ಬೆಂಗಳೂರು : ನೆರೆ ಸಂತ್ರಸ್ತರ ನೆರವಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಮುಂದಾಗಿದೆ. ನೆರೆ ಸಂತ್ರಸ್ತರಿಗೆ 25 ಲಕ್ಷ ರೂ. ನೆರವು ನೀಡಲು ನಿರ್ಧರಿಸಿದೆ.
ಸಂತ್ರಸ್ತರಿಗೆ ನೆರವು ನೀಡುವ ಸಲುವಾಗಿ ನಿನ್ನೆ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್ ಪದಾಧಿಕಾರಿಗಳ ಜೊತೆ ಹಾಗೂ ಮಾಜಿ ಅಧ್ಯಕ್ಷರುಗಳ ಜೊತೆ ಸಭೆ ನಡೆಸಿ ನೆರೆ ಸಂತ್ರಸ್ತರಿಗೆ ₹ 25 ಲಕ್ಷ ನೆರವು ನೀಡಲು ನಿರ್ಧರಿಸಿದ್ದಾರೆ. ಸೋಮವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ. ಚೆಕ್ ನೀಡಲು ನಿರ್ಧರಿಸಿರುವುದಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್ ತಿಳಿಸಿದರು.
ಅಲ್ಲದೆ ಅಗತ್ಯ ಬಿದ್ದರೆ ವಾಣಿಜ್ಯ ಮಂಡಳಿ ಕಡೆಯಿಂದ ಒಂದು ತಂಡವನ್ನು ಉತ್ತರಕರ್ನಾಟಕ್ಕೆ ಕಳುಹಿಸಿ ಅವರಿಗೆ ಹೆಚ್ಚಿನ ನೆರವು ನೀಡುವುದಕ್ಕಾಗಿಯೇ ಕ್ರಮಕೈಗೊಳ್ಳಲಾಗುವುದು ಎಂದು ಜೈರಾಜ್ ತಿಳಿಸಿದರು.