ETV Bharat / state

ಬೆಂಗಳೂರು: ಗಾಂಧಿನಗರದ ಹೊಟೇಲ್ ಟೆರೇಸ್​​ನಲ್ಲಿ ಅಗ್ನಿ ಅವಘಡ - ಬೆಂಗಳೂರಿನ ಸುಖ ಸಾಗರ್ ಹೋಟೆಲ್​ನಲ್ಲಿ ಅಗ್ನಿ ಅವಘಡ

ಗಾಂಧಿನಗರದಲ್ಲಿರುವ ಹೊಟೇಲೊಂದರ ಟೆರೇಸ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುದೈವವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Fire incident in Bangalore Sukh sagar hotel
ಬೆಂಗಳೂರಿನ ಸುಖ ಸಾಗರ್ ಹೋಟೆಲ್​ನಲ್ಲಿ ಅಗ್ನಿ ಅವಘಡ
author img

By

Published : Mar 9, 2022, 4:02 PM IST

Updated : Mar 9, 2022, 5:10 PM IST

ಬೆಂಗಳೂರು: ಗಾಂಧಿನಗರದ‌ ಸುಖ ಸಾಗರ್ ಹೊಟೇಲ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಮಧ್ಯಾಹ್ನ 2:45ರ ಸುಮಾರಿಗೆ ಹೊಟೇಲ್ ಇರುವ ಕಟ್ಟಡದ​ ಟೆರೇಸ್​​​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್​​​​ನಿಂದ ಅವಘಡ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಈ ವೇಳೆ ಅಗ್ನಿಶಾಮಕ ದಳದ ಆರ್​​​ಎಫ್​ಒ ತಿರುಮಲೇಶ್ ‌ಮಾತನಾಡಿ, 'ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಆದರೆ ಹೊಟೇಲ್​ನಲ್ಲಿ ಬೆಂಕಿ ನಂದಿಸುವ ಯಂತ್ರಗಳು ಕೆಲಸ ಮಾಡ್ತಿಲ್ಲ. ಮುನ್ನೆಚ್ಚರಿಕಾ ನಿಯಮಗಳನ್ನು ನಿರ್ಲಕ್ಷಿಸಿದ್ದಾರೆ. ಈ ಕುರಿತಂತೆ ನಮ್ಮ ಇಲಾಖೆಯ ಗಮನಕ್ಕೆ ತಂದು ಕಾನೂನು ಕ್ರಮ ಕೈಗೊಳ್ಳುತ್ತೇವೆ' ಎಂದರು.

ಇದನ್ನೂ ಓದಿ: ಮೃತ ನವೀನ್​ ನಿವಾಸಕ್ಕೆ ಸ್ನೇಹಿತರು ಭೇಟಿ : ಕುಟುಂಬಸ್ಥರಿಗೆ ಸಾಂತ್ವನ

Last Updated : Mar 9, 2022, 5:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.