಗಡೆಯ ಇತಿಹಾಸ ನೋಡಿದ್ರೆ ಅದು ಸ್ಪಷ್ಟವಾಗುತ್ತದೆ.

ರಾಜ್ಯದಲ್ಲಿ ಉಂಟಾಗಿರುವ ನೆರೆ ದೃಶ್ಯ

ಬೆಟ್ಟದಷ್ಟು ನಷ್ಟ ಸಂಭವಿಸಿದ್ರೂ ಕೇಂದ್ರ ಮಾತ್ರ ಬಿಡಿಗಾಸನಷ್ಟೇ ಬಿಡುಗಡೆ ಮಾಡಿದೆ. ಕೇಂದ್ರದಲ್ಲಿ ಯಾವುದೇ ಸರ್ಕಾರವಿದ್ರೂ ರಾಜ್ಯಕ್ಕೆ ಅನ್ಯಾಯವಾಗ್ತಾನೆ ಇದೆ.

ರಾಜ್ಯಕ್ಕೆ ತಪ್ಪಿಲ್ಲ ತಾರತಮ್ಯ : ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಇಲ್ಲ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವೇ ಇರಲಿ, ರಾಜ್ಯಕ್ಕೆ ಬರಬೇಕಾದ ಪರಿಹಾರ ಹಣಕ್ಕೇ ಯಾವತ್ತೂ ಕತ್ತರಿ ಬೀಳುತ್ತಿದೆ. 2008-09 ರಿಂದ 2019-20 ಸಾಲಿನವರೆಗೆ ರಾಜ್ಯ ಸರ್ಕಾರ ಸುಮಾರು 53,625 ಕೋಟಿ ರೂ. ಪರಿಹಾರ ಕೋರಿದ್ರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಮಾತ್ರ 11,495 ಕೋಟಿ ರೂ. ಮಾತ್ರ.

ಯುಪಿಎ ಅವಧಿಯಲ್ಲಿ ಕೊಟ್ಟ ಪರಿಹಾರ ಏನು?: 2009 ರಿಂದ 2014ರವರೆಗೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಆ ಅವಧಿಯಲ್ಲಿದ್ದ ರಾಜ್ಯ ಬಿಜೆಪಿ ಸರ್ಕಾರ ಬರ ಮತ್ತು ಪ್ರವಾಹ ಸಂಬಂಧ ಒಟ್ಟು 29,656 ಕೋಟಿ ರೂ. ಕೋರಿತ್ತು. ಆದರೆ, ಅಂದಿನ ಯುಪಿಎ ಸರ್ಕಾರ ಕೊಟ್ಟಿದ್ದು ಕೇವಲ 2,499.85 ಕೋಟಿ ರೂ. ಮಾತ್ರ.

2008-09ರ ಆಗಸ್ಟ್ ತಿಂಗಳಲ್ಲಿ ನೆರೆ ಪರಿಹಾರವಾಗಿ ಅಂದಿನ ರಾಜ್ಯ ಬಿಜೆಪಿ ಸರ್ಕಾರ 516 ಕೋಟಿ ರೂ. ಕೇಳಿತ್ತು. ಇನ್ನು 2,019 ಕೋಟಿ ರೂ. ಬರ ಪರಿಹಾರ ಕೋರಿತ್ತು. ಎರಡೂ ಸೇರಿ ಒಟ್ಟು 2,536 ಕೋಟಿ ರೂ. ಪರಿಹಾರ ಕೋರಿತ್ತು. ಆದರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಮಾತ್ರ 79.19 ಕೋಟಿ ರೂ. ಕೇಳಿದ್ದ 2019 ಕೋಟಿ ರೂ. ಬರ ಪರಿಹಾರ ಸಂಬಂಧ 1.86 ಕೋಟಿ ರೂ. ನೀಡಿತ್ತು.

2010ರಲ್ಲಿ ರಾಜ್ಯ ಸರ್ಕಾರ 1045.36 ಕೋಟಿ ರೂ. ನೆರೆ ಪರಿಹಾರ ಕೋರಿತ್ತು. ಆದರೆ, ಅಂದಿನ ಯುಪಿಎ ಸರ್ಕಾರ ಯಾವುದೇ ಹಣ ಬಿಡುಗಡೆ ಮಾಡಿರಲಿಲ್ಲ ಎಂಬ ಮಾಹಿತಿ ಕಂದಾಯ ಇಲಾಖೆ ದಾಖಲಾತಿಗಳಿಂದ ತಿಳಿದು ಬಂದಿದೆ.

ಎನ್‌ಡಿಎ ಅವಧಿಯಲ್ಲೂ ಅದೇ ತಾರತಮ್ಯ: ಅದೇ ರೀತಿ 2014ರಲ್ಲಿ ಅಧಿಕಾರ ಹಿಡಿದಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಅವಧಿಯಲ್ಲೂ ರಾಜ್ಯಕ್ಕೆ ಪರಿಹಾರ ಹಣ ಬಿಡುಗಡೆಯಲ್ಲಿ ತಾರತಮ್ಯವಾಗಿದೆ. ಈ ಅವಧಿಯಲ್ಲಿ ಸಂಭವಿಸಿದ್ದ ಬರ ಮತ್ತು ನೆರೆ ಸಂಬಂಧ ರಾಜ್ಯ ಸರ್ಕಾರ ಒಟ್ಟು 26,031 ಕೋಟಿ ರೂ. ಪರಿಹಾರ ಕೇಳಿತ್ತು. ಆದರೆ, ಕೇಂದ್ರ ಸರ್ಕಾರ ನೀಡಿದ್ದು ಕೇವಲ 8995 ಕೋಟಿ ರೂ. ಮಾತ್ರ.

2016ರಲ್ಲಿ ಸಿದ್ದರಾಮಯ್ಯ ಸರ್ಕಾರ ಬರ ಪರಿಹಾರವಾಗಿ 4,702 ಕೋಟಿ ರೂ. ಮತ್ತು ನೆರೆ ಪರಿಹಾರವಾಗಿ 386 ಕೋಟಿ ರೂ. ಹಣ ಕೇಳಿತ್ತು. ಆದರೆ, ಎನ್‌ಡಿಎ ಸರ್ಕಾರ 1782 ಕೋಟಿ ರೂ.ಬರ ಪರಿಹಾರ ಮತ್ತು 209 ಕೋಟಿ ರೂ. ನೆರೆ ಪರಿಹಾರ ಹಣ ಬಿಡುಗಡೆ ಮಾಡಿತ್ತು.

2018ರಲ್ಲಿ ಸಂಭವಿಸಿದ ಪ್ರವಾಹಕ್ಕೆ ಕೊಡಗು, ಮಲೆನಾಡು ಪ್ರದೇಶಗಳಲ್ಲಿ ಭೂ ಕುಸಿತವಾಗಿ ಅಪಾರ ಹಾನಿ ಸಂಭವಿಸಿತ್ತು. ಈ ಸಂಬಂಧ ಕುಮಾರಸ್ವಾಮಿ ಸರ್ಕಾರ ಕೇಂದ್ರದ ಬಳಿ 1199 ಕೋಟಿ ರೂ. ಪರಿಹಾರ ಕೇಳಿತ್ತು. ಆದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ 546.21 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿತ್ತು.

2019ರ ಅವಧಿಯಲ್ಲಿ ರಾಜ್ಯ ಭೀಕರ ಪ್ರವಾಹಕ್ಕೆ ಸಿಲುಕಿತ್ತು. ಭೀಕರ ಅತಿವೃಷ್ಟಿಗೆ ಯಡಿಯೂರಪ್ಪ ಸರ್ಕಾರ ಕೇಂದ್ರ ಸರ್ಕಾರದ ಬಳಿ ಸುಮಾರು 35,160.81 ಕೋಟಿ ರೂ. ಪರಿಹಾರದ ಮನವಿ ಸಲ್ಲಿಸಿತ್ತು. ಆದರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರ ಮೊತ್ತ ಕೇವಲ 1,869 ಕೋಟಿ ರೂ. ಮಾತ್ರ. ಆದರೆ, 2019ರ ನೆರೆ ಕಳೆದ 100 ವರ್ಷದಲ್ಲಿ ಅತಿ ದೊಡ್ಡ ಪ್ರಮಾಣದ್ದಾಗಿತ್ತು. ಇಷ್ಟಿದ್ರೂ ಮೋದಿ ನೇತೃತ್ವದ ಸರ್ಕಾರ ರಾಜ್ಯಕ್ಕೆ ದೊಡ್ಡ ಅನ್ಯಾಯ ಮಾಡಿದ್ದು ಸುಳ್ಳಲ್ಲ ಅಂತಿವೆ ವಿಪಕ್ಷಗಳು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.