ETV Bharat / state

Suspected terrorists: ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಳಿ ದೊರೆತ ಗ್ರೆನೇಡ್ ಜಾಡು ಬೆನ್ನತ್ತಿದ ಸಿಸಿಬಿ‌ ಪೊಲೀಸರು - ನಾಲ್ಕು ಹ್ಯಾಂಡ್​ ಗ್ರೆನೇಡ್​ ಪತ್ತೆ

ಬೆಂಗಳೂರು ನಗರದಲ್ಲಿ ಐವರು ಶಂಕಿತ ಉಗ್ರರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಇವರಿಂದ ವಶಕ್ಕೆ ಪಡೆದಿರುವ ಗ್ರೆನೇಡ್​ ಕುರಿತು ತನಿಖೆ ನಡೆಸಲಿದ್ದಾರೆ.

Etv five-suspected-terrorist-arrested-in-bengaluru-ccb-police-investigating-about-grenade
ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಳಿ ದೊರೆತ ಗ್ರೆನೇಡ್ ಜಾಡು ಬೆನ್ನತ್ತಿದ ಸಿಸಿಬಿ‌ ಪೊಲೀಸರು
author img

By

Published : Jul 22, 2023, 11:08 AM IST

ಬೆಂಗಳೂರು : ರಾಜಧಾನಿಯಲ್ಲಿ‌ ಶಂಕಿತ ಉಗ್ರರ ಬಂಧನದ ಬಳಿಕ ಅವರಿಂದ ವಶಕ್ಕೆ ಪಡೆಯಲಾದ ಗ್ರೆನೇಡ್ ಹಿಂದಿನ ರಹಸ್ಯ ತಿಳಿಯಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಆರೋಪಿಗಳಿಗೆ ಗ್ರೆನೇಡ್ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಿದ್ದಾರೆ.

ಸಿಸಿಬಿ ಪೊಲೀಸರು ಸದ್ಯ ನಾಲ್ಕು ಗ್ರೆನೇಡ್​​ಗಳನ್ನು ಶಂಕಿತರಿಂದ ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದ ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯ (FSL) ಹಾಗೂ ರಾಷ್ಟ್ರೀಯ ಬಾಂಬ್ ಡಾಟಾ ಸೆಂಟರ್ (NBDC)ಗಳು ಈ ಪರಿಶೀಲನೆ ಆರಂಭಿಸಲಿವೆ. ಮೊದಲಿಗೆ ಗ್ರೆನೇಡ್​​ಗಳನ್ನು ನಿಷ್ಕ್ರಿಯಗೊಳಿಸುವ ಕೆಲಸ ಮಾಡಲಾಗುತ್ತದೆ. ನಂತರ ಅವುಗಳ ತಯಾರಿಕೆಗೆ ಬಳಕೆಯಾಗಿರುವ ಕಚ್ಚಾ ವಸ್ತುಗಳ ವಿಂಗಡಣೆ ಮಾಡಲಾಗುತ್ತದೆ.

ಬಳಿಕ ಪ್ರತಿಯೊಂದು ಕಚ್ಚಾವಸ್ತು ಎಲ್ಲಿ ತಯಾರಾಗಿರಬಹುದು ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಗ್ರೆನೇಡ್ ಮಾದರಿಯನ್ನು ಬಳಿಕ 'ಎನ್​ಬಿಡಿಸಿ' ಡಾಟಾಗಳ ಜೊತೆಗೆ ಅನಾಲಿಸಿಸ್ ಮಾಡಲಾಗುತ್ತದೆ. ದೇಶದಲ್ಲಿ ಸಂಭವಿಸುವ ಪ್ರತೀ ಸ್ಫೋಟಗಳ ಡಾಟಾ ನಿರ್ವಹಣೆ ಮಾಡುವ 'ಎನ್​​ಬಿಡಿಸಿ' ಈ ಮಾದರಿಯ ಗ್ರೆನೇಡ್ ಎಲ್ಲಿಯಾದರೂ ಬಳಕೆಯಾಗಿದೆಯಾ ಎಂಬುದರ ಕುರಿತು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತದೆ.

ಈ ಎಲ್ಲಾ ಪರಿಶೀಲನೆಗಳ ನಂತರ ಗ್ರೆನೇಡ್ ಎಲ್ಲಿಯದ್ದು? ಹೇಗೆ ತಯಾರಾಗಿದೆ? ಈ ಮಾದರಿಯ ಸ್ಫೋಟಕ ಈ ಹಿಂದೆ ಎಲ್ಲಿಯಾದರೂ ಬಳಕೆಯಾಗಿದೆಯೇ ?.. ಸ್ಫೋಟ ಮತ್ತು ಅದರ ಪರಿಣಾಮವೇನು ಎಂಬ ಮಾಹಿತಿ ಲಭ್ಯವಾಗಲಿದೆ ಎಂದು ಸಿಸಿಬಿಯ ಉನ್ನತ ಮೂಲಗಳು ತಿಳಿಸಿವೆ.

ಶಂಕಿತ ಉಗ್ರನ ಮನೆಯಲ್ಲಿ ನಾಲ್ಕು ಹ್ಯಾಂಡ್​ ಗ್ರೆನೇಡ್​ ಪತ್ತೆ : ಬೆಂಗಳೂರು ನಗರದ ಜನನಿಬಿಡ ಪ್ರದೇಶಗಳಲ್ಲಿ ಶಂಕಿತ ಭಯೋತ್ಪಾದಕರು ಸ್ಫೋಟ ನಡೆಸಲು ಸಂಗ್ರಹಿಸಿ ಬಚ್ಚಿಟ್ಟಿದ್ದ ನಾಲ್ಕು ಜೀವಂತ ಹ್ಯಾಂಡ್ ಗ್ರೆನೇಡ್​ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಪ್ರಕರಣದ ಐದನೇ ಆರೋಪಿ ಜಾಯೇದ್ ತಬ್ರೆಸ್​ ತನ್ನ ಕೊಡಿಗೆಹಳ್ಳಿಯ ಮನೆಯ ಅಲ್ಮೇರಾದಲ್ಲಿ ಬಚ್ಚಿಟ್ಟಿದ್ದ ನಾಲ್ಕು ಹ್ಯಾಂಡ್ ಗ್ರೆನೇಡ್​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬೆಂಗಳೂರಿನಲ್ಲಿ ಹ್ಯಾಂಡ್​ ಗ್ರೆನೇಡ್​ ಪತ್ತೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ.

ಮಾಸ್ಟರ್​ ಮೈಂಡ್​ ನಜೀರ್​ನನ್ನು ವಶಕ್ಕೆ ಪಡೆಯಲು ಮುಂದಾದ ಸಿಸಿಬಿ : ನಗರದಲ್ಲಿ ಐವರು ಶಂಕಿತ ಭಯೋತ್ಪಾದಕರನ್ನು ಬಂಧಿಸಿರುವ ಸಿಸಿಬಿ ಪೊಲೀಸರು‌ ಶಂಕಿತರ ಗ್ಯಾಂಗ್​ನ ಕಮಾಂಡರ್​ನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ಆರೋಪಿಯು ಜೈಲಿನಲ್ಲಿದ್ದುಕೊಂಡೇ ಶಂಕಿತ ಉಗ್ರರಿಗೆ ನಿರ್ದೇಶನ ನೀಡುತ್ತಿದ್ದ. ಟಿ ನಜೀರ್​ನನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ತನಿಖೆ ನಡೆಸಲಿದ್ದಾರೆ. ನಜೀರ್​ 2008ರಲ್ಲಿ ಬೆಂಗಳೂರು ನಗರದಲ್ಲಿ ನಡೆದ ಸರಣಿ ಬಾಂಬ್​ ಸ್ಪೋಟ ಪ್ರಕರಣದ ರೂವಾರಿಯಾಗಿದ್ದಾನೆ. ಆರೋಪಿಯು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಇಲ್ಲಿ ವಿವಿಧ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟು ಜೈಲು ಸೇರಿದ್ದ ಬಂಧಿತ ಶಂಕಿತ ಉಗ್ರರಿಗೆ ಈತ ಬ್ರೈನ್​ವಾಶ್​ ಮಾಡಿದ್ದ. ಬಳಿಕ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ : ಶಂಕಿತ ಉಗ್ರನ ಮನೆಯಲ್ಲಿ ಪತ್ತೆಯಾದವು 4 ಹ್ಯಾಂಡ್ ಗ್ರೆನೇಡ್: ರಾಜಧಾನಿಯಲ್ಲಿ‌ ದೊರಕಿದ್ದು ಇದೇ ಮೊದಲು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.