ETV Bharat / state

ದ್ವೇಷ ಭಾವನೆ ಮೂಡಿಸುವ ಟ್ವೀಟ್ ಆರೋಪ: ರಾಜ್‌ದೀಪ್ ಸರ್ದೇಸಾಯಿ, ಶಶಿ ತರೂರ್​​​ ವಿರುದ್ಧ ಎಫ್ಐಆರ್​​​! - ದ್ವೇಷ ಭಾವನೆ ಮೂಡಿಸುವ ಟ್ವೀಟ್ ಆರೋಪ

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ ಒಬ್ಬ ವ್ಯಕ್ತಿ ಬಲಿಯಾಗಿದ್ದಾನೆ ಎಂದು ಏಳು ಜನರು ಸರಣಿ ಟ್ವೀಟ್ ಮಾಡಿದ್ದರು.

FIR against Rajdeep Sardesai and Shashi Tharoor
ರಾಜ್‌ದೀಪ್ ಸರ್ದೇಸಾಯಿ, ಶಶಿ ತರೂರ್​​​ ವಿರುದ್ಧ ಎಫ್ಐಆರ್
author img

By

Published : Jan 29, 2021, 8:58 PM IST

ಬೆಂಗಳೂರು: ರಾಷ್ಟ್ರೀಯ ಸಮಗ್ರತೆಗೆ ಹಾಗೂ ಧರ್ಮಗಳ ನಡುವೆ ದ್ವೇಷ ಭಾವನೆ ಉಂಟು ಮಾಡುವ ಟ್ವೀಟ್ ಹಾಕಿದ್ದಾರೆಂದು ಆರೋಪಿಸಿ ಖಾಸಗಿ ಸುದ್ದಿ ವಾಹಿನಿಯ ನಿರೂಪಕ ರಾಜ್‌ದೀಪ್ ಸರ್‌ದೇಸಾಯಿ ಹಾಗೂ ಸಂಸದ ಶಶಿ ತರೂರ್​​​ ಸೇರಿ ಏಳು ಜನರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ.

ಬಿ.ಎಸ್.ರಾಕೇಶ್ ಎಂಬುವವರು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ, ಸಂಸದ ಶಶಿ ತರೂರ್, ಮೃಣಲ್ ಪಾಂಡೆ, ಜಾರ್ ಆಘಾ, ಪರೇಶ್ ನಾಥ್, ಅನಂತ್ ನಾಥ್ ಹಾಗೂ ವಿನೋದ್ ಕೆ.ಜೋಸ್ ವಿರುದ್ಧ ಐಪಿಸಿ ಸೆಕ್ಷನ್ 153ಎ, 506, 34, 504, 120ಬಿ, 124ಎ, 153ಬಿ, 295ಎ, 298, 505(2)ರಡಿ ಪ್ರಕರಣ ದಾಖಲಾಗಿದೆ.

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ ಒಬ್ಬ ವ್ಯಕ್ತಿ ಬಲಿಯಾಗಿದ್ದಾನೆ ಎಂದು ಇವರೆಲ್ಲಾ ಸರಣಿ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗಳು ದ್ವೇಷ ಮತ್ತು ರಾಷ್ಟ್ರೀಯ ಸಮಗ್ರತೆ ಹಾಗೂ ಧರ್ಮಗಳ ನಡುವೆ ದ್ವೇಷ ಭಾವನೆ ಉಂಟು ಮಾಡುತ್ತಿವೆ. ಆದ್ದರಿಂದ ಈ ರೀತಿ ಹೇಳಿಕೆ ಹಾಕಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.