ETV Bharat / state

Finger Print ನೀಡಿದ ಸುಳಿವು.. 15 ವರ್ಷದ ಬಳಿಕ ಖಾಕಿ ಬಲೆಗೆ ಬಿದ್ದರು ಆರೋಪಿಗಳು.. ರೋಚಕ ಕೊಲೆ ಕೇಸ್ ಸುತ್ತ..

author img

By

Published : Jul 9, 2021, 1:20 PM IST

ಶಾಪ್​ನಲ್ಲಿ ಆಟ ಆಡಲು ಪದೇಪದೆ ಹಣ ಇರಲಿಲ್ಲ. ಹಾಗಾಗಿ, ಶಶಿಧರನ್ ಶಾಪ್​ನಿಂದ ಸಾಫ್ಟ್ ಕಾಪಿ ಡೌನ್​ಲೋಡ್ ಮಾಡಿಕೊಳ್ಳೋಕೆ ಮುಂದಾಗಿದ್ದರು. 2006ರ ನವೆಂಬರ್ 5ರಂದು ಆರೋಪಿಗಳಿಗೆ ಶಶಿಧರನ್ ಗೇಮ್​ನ ಸಾಫ್ಟ್ ಕಾಪಿ ಡೌನ್​ಲೋಡ್ ಮಾಡಿಕೊಳ್ಳಲು ಬಿಟ್ಟಿರಲಿಲ್ಲ..

Finger Print
Finger Print

ಬೆಂಗಳೂರು : ಅದು ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಭೀಕರ ಕೊಲೆ. ಆರೋಪಿಗಳ ಪತ್ತೆಗಾಗಿ ಮೂರು ವರ್ಷ ಶೋಧ ನಡೆಸಿ, ಕಿಡಿಗೇಡಿಗಳು ಸಿಗಲಿಲ್ಲ ಅನ್ನೋ ಕಾರಣಕ್ಕೆ ಕೇಸ್ ಕ್ಲೋಸ್ ಮಾಡಲಾಗಿತ್ತು. ಇದಾದ 15 ವರ್ಷಗಳ ಬಳಿಕ ಹಂತಕರು ಸಿಕ್ಕಿಬಿದ್ದಿದ್ದಾರೆ. ಆ ರಕ್ಕಸರು ಸಿಕ್ಕಿ ಬೀಳೋಕೆ ಕಾರಣ ಫಿಂಗರ್​ ಪ್ರಿಂಟ್​.

ಇತ್ತೀಚೆಗೆ ಪ್ರವಾಸಿಗರ ಸೋಗಿನಲ್ಲಿ ನಂದಿ ಗಿರಿಧಾಮದಲ್ಲಿ ದರೋಡೆಗೆ ಯತ್ನಿಸಿದ್ದ ಪ್ರಕರಣದಡಿ ಚಿಕ್ಕಬಳ್ಳಾಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಫಿಂಗರ್ ಪ್ರಿಂಟ್ ತೆಗೆದುಕೊಂಡಾಗ 15 ವರ್ಷಗಳ ಹಿಂದೆ ಶಶಿಧರ್ ಎಂಬುವರ ಕೊಲೆ ಕೇಸ್​​ನಲ್ಲಿ ತೆಗೆದುಕೊಂಡಿದ್ದ ಫಿಂಗರ್ ಪ್ರಿಂಟ್ ಹೋಲಿಕೆ ಕಂಡು ಬಂದಿದೆ. ಈ ವೇಳೆ ಚಿಕ್ಕಬಳ್ಳಾಪುರ ಪೊಲೀಸರು, ಯಶವಂತಪುರ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣದ ಮಾಹಿತಿ ತಿಳಿಸಿದ ಉತ್ತರ ವಿಭಾಗದ ಡಿಸಿಪಿ ಧರ್ಮೆಂದ್ರ ಕುಮಾರ್ ಮೀನಾ
ಉದ್ಯಮಿ ಶಶಿಧರನ್ ಹತ್ಯೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ವಿಭಾಗದ ಡಿಸಿಪಿ ಧರ್ಮೆಂದ್ರ ಕುಮಾರ್ ಮೀನಾ, ಬೆಂಗಳೂರಿನ ಯಶವಂತಪುರದ ಬಿಕೆ ನಗರದ 11ನೇ ಕ್ರಾಸ್​​ನಲ್ಲಿ ಶಶಿಧರನ್, ತಮ್ಮ ಮನೆಯಲ್ಲಿಯೇ ವಿಡಿಯೋ ಗೇಮ್ ಸೆಂಟರ್ ಬ್ಯುಸಿನೆಸ್ ನಡೆಸುತ್ತಿದ್ದರು. ಪ್ರತಿದಿನ ನೂರಾರು ಶಾಲಾ ಮಕ್ಕಳು, ಯುವಕರು ಇಲ್ಲಿ ವಿಡಿಯೋ ಗೇಮ್ ಆಡೋಕೆ ಬರುತ್ತಿದ್ದರು. ಹೀಗಿದ್ದ ಶಶಿಧರನ್ 2006ರ ನವೆಂಬರ್ 5ರಂದು ನಿಗೂಢವಾಗಿ ಹತ್ಯೆಯಾಗಿದ್ರು. ಕೈ-ಕಾಲುಗಳನ್ನು ಕಟ್ಟಿ, ಬಾಯಿಗೆ ಟೇಪ್ ಅಂಟಿಸಿ ಕೊಲೆ ಮಾಡಲಾಗಿತ್ತು. ಸ್ಥಳಕ್ಕೆ ಬಂದ ಯಶವಂತಪುರ ಪೊಲೀಸರು ಕ್ರೈಂ ಸೀನ್ ಹಾಳಾಗದಂತೆ ರಕ್ಷಿಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು ಎಂದಿದ್ದಾರೆ.

ಈ ಸಾಕ್ಷಿಗಳ ಪೈಕಿ ಪ್ರಮುಖವಾಗಿ, ಟೇಪ್ ಮೇಲೆ ಹಂತಕರ ಫಿಂಗರ್ ಪ್ರಿಂಟ್ ಇರೋದನ್ನು ಪತ್ತೆ ಹಚ್ಚಿ ಅದನ್ನು ಆಟೋಮ್ಯಾಟಿಕ್ ಫಿಂಗರ್ ಪ್ರಿವೆಂಟ್ ಐಡೆಂಟಿಫೈಯ್ಡ್ ಸಿಸ್ಟಮ್​ನಲ್ಲಿ ದಾಖಲಿಸಲಾಗಿತ್ತು. ಆದರೂ ಆರೋಪಿಗಳು ಪತ್ತೆಯಾಗದ ಹಿನ್ನೆಲೆ, 2006ರಲ್ಲಿ ಪೊಲೀಸರು ಕೋರ್ಟ್‌ಗೆ 'ಸಿ' ರಿಪೋರ್ಟ್ ಸಲ್ಲಿಸಿದ್ದರು.

ಬೇರೊಂದು ಕೇಸ್ ಫಿಂಗರ್ ಪ್ರಿಂಟ್ ಪರಿಶೀಲನೆ ವೇಳೆ ಲಾಕ್..!
2010ರ ಮೇನಲ್ಲಿ‌ ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ನಾಲ್ವರು ದುಷ್ಕರ್ಮಿಗಳಿಂದ ಸುಲಿಗೆ ನಡೆದಿತ್ತು. ಈ ಕೇಸ್​​ನಲ್ಲಿ ಬಂಧಿತರಾಗಿದ್ದ ಆರೋಪಿಗಳ ಪೈಕಿ ಜೈ ವೀರು ಪ್ರಮುಖನಾಗಿದ್ದ. ಹೀಗಾಗಿ, ಪೊಲೀಸರು ಆತನ ಫಿಂಗರ್ ಪ್ರಿಂಟ್ ಸಂಗ್ರಹಿಸಿಟ್ಟುಕೊಂಡಿದ್ದರು. ಆದರೆ, ಇತ್ತೀಚೆಗೆ ಚಿಕ್ಕಬಳ್ಳಾಪುರದ ಬೆರಳಚ್ಚು ಘಟಕದಲ್ಲಿ‌ ಕೆಲ ಮೋಸ್ಟ್ ವಾಂಟೆಡ್​​ಗಳ ಫಿಂಗರ್ ಪ್ರಿಂಟ್ ಪರಿಶೀಲಿಸಲಾಗುತ್ತಿತ್ತು.

ಆಗ ಅಲ್ಲಿದ್ದ ಆರೋಪಿ ಜೈವೀರು ಫಿಂಗರ್ ಪ್ರಿಂಟ್​​ಗೂ, ಯಶವಂತಪುರದ ಶಶಿಧರನ್ ಕೊಲೆ ಕೇಸ್​ನಲ್ಲಿ ಸಂಗ್ರಹಿಸಲಾಗಿದ್ದ ಫಿಂಗರ್ ಪ್ರಿಂಟ್​ಗೂ ಮ್ಯಾಚ್ ಆಗಿತ್ತು. ಕೂಡಲೇ ಅಲರ್ಟ್ ಆದ ಚಿಕ್ಕಬಳ್ಳಾಪುರ ಪೊಲೀಸರು, ಯಶವಂತಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಯಶವಂತಪುರ ಪೊಲೀಸರು ಆರೋಪಿ ವೀರುನನ್ನು ವಶಕ್ಕೆ ಪಡೆದು, ಶಶಿಧರನ್ ಕೊಲೆ ಕೇಸ್ ಸಂಬಂಧ ವಿಚಾರಣೆ ನಡೆಸಿದಾಗ, ಸತ್ಯ ಹೊರ ಬಿದ್ದಿದೆ.

ವಿಡಿಯೋ ಗೇಮ್​ಗಾಗಿ ಹತ್ಯೆ
ಪ್ರಕರಣದಲ್ಲಿ ಆರೋಪಿ ವೀರು ಜೊತೆ ಅವಿನಾಶ್ ಹಾಗೂ ಮೋಸಿನ್ ಖಾನ್ ಎಂಬುವರನ್ನೂ ಬಂಧಿಸಲಾಗಿದೆ. ಈ ಮೂವರು 2006ರಲ್ಲಿ ಸ್ಕೂಲ್ ಸ್ಟೂಡೆಂಟ್ಸ್ ಆಗಿದ್ದರು. ವಿಡಿಯೋ ಗೇಮ್ ಹುಚ್ಚು ಬೆಳೆಸಿಕೊಂಡಿದ್ದರು. ಹತ್ಯೆಯಾದ ಶಶಿಧರನ್ ಶಾಪ್​ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದರು. ಈ ಮಧ್ಯೆ ಆರೋಪಿಗಳ ಪೈಕಿ ಓರ್ವನ ಮನೆಯಲ್ಲಿ ಕಂಪ್ಯೂಟರ್ ಇತ್ತು.

ಶಾಪ್​ನಲ್ಲಿ ಆಟ ಆಡಲು ಪದೇಪದೆ ಹಣ ಇರಲಿಲ್ಲ. ಹಾಗಾಗಿ, ಶಶಿಧರನ್ ಶಾಪ್​ನಿಂದ ಸಾಫ್ಟ್ ಕಾಪಿ ಡೌನ್​ಲೋಡ್ ಮಾಡಿಕೊಳ್ಳೋಕೆ ಮುಂದಾಗಿದ್ದರು. 2006ರ ನವೆಂಬರ್ 5ರಂದು ಆರೋಪಿಗಳಿಗೆ ಶಶಿಧರನ್ ಗೇಮ್​ನ ಸಾಫ್ಟ್ ಕಾಪಿ ಡೌನ್​ಲೋಡ್ ಮಾಡಿಕೊಳ್ಳಲು ಬಿಟ್ಟಿರಲಿಲ್ಲ.

ಇದೇ ಕಾರಣಕ್ಕೆ, ಮೂವರು ಸೇರಿ ಮೊದಲೇ ಪ್ಲ್ಯಾನ್ ಮಾಡಿದಂತೆ ತಾವು ಮನೆಯಿಂದ ತಂದಿದ್ದ ಹಗ್ಗದಿಂದ ಶಶಿಧರನ್ ಕಾಲು ಕಟ್ಟಿ, ಮುಖಕ್ಕೆ ಟೇಪ್ ಅಂಟಿಸಿ ಹತ್ಯೆಗೈದಿದ್ದರು ಎಂಬುವುದು ತನಿಖೆ ವೇಳೆ ಗೊತ್ತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.