ಬೆಂಗಳೂರು : ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಗ್ಗೆ ಪಬ್ಲಿಕ್ನಿಂದಲೇ ಫೀಡ್ ಬ್ಯಾಕ್ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಅಂದ ಹಾಗೇ, ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಿ ವರದಿ ನೀಡಲು ರಾಜ್ಯ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಎಂ ಆರ್ ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದೆ.
ಹೀಗಾಗಿ, ಈ ಸಮಿತಿಯು ಇದೀಗ ಸಂಸ್ಥೆಗಳ ಸೇವೆಗಳ ಬಗ್ಗೆ ಸಾರ್ವಜನಿಕರಿಂದ ಮತ್ತು ಪ್ರಯಾಣಿಕರಿಂದಲೇ ಸಲಹೆ/ಅಭಿಪ್ರಾಯಗಳನ್ನು ಕೋರಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, (BMTC) ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC)ಗಳ ಸೇವೆಗೆ ಸಂಬಂಧಿಸಿದಂತೆ ಅಭಿಪ್ರಾಯಗಳನ್ನು ಮತ್ತು ಸೇವೆಗಳನ್ನು ಉತ್ತಮ ಪಡಿಸುವ ಬಗ್ಗೆ ಸಲಹೆಗಳನ್ನು ಕೇಳಿದೆ.
ಜನವರಿ 31ರೊಳಗೆ ಸಾರ್ವಜನಿಕರು ಇ-ಮೇಲ್ cpro@ksrt.org ಮೂಲಕ ಅಥವಾ ಅಂಚೆಯ ಮೂಲಕ (ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ, ಕೆ ಹೆಚ್ ರಸ್ತೆ, ಬೆಂಗಳೂರು-560027) ಅವರಿಗೆ ಕಳುಹಿಸಲು ಕೋರಿದೆ.
ಓದಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ.. ಶುಲ್ಕ ಪಾವತಿಸಲು ದಿನಾಂಕ ವಿಸ್ತರಣೆ ಮಾಡಿದ ಪಿಯು ಬೋರ್ಡ್..