ETV Bharat / state

ನಂದಿನಿ ತುಪ್ಪ ಕಲಬೆರಕೆ ಪ್ರಕರಣ: ಬೆಂಗಳೂರಿನ‌ ಸಗಟು ಮಾರಾಟ ಏಜೆನ್ಸಿ ವಿರುದ್ಧ ಎಫ್ಐಆರ್ - ಕೆಎಂಎಫ್

ಕಲಬೆರಕೆ ನಂದಿನಿ ತುಪ್ಪ ತಯಾರಿಕಾ ಜಾಲ ಪತ್ತೆ ಪ್ರಕರಣ ಸಂಬಂಧ ಬೆಂಗಳೂರಿನ ಸಗಟು ಮಾರಾಟ ಏಜೆನ್ಸಿಯೊಂದರ ವಿರುದ್ಧ ಎಫ್ಐಆರ್ ದಾಖಲಾಗಿದೆ.

adulterated nandini ghee selling case
ನಂದಿನಿ ತುಪ್ಪ ಕಲಬೆರಕೆ ಪ್ರಕರಣ
author img

By

Published : Jan 9, 2022, 8:21 AM IST

ಬೆಂಗಳೂರು: ಮೈಸೂರಿನಲ್ಲಿ ಕಲಬೆರಕೆ ನಂದಿನಿ ತುಪ್ಪ ತಯಾರಿಕಾ ಜಾಲ ಪತ್ತೆ ಪ್ರಕರಣ ಸಂಬಂಧ ಕಲಬೆರಕೆ ಜಾಲಕ್ಕೆ ತುಪ್ಪ ಪೂರೈಸಿದ್ದ ಬೆಂಗಳೂರಿನ ಸಗಟು ಮಾರಾಟ ಏಜೆನ್ಸಿಯೊಂದರ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇತ್ತೀಚೆಗೆ ಮೈಸೂರಿನಲ್ಲಿ ಕಲಬೆರಕೆ ತುಪ್ಪ ತಯಾರಿಕಾ ಜಾಲ ಪತ್ತೆಯಾದ ಬಳಿಕ ಕೆಎಂಎಫ್ ಎಚ್ಚೆತ್ತುಕೊಂಡಿದ್ದು, ಪ್ರಕರಣದ ಪರಿಶೀಲನೆಗಾಗಿ ಪ್ರತ್ಯೇಕ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿದೆ.

ಇದನ್ನೂ ಓದಿ: ಭಾರತದ ಮೊದಲ ಪುಂಗನೂರು ತಳಿಯ ಐವಿಎಫ್ ಕರು ಜನನ

ಈ ವೇಳೆ ಬೆಂಗಳೂರು ನಗರದ ಹಾಗೂ ಹೊರವಲಯದಲ್ಲಿ ಕಲಬೆರಕೆ ನಡೆಸುತ್ತಿರುವ ಪ್ರಕರಣಗಳು ಪತ್ತೆಯಾಗಿದ್ದವು. ಕಲಬೆರಕೆ ಅಡ್ಡೆಗಳಿಗೆ ಬೆಂಗಳೂರಿನ ಸಗಟು ಮಾರಾಟ ಏಜೆನ್ಸಿ ಶೃತಿ ಮಾರ್ಕೆಟಿಂಗ್ ಕಾರ್ಪೋರೇಷನ್​ನಿಂದ ತುಪ್ಪ ಪೂರೈಕೆ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಈ ಏಜೆನ್ಸಿ ವಿರುದ್ಧ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ಲಗ್ಗೆಯಿಟ್ಟ ಮೈಸೂರಿನ ನಂದಿನಿ ನಕಲಿ ತುಪ್ಪ : 270 ಕೇಸ್ ಕೆಎಂಎಫ್ ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.