ETV Bharat / state

ಮದ್ಯದ ವಿಚಾರಕ್ಕೆ ಗಲಾಟೆ.. ತಲೆಗೆ ಬಾಟಲಿಯಿಂದ ಹೊಡೆದು ಸ್ನೇಹಿತನನ್ನೇ ಕೊಂದ್ರು - etv bharat kannada

ಮಧ್ಯರಾತ್ರಿ ಎಣ್ಣೆ ಪಾರ್ಟಿ- ಸ್ನೇಹಿತರ ನಡುವೆ ಗಲಾಟೆ- ಓರ್ವನ ಕೊಲೆಯಲ್ಲಿ ಅಂತ್ಯ

fight-between-friends-ends-in-murder-at-bengaluru
ಮದ್ಯದ ವಿಚಾರಕ್ಕೆ ಗಲಾಟೆ.. ತಲೆಗೆ ಬಾಟಲಿಯಿಂದ ಹೊಡೆದು ಸ್ನೇಹಿತನನ್ನೇ ಕೊಂದ್ರು
author img

By

Published : Jul 28, 2022, 12:22 PM IST

ಬೆಂಗಳೂರು: ಮದ್ಯದ ವಿಚಾರಕ್ಕೆ ಸ್ನೇಹಿತರ ನಡುವೆ ಆರಂಭವಾದ ಗಲಾಟೆ ಓರ್ವನ ಹತ್ಯೆಯಲ್ಲಿ ಅಂತ್ಯವಾಗಿರುವ ಪ್ರಕರಣ ತಡರಾತ್ರಿ ನಗರದ ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ನಡೆದಿದೆ. ಪ್ರಶಾಂತ್(30) ಎಂಬಾತ ಕೊಲೆಯಾದ ವ್ಯಕ್ತಿಯಾಗಿದ್ದಾನೆ.

fight-between-friends-ends-in-murder-at-bengaluru
ಕೊಲೆಯಾದ ಪ್ರಶಾಂತ್

ಬುಧವಾರ ತಡರಾತ್ರಿ ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ಪ್ರಶಾಂತ್ ಮತ್ತು ಆತನ ಸ್ನೇಹಿತನ ನಡುವೆ ಮದ್ಯದ ವಿಚಾರಕ್ಕೆ ಜಗಳ ಆರಂಭವಾಗಿದೆ. ಈ ಜಗಳ ತಾರಕಕ್ಕೇರಿದ್ದು, ಸ್ನೇಹಿತರೇ ಪ್ರಶಾಂತ್​ ತಲೆಗೆ ಬಾಟಲಿಯಿಂದ ಹಲ್ಲೆಗೈದಿದ್ದಾರೆ ಎನ್ನಲಾಗ್ತಿದೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆ ಸಂಬಂಧ ಸಿಟಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 'ನಮ್ಮನ್ನು ಹುಡುಕಬೇಡಿ...' ಪೋಷಕರಿಗೆ ಕರೆ ಮಾಡಿ ವಿದ್ಯಾರ್ಥಿನಿಯರು‌ ನಾಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.