ಬೆಂಗಳೂರು: ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಶೇ. 1.0ರಷ್ಟು ಏರಿಕೆ ಮಾಡಿರುವುದಕ್ಕೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ವಿರೋಧ ವ್ಯಕ್ತಪಡಿಸಿದೆ.
ಎಫ್‍ಕೆಸಿಸಿಐ ನಿರಂತರವಾಗಿ ರಾಜ್ಯ ಸರ್ಕಾರದೊಂದಿಗೆ ಸಭೆಗಳನ್ನು ನಡೆಸಿದ ಪರಿಣಾಮವಾಗಿ ರಾಜ್ಯ ಸರ್ಕಾರ 4 ಆಗಸ್ಟ್, 2020ರಂದು ಎಪಿಎಂಸಿ ವರ್ತಕರ ಬಹು ದಿನದ ಬೇಡಿಕೆಯಾದ ಶೇ. 1.5ರಷ್ಟು ಮಾರುಕಟ್ಟೆ ಶುಲ್ಕವನ್ನು ಶೇ. 0.35ಕ್ಕೆ ಇಳಿಕೆ ಮಾಡಿ ಆದೇಶ ಹೊರಡಿಸಿ ರಾಜ್ಯದ ಎಲ್ಲಾ ಎಪಿಎಂಸಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ ಇಳಿಕೆ ಮಾಡಲಾದ ಮಾರುಕಟ್ಟೆ ಶುಲ್ಕವನ್ನು ಪುನಃ ಶೇ. 1.0ನಷ್ಟು ಏರಿಕೆ ಮಾಡಿರುವುದು ಎಫ್‍ಕೆಸಿಸಿಐಯ ಅಸಮಾಧಾನಕ್ಕೆ ಕಾರಣವಾಗಿದೆ.
ಓದಿ : ದಾವಣಗೆರೆ: ಸಕ್ಕರೆ ಕಾರ್ಖಾನೆಯಿಂದ ಚಿಕ್ಕ ಬಿದರೆ ಗ್ರಾಮಸ್ಥರ ಬದುಕು ಅಯೋಮಯ
ಎಫ್‍ಕೆಸಿಸಿಐ ಎಲ್ಲಾ ಎಪಿಎಂಸಿಗಳು, ವ್ಯಾಪಾರಸ್ಥರ ಪರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾರುಕಟ್ಟೆ ಶುಲ್ಕವನ್ನು ಶೇ. 0.50ಕ್ಕೆ ಇಳಿಸಲು ಮನವಿ ಸಲ್ಲಿಸಿತ್ತು. ಆದರೂ ಸರ್ಕಾರ ಶುಲ್ಕವನ್ನು ಶೇ. 0.60 ನಿಗದಿಪಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ, ಎಫ್‍ಕೆಸಿಸಿಐನ ಅಧ್ಯಕ್ಷ ಪೆರಿಕಲ್ ಎಂ. ಸುಂದರ್, ಮೊದಲೇ ವಿನಂತಿಸಿದಂತೆ ತಾರತಮ್ಯ ನೀತಿಯನ್ನು ಅನುಸರಿಸದೇ ಕೃಷಿ ಮಾರುಕಟ್ಟೆ ಪ್ರಾಂಗಣದ ಒಳಗೂ ಮತ್ತು ಹೊರಗೂ ಎಲ್ಲಾ ವರ್ತಕರಿಗೂ ಸಮನಾದ ಏಕ ಪ್ರಮಾಣದ ಶೇ. 0.50 ಶುಲ್ಕ ನಿಗದಿಪಡಿಸಿ ಆದೇಶ ಹೊರಡಿಸಿದಲ್ಲಿ ಸರ್ಕಾರಕ್ಕೂ ಹೆಚ್ಚಿನ ಆದಾಯ ಬರುತ್ತದೆ ಎಂದು ಹೇಳಿದ್ದಾರೆ.