ಆನೇಕಲ್ (ಬೆಂಗಳೂರು): ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಏಳು ಮಂದಿ ಗಾಯಗೊಂಡಿರುವ ಘಟನೆ ಇಂದು ಇಲ್ಲಿನ ಬೆಂಗಳೂರು-ವೀವರ್ಸ್ ಕಾಲೊನಿಯ ಮಾರುತಿ ಬಡಾವಣೆಯಲ್ಲಿ ಸಂಭವಿಸಿತು. ಮಾರ್ಟಿನ್ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸವಿದ್ದ ಉತ್ತರ ಪ್ರದೇಶದ ಬನಾರಸ್ ಮೂಲದ ಜಮಾಲ್ (32), ನಾಜಿಯಾ (22), ಇರ್ಫಾನ್ (21), ಗುಲಾಬ್ (18) ಹಾಗು ಶಹಜಾದ್ (9) ಗಾಯಗೊಂಡಿದ್ದಾರೆ.
ಮುಂಜಾನೆ 5:30ರ ಸುಮಾರಿಗೆ ವಿದ್ಯುತ್ ಬಲ್ಬ್ ಸ್ವಿಚ್ ಆನ್ ಮಾಡಿದಾಗ ಆಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಕಿಟಕಿ, ಬಾಗಿಲುಗಳು ಛಿದ್ರಗೊಂಡಿವೆ. ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜುಗಳು ಸಿಡಿದಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇತ್ತೀಚಿನ ಘಟನೆ-ಚಿಕ್ಕಬಳ್ಳಾಪುರದಲ್ಲಿ ಸಿಲಿಂಡರ್ ಸ್ಫೋಟ: ಇದೇ ತಿಂಗಳ 16ನೇ ತಾರೀಖಿನಂದು ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಮಹಿಳೆ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿತ್ತು. ಅಡುಗೆ ಅನಿಲ ಸೋರಿಕೆಯಾಗಿರುವ ಬಗ್ಗೆ ಪಕ್ಕದ ಮನೆಯವರಿಗೆ ತಿಳಿಸಲು ಮಹಿಳೆ ಬಂದಿದ್ದರು. ಈ ಸಮಯದಲ್ಲೇ ಸಿಲಿಂಡರ್ ಸ್ಫೋಟಗೊಂಡಿದೆ. ಮೂವರಿಗೆ ಗಾಯಗಳಾಗಿತ್ತು.
ಇದನ್ನೂ ಓದಿ: Cylinder blast : ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ.. ಓರ್ವ ಸಾವು, ಇಬ್ಬರಿಗೆ ಗಾಯ
ಚಿಕ್ಕಬಳ್ಳಾಪುರ ನಗರದ 5ನೇ ವಾರ್ಡ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರಿನ ಕೊಳೆಗೇರಿ ಪ್ರದೇಶದ ಶೀಟ್ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಸ್ಫೋಟದ ರಭಸಕ್ಕೆ ಗೃಹ ಬಳಕೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನೆ ಗೊಡೆಗಳಿಗೆ ಹಾನಿಯಾಗಿತ್ತು. ಶೀಟುಗಳು ಹಾರಿ ಬಿದ್ದಿದ್ದವು. ಅಕ್ಕಪಕ್ಕದ ಮನೆಗಳ ವಾಹನಗಳು ಜಖಂಗೊಂಡಿದ್ದವು.
ಇದನ್ನೂ ಓದಿ: ಚಿಕ್ಕಬಳ್ಳಾಪುರ : ಅಡುಗೆ ಅನಿಲ ಸಿಲಿಂಡರ್ ಸ್ಫೋಟ, ಮೂವರಿಗೆ ಗಂಭೀರ ಗಾಯ