ದೊಡ್ಡಬಳ್ಳಾಪುರ : ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ 5 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಬಾಶೆಟ್ಟಿಹಳ್ಳಿ ವ್ಯಾಪ್ತಿಯ ಟಫೆ ಕಾರ್ಖಾನೆ ಬಳಿ ಬೆಳಗ್ಗೆ ನಡೆದಿದೆ.
ಬೀನು ಮಂಡಲ್(25), ಶೋಭಾನ್ ಮಂಡಲ್ (3), ಮೋನಿಕಾ ಮಂಡಲ್ (21), ಬೋಲಾನಾಥ್ (60), ಶೋಭಿತಾ ಮಂಡಲ್(55) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ವೃದ್ಧೆ ಶೋಭಿತಾ ಮಂಡಲ್ ಅವರ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳು ಕೋಲ್ಕತ್ತಾ ಮೂಲದವರಾಗಿದ್ದು, ಕಳೆದ ನಾಲ್ಕು ತಿಂಗಳಿಂದ ದೊಡ್ಡಬಳ್ಳಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕುಟುಂಬಸ್ಥರು ರಾತ್ರಿ ಮಲಗುವ ಮುನ್ನಾ ಗ್ಯಾಸ್ ಸ್ಟೌವ್ ಆಫ್ ಮಾಡೋದನ್ನು ಮರೆತು ಮಲಗಿದ್ದರೋ ಅಥವಾ ಗ್ಯಾಸ್ ಸೋರಿಕೆಯಿಂದ ಮನೆ ತುಂಬೆಲ್ಲ ಗ್ಯಾಸ್ ಸೋರಿಕೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸ್ಫೋಟದ ತೀವ್ರತೆಗೆ ಮನೆಯ ಶೀಟ್ ಹಾರಿ ಹೋಗಿದ್ದು, ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಅಕ್ಕಪಕ್ಕದ ಮನೆಗೂ ಸಣ್ಣ-ಪುಟ್ಟ ಹಾನಿಯಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಕಬ್ಬಿನ ಬಿಲ್ ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ 3 ದಿನಗಳ ಡೆಡ್ಲೈನ್: ಸಚಿವ ಮುನೇನಕೊಪ್ಪ