ದೇವನಹಳ್ಳಿ : ಕೊರೊನಾ ವೈರಸ್ ಎರಡನೇ ಅಲೆ ಇಂಗ್ಲೆಂಡ್ನಲ್ಲಿ ಶುರುವಾದ ಹಿನ್ನೆಲೆ, ಇಂಗ್ಲೆಂಡ್ ನಡುವಿನ ವಿಮಾನಯಾನ ರದ್ದು ಮಾಡಲಾಗಿತ್ತು. ಇಂದಿನಿಂದ ಇಂಗ್ಲೆಂಡ್ ನಡುವಿನ ವಿಮಾನಯಾನ ಪ್ರಾರಂಭವಾಗಿದ್ದು, ಮೊದಲ ವಿಮಾನ ಇಂದು ಮುಂಜಾನೆ 4-30 ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಇಂಗ್ಲೆಂಡ್ನಿಂದ ಮೊದಲ ವಿಮಾನದಲ್ಲಿ 289 ಪ್ರಯಾಣಿಕರು ಆಗಮಿಸಿದ್ದು, ಅದರಲ್ಲಿ ನಾಲ್ವರ ಕೋವಿಡ್-19 ತಪಾಸಣಾ ವರದಿಯು ಅನುಮಾನಾಸ್ಪದವಾಗಿ ಕಂಡು ಬಂದಿರುವುದರಿಂದ ಅವರೆಲ್ಲರನ್ನೂ ಐಸೋಲೇಷನ್ ಮಾಡಲಾಗಿದೆ. ಒಟ್ಟು 289 ಪ್ರಯಾಣಿಕರು ಆಗಮಿಸಿದ್ದು, 146 ಪುರುಷರು, 95 ಮಹಿಳೆಯರು, 32 ಮಕ್ಕಳು ಮತ್ತು 16 ಸಿಬ್ಬಂದಿ ಆಗಮಿಸಿದ್ದರು.
ಏರ್ ಪೋರ್ಟ್ನಲ್ಲಿಯೇ ಎಲ್ಲ 289 ಜನರ ಟೆಸ್ಟ್ ಮಾಡಲಾಗಿದ್ದು, ಇದರಲ್ಲಿ ನಾಲ್ವರ ವರದಿ ಅನುಮಾನಾಸ್ಪದವಾಗಿದೆ. ಇನ್ನುಳಿದ ಎಲ್ಲ ಪ್ರಯಾಣಿಕರ ವರದಿ ನೆಗಟಿವ್ ಬಂದಿದ್ದು, ಅವರ ಕೈ ಗಳಿಗೆ ಸ್ಟಾಂಪ್ ಹಾಕಿ, 14 ದಿನಗಳ ಹೋಮ್ ಕ್ವಾರಂಟೈನ್ಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ.
ಓದಿ : ದೇಶದಲ್ಲಿ ಹಕ್ಕಿ ಜ್ವರ ಹರಡಲು ಪ್ರತಿಭಟನಾನಿರತ ರೈತರೇ ಕಾರಣ : ಬಿಜೆಪಿ ಶಾಸಕ