ETV Bharat / state

ಮೇ 25 ರಿಂದ ಮಂಗಳೂರಿನಿಂದ ಚೆನ್ನೈ, ಮುಂಬೈಗೆ ವಿಮಾನ ಯಾನ ಆರಂಭ

author img

By

Published : May 23, 2020, 10:13 AM IST

Updated : May 23, 2020, 12:06 PM IST

ಕೊರೊನಾ ಲಾಕ್​ಡೌನ್​​ನಿಂದ ವಿಮಾನ ಯಾನ ಸೇವೆಯ ಆರಂಭಕ್ಕೆ ವಿಮಾನ ಯಾನ ಸಚಿವಾಲಯ ಸೂಚನೆ ನೀಡಿದೆ. ಮೇ.25ರಿಂದ ಮಂಗಳೂರಿನಿಂದ ಮುಂಬೈ, ಚೆನ್ನೈಗೆ ವಿಮಾನಗಳ ಹಾರಾಟ ಆರಂಭವಾಗಲಿದೆ.

Mangalore Airport
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಮಂಗಳೂರು: ಕೊರೊನಾದಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆ ಪ್ರಾರಂಭಿಸಲು ವಿಮಾನ ಯಾನ ಸಚಿವಾಲಯ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮೇ.25ರಿಂದ ಮಂಗಳೂರಿನಿಂದ ಮುಂಬೈ, ಚೆನ್ನೈಗೆ ವಿಮಾನಗಳ ಹಾರಾಟ ಆರಂಭವಾಗಲಿದೆ.

ಮೇ 25 ರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈ, ಚೆನ್ನೈಗೆ ವಿಮಾನ ಯಾನ ಆರಂಭವಾಗಲಿದ್ದು, ಸ್ಪೈಸ್ ಜೆಟ್ ಮತ್ತು ಇಂಡಿಗೋ ಕಂಪನಿಗಳು ವಿಮಾನ ಯಾನದ ವೇಳಾ ಪಟ್ಟಿ ಬಿಡುಗಡೆ ಮಾಡಿವೆ. ಇಂಡಿಗೋದ 3 ವಿಮಾನಗಳು ಮುಂಬೈ, ಬೆಂಗಳೂರು, ಚೆನ್ನೈಗೆ ಸಂಚರಿಸಲಿದ್ದು, ಸ್ಪೈಸ್ ಜೆಟ್​​​ನ 3 ವಿಮಾನಗಳು ಬೆಂಗಳೂರು, ಮುಂಬೈಗೆ ಸಂಚಾರ ನಡೆಸಲಿವೆ.

ಬೆಂಗಳೂರಿನಿಂದ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 8.30ಕ್ಕೆ, ರಾತ್ರಿ 7 ಗಂಟೆಗೆ ಮತ್ತು ಇಂಡಿಗೋ ವಿಮಾನ ಸಂಜೆ 5.55ಕ್ಕೆ ಮಂಗಳೂರಿಗೆ ಆಗಮಿಸಲಿದೆ. ಮಂಗಳೂರಿನಿಂದ ಬೆಂಗಳೂರಿಗೆ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 10.20ಕ್ಕೆ, ರಾತ್ರಿ 9.35 ಹಾಗೂ ಇಂಡಿಗೋ ಸಂಜೆ 7.30ಕ್ಕೆ ಸಂಚರಿಸಲಿದೆ.

ಮುಂಬೈನಿಂದ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 7.05ಕ್ಕೆ, ಇಂಡಿಗೋ ಬೆಳಗ್ಗೆ 9.30ಕ್ಕೆ ಮಂಗಳೂರಿಗೆ ಹೊರಡಲಿವೆ. ಮಂಗಳೂರಿನಿಂದ ಮುಂಬೈಗೆ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 9.05ಕ್ಕೆ , ಇಂಡಿಗೋ 11.40 ಕ್ಕೆ ತೆರಳಲಿದೆ. ಚೆನ್ನೈನಿಂದ ಮಂಗಳೂರಿಗೆ ಸಂಜೆ 5.45ಕ್ಕೆ ಹಾಗೂ ಮಂಗಳೂರಿನಿಂದ ಚೆನ್ನೈಗೆ ರಾತ್ರಿ 8.05ಕ್ಕೆ ಇಂಡಿಗೋ ವಿಮಾನ ಸಂಚರಿಸಲಿದೆ.

Last Updated : May 23, 2020, 12:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.