ETV Bharat / state

ರೋಗದ ತೀವ್ರತೆ ಹೆಚ್ಚಿರುವ ಕಡೆಗೆ ಹೆಚ್ಚು ಲಸಿಕೆ ಪೂರೈಕೆ: ನಿರ್ಮಲಾ ಸೀತಾರಾಮನ್ - ಜಿಎಸ್​ಟಿ ಪರಿಹಾರದ ಬಗ್ಗೆ ಹಣಕಾಸು ಸಚಿವೆ ಪ್ರತಿಕ್ರಿಯೆ

ಕೊರೊನಾ ರೋಗದ ತೀವ್ರತೆ ಹೆಚ್ಚು ಇರುವ ಕಡೆ ಹೆಚ್ಚು ಲಸಿಕೆ ಪೂರೈಕೆ ಮಾಡಲಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬೆಂಗಳೂರಿನಲ್ಲಿ ತಿಳಿಸಿದರು.

supply
ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ
author img

By

Published : Jul 1, 2021, 9:53 PM IST

ಯಲಹಂಕ: ಕೊರೊನಾ ರೋಗದ ತೀವ್ರತೆ ಹೆಚ್ಚಿರುವ ಕಡೆ ಹೆಚ್ಚು ಲಸಿಕೆ ಪೂರೈಕೆ ಮಾಡಲಾಗುತ್ತಿದೆ. ದೇಶದಲ್ಲಿ ಬೇಡಿಕೆಗೆ ಅನುಗುಣವಾಗಿ ಲಸಿಕೆ ಪೂರೈಕೆ ಆಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ

ಬೋಯಿಂಗ್‌ ಸಂಸ್ಥೆಯು, 'ಸೆಲ್ಕೋ', 'ಡಾಕ್ಟರ್ಸ್‌ ಫಾರ್‌ ಯು' ಸಹಯೋಗದೊಂದಿಗೆ ಯಲಹಂಕದಲ್ಲಿ 100 ಹಾಸಿಗೆಗಳ ಅತ್ಯಾಧುನಿಕ ಕೋವಿಡ್‌-ಕೇರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿದ್ದು, ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ ನೀಡಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಹಿಮ್ಮೆಟಿಸಲು ಸಹಾಯ ಮಾಡುವಂತೆ ಪ್ರಧಾನಿ ಮೋದಿಯವರು ಸ್ವಯಂ ಸೇವಾ ಸಂಘಗಳಿಗೆ ಮನವಿ ಮಾಡಿದ್ದರು. ಇದಕ್ಕೆ ದೇಶದಾದ್ಯಂತ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಕೊರೊನಾ ಚಿಕಿತ್ಸೆಗಾಗಿ ಭಾರಿ ಪ್ರಮಾಣದ ಹಣ ಹರಿದು ಬಂದಿದೆ ಎಂದು ತಿಳಿಸಿದರು.

ಸಾಕಷ್ಟು ಜನ ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸುತ್ತಿದ್ದಾರೆ. ಕೊರೊನಾ ಸೋಂಕಿತರಿಗೆ ಬೇಕಾದ ಮೂಲಭೂತ ಸೌಕರ್ಯಗಳಿಗೆ ಸಹಕಾರ ನೀಡುತ್ತಿದ್ದಾರೆ. ಕಲ್ಬುರ್ಗಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸ್ವಯಂಸೇವಕರು ಹೋಗಿ ದುಡಿಯುತ್ತಿದ್ದಾರೆ, ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಬರುವ ಸಾಧ್ಯತೆ ಇದ್ದು ಬೋಯಿಂಗ್‌ ಸಂಸ್ಥೆಯ ಡಾಕ್ಟರ್ಸ್ ಫಾರ್ ಯೂ ಆಸ್ಪತ್ರೆಯಲ್ಲಿ ವಿಶೇಷವಾದ ಪ್ರತ್ಯೇಕ ವಾರ್ಡ್ ಮಾಡಿರುವುದು ಖುಷಿ ತಂದಿದೆ ಎಂದರು.

ಹೈಟೆಕ್ ಆಸ್ಪತ್ರೆಗಳಲ್ಲಿ ಇರಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಈ ಆಸ್ಪತ್ರೆ ಹೊಂದಿದೆ. ಆಸ್ಪತ್ರೆಯ ಲೋಕಾರ್ಪಣೆಗಾಗಿ ಸದನಾಂದಗೌಡರು ನನಗಾಗಿ ಕಾಯವುದು ಬೇಡ ಬೇಗನೆ ಲೋಕಾರ್ಪಣೆ ಮಾಡಲಿ ಎಂದರು. ಇದೇ ಮಾದರಿ ಆಸ್ಪತ್ರೆಗಳನ್ನ ದೇಶದ ವಿವಿಧ ಭಾಗಗಳಲ್ಲಿ ಮಾಡುವಂತೆ ಕೇಂದ್ರ ಸರ್ಕಾರಕ್ಕೂ ಸಲಹೆ ನೀಡುವೆ ಎಂದು ಹೇಳಿದ್ರು.

7 ದಿನಕ್ಕೆ ದಾಸ್ತಾನು ಮಾಡುವಷ್ಟು ಲಸಿಕೆ:

ರಾಜ್ಯಗಳಿಗೆ 7 ದಿನಕ್ಕೆ ದಾಸ್ತಾನು ಮಾಡುವಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡುತ್ತಿದೆ. ರಾಜ್ಯ ಸರ್ಕಾರಗಳು ಹೇಗೆ ಸದುಪಯೋಗ ಪಡಿಸಿಕೊಳ್ಳುತ್ತವೋ ಅದಕ್ಕನುಗುಣವಾಗಿ ಪೂರೈಕೆ ಮಾಡಲಾಗುತ್ತೆ, ಎಲ್ಲಾ ರಾಜ್ಯಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿವೆ ಎಂದರು. ಇದೇ ವೇಳೆ ಮಾಧ್ಯಮ ಮೂಲಕ ಮನವಿ ಮಾಡುವೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದರು.

ವಿಶೇಷ ಕಲಾಪದಲ್ಲಿ ರಾಜ್ಯಗಳ ಜಿಎಸ್​ಟಿ ಪರಿಹಾರದ ಬಗ್ಗೆಯೇ ಚರ್ಚೆ:

ರಾಜ್ಯಕ್ಕೆ ಬಾಕಿ ಇರುವ ಜಿಎಸ್​ಟಿ ಪರಿಹಾರದ ಬಗ್ಗೆ ಪ್ರತಿಕ್ರಿಯಿಸುತ್ತಾ, ಬಾಕಿ ಇರುವ ಜಿಎಸ್​ಟಿ ಪರಿಹಾರ ಕೊಡುವ ಬಗ್ಗೆ ಕ್ರಮ ಕೈಗೊಂಡಿದ್ದೇವೆ. ಕಳೆದ ವರ್ಷದಷ್ಟೇ ಈ ವರ್ಷವೂ ಜಿಎಸ್​ಟಿ ಪರಿಹಾರ ಸಿಗಲಿದೆ, ಎಷ್ಟು ಪ್ರಮಾಣ ಅಂತ ನಾನು ಹೇಳುವುದಕ್ಕೆ ಆಗುವುದಿಲ್ಲ. ಕೇಂದ್ರವು ಸಾಲ ಪಡೆದು ರಾಜ್ಯಗಳಿಗೆ ಜಿಎಸ್​ಟಿ ಪರಿಹಾರ ಕೊಡುತ್ತಿದೆ, ಈ ಪ್ರಕ್ರಿಯೆ ಈ ವರ್ಷವೂ ಇದೇ ರೀತಿ ಮುಂದುವರೆಯಲಿದೆ. ಜಿಎಸ್​ಟಿ ಜಾರಿಯಾಗಿ ನಾಲ್ಕು ವರ್ಷ ಆಗಿದೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಜಿಎಸ್​ಟಿ ಪರಿಹಾರ ಕುರಿತು ವಿಶೇಷ ಕಲಾಪ ಇರಲಿದೆ, ವಿಶೇಷ ಕಲಾಪದಲ್ಲಿ ರಾಜ್ಯಗಳ ಜಿಎಸ್​ಟಿ ಪರಿಹಾರದ ಬಗ್ಗೆಯೇ ಚರ್ಚೆ ನಡೆಸಲಾಗುತ್ತದೆ ಎಂದರು.

ಇನ್ನು ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಗೊಂದಲ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ವಿತ್ತ ಸಚಿವೆ​, ರಾಜ್ಯದಲ್ಲಿ ಬಿಜೆಪಿ ಉತ್ತಮ ಪಕ್ಷವಾಗಿದೆ, ಯಾವುದೇ ಗೊಂದಲಗಳಿಲ್ಲ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.