ETV Bharat / state

ಸೀಗೇಹಳ್ಳಿ BMTC ಡಿಪೋ-35ರ ಬಳಿಯ ಗೋಡೌನ್​ಗೆ ಬೆಂಕಿ

author img

By

Published : Sep 13, 2021, 7:28 AM IST

ಸೀಗೇಹಳ್ಳಿ ಬಿಎಂಟಿಸಿ ಡಿಪೋ 35 ರ ಬಳಿಯ ಗೋಡೌನ್​ವೊಂದರಲ್ಲಿ ಭಾರಿ ಅಗ್ನಿಅವಘಡ ಸಂಭವಿಸಿದೆ.

ಬೆಂಕಿ
ಬೆಂಕಿ

ಬೆಂಗಳೂರು : ಮಾಗಡಿ ರಸ್ತೆಯ ಸೀಗೇಹಳ್ಳಿ ಬಿಎಂಟಿಸಿ ಡಿಪೋ-35 ರ ಬಳಿಯ ಪ್ಲಾಸ್ಟಿಕ್ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಗೋದಾಮಿಗೆ ಬೆಂಕಿ ಬಿದ್ದಿದೆ ಎನ್ನಲಾಗಿದೆ.

ಬಿಎಂಟಿಸಿ ಡಿಪೋ ಬಳಿ ಅಗ್ನಿ ಅವಘಡ

ಸ್ಥಳಕ್ಕೆ ದೌಡಾಯಿಸಿರುವ ಎಂಟು ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆ ವೇಳೆಗಾಗಲೇ ಪಕ್ಕದಲ್ಲಿದ್ದ ಆರು ಮರಗಳಿಗೂ ಜ್ವಾಲೆ ವ್ಯಾಪಿಸಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ.

ಇದನ್ನೂ ಓದಿ: ಬೋಟ್ ದುರಂತ: ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.